ಡೀಸೆಲ್ ಕಾರು ಗ್ರಾಹಕರಿಗೆ ಬರೆ ಎಳೆಯಲು ಸಿದ್ಧತೆ

ದುಬಾರಿ ವಾಹನಗಳನ್ನು ಹೊಂದಿರುವ ಶ್ರೀಮಂತ ಗ್ರಾಹಕರಿಗೆ, ಎಸ್‌ಯುವಿ ಮತ್ತು ಡೀಸೆಲ್ ಕಾರು ಮಾಲೀಕರಿಗೆ ಅಬಕಾರಿ ಸುಂಕದ ಬರೆ ಎಳೆಯುವ ಕುರಿತು ಹಣಕಾಸು ಸಚಿವಾಲಯವು ಗಂಭೀರವಾಗಿ ಪರಿಶೀಲಿಸುತ್ತಿದೆ.

"ಅಬಕಾರಿ ಸುಂಕ ಹೆಚ್ಚಳ ಪ್ರಸ್ತಾಪದ ಕುರಿತು ಹಣಕಾಸು ಸಚಿವಾಲಯವು ಪರಿಶೀಲಿಸುತ್ತಿದ್ದು, ಹಲವು ಸುತ್ತಿನ ಮಾತುಕತೆ ನಂತರ ಸರಕಾರವು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ" ಎಂದು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ(ಸಿಬಿಇಸಿ) ವಿಭಾಗದ ಚೇರ್ಮನ್ ಎಸ್ ಕೆ ಗೋಯೆಲ್ ಹೇಳಿದ್ದಾರೆ. ಅವರು ಸಿಬಿಇಸಿ ಪ್ರಧಾನ ನಿರ್ದೇಶಕರ ಮತ್ತು ಮುಖ್ಯ ಆಯುಕ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಬ್ಸಿಡಿ ಇರುವ ಡೀಸೆಲನ್ನು ಖಾಸಗಿ ವಾಹನ ಮಾಲಿಕರು ಬಳಸುತ್ತಿರುವುದರಿಂದ ಡೀಸೆಲ್ ಅನುಭೋಗ ಹೆಚ್ಚಾಗುತ್ತಿದೆ. ಹೀಗಾಗಿ ಡೀಸೆಲ್ ಕಾರುಗಳ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಕಳುಹಿಸಿತ್ತು.

ಇತ್ತೀಚೆಗೆ ಪೆಟ್ರೋಲ್ ದರವೂ ಅತ್ಯಧಿಕ ಅಂದರೆ, ಸುಮಾರು 7.5 ರುಪಾಯಿಯಷ್ಟು ಏರಿಕೆ ಕಂಡಿತ್ತು. ಆದರೆ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಡೀಸೆಲ್ ದರ ಪರಿಷ್ಕರಣೆ ಕುರಿತು ಸರಕಾರವೂ ಗಂಭೀರವಾಗಿ ಪರಿಶೀಲಿಸುತಿದೆ.

"ಪ್ರಸ್ತಾಪಿತ ಡೀಸೆಲ್ ತೆರಿಗೆಗೆ ಅನುಮತಿ ಸಿಕ್ಕರೆ ಡೀಸೆಲ್ ಬಳಕೆಯಲ್ಲಿ ವ್ಯತ್ಯಾಸವಾಗಲಿದೆ. ಯಾಕೆಂದರೆ ಈಗ ಪೆಟ್ರೋಲಿಗಿಂತ ಡೀಸೆಲ್ ಅಗ್ಗವಾಗಿರುವುದರಿಂದ ಹೆಚ್ಚಿನ ಜನರು ಡೀಸೆಲ್ ಚಾಲಿತ ಕಾರು, ಎಸ್‌ಯುವಿ ಖರೀದಿಗೆ ಒತ್ತು ನೀಡುತ್ತಿದ್ದಾರೆ" ಎಂದು ಸಿಬಿಇಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಮಾರು 1,200 ಸಿಸಿಗಿಂತ ಕಡಿಮೆಯಿರುವ ಪೆಟ್ರೋಲ್ ಕಾರುಗಳಿಗೆ ಮತ್ತು 1,500 ಸಿಸಿವರೆಗಿರುವ ಡೀಸೆಲ್ ಕಾರುಗಳಿಗೆ ಶೇಕಡ 12ರಷ್ಟು ಅಬಕಾರಿ ಸುಂಕವಿದೆ. ಆದರೆ ಈ ವಾಹನಗಳ ಉದ್ದ ನಾಲ್ಕು ಮೀಟರಿಗಿಂತ ಉದ್ದವಾಗಿರಬಾರದು. ಸುಂಕ ತಪ್ಪಿಸಿಕೊಳ್ಳಲು ಕೆಲವು ಕಾರು ಕಂಪನಿಗಳು ಕಾರು ಗಾತ್ರ ಕಡಿಮೆ ಮಾಡಿಕೊಳ್ಳುತ್ತಿವೆ. ನಾಲ್ಕು ಮೀಟರಿಗಿಂತ ಉದ್ದವಾಗಿರುವ ಇದೇ ಸಿಸಿ ಕಾರುಗಳಿಗೆ ಶೇಕಡ 24ರಷ್ಟು ಅಬಕಾರಿ ಸುಂಕವಿದೆ.

ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳ ಉದ್ದ ನಾಲ್ಕು ಮೀಟರಿಗಿಂತ ಉದ್ದ ಮತ್ತು ಎಂಜಿನ್ ಸಾಮರ್ಥ್ಯವು ಕ್ರಮವಾಗಿ 1,200 ಸಿಸಿ ಮತ್ತು 1,500ಸಿಸಿಗಿಂತ ಅಧಿಕವಾಗಿದ್ದರೆ ಇಂತಹ ಕಾರುಗಳಿಗೆ ಶೇಕಡ 27ರಷ್ಟು ಅಬಕಾರಿ ಸುಂಕವಿದೆ.

ಹಣಕಾಸು ಸಚಿವಾಲಯ ಅಬಕಾರಿ ಸುಂಕ ಹೆಚ್ಚಳ ಪ್ರಸ್ತಾಪಕ್ಕೆ ಅಸ್ತು ಎಂದರೆ ಡೀಸೆಲ್ ಮತ್ತು ದುಬಾರಿ ವಾಹನಗಳ ಅಬಕಾರಿ ಸುಂಕ ಏರಿಕೆ ಕಾಣಲಿದೆ.

More from DriveSpark

Article Published On: Tuesday, June 5, 2012, 16:34 [IST]
English summary
Finance Ministry examining proposal of hike excise duty on Diesel Cars and SUVs. Central Board of Excise and Customs chairman SK Goel given clue about hike excise duty on diesel cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+