ಫೋರ್ಡ್ ಕ್ಲಾಸಿಕ್ ಟೈಟಾನಿಯಂ: 32.38 ಕಿ.ಮೀ. ಮೈಲೇಜ್
ಫೋರ್ಡ್ ಇಂಡಿಯಾ ಇತ್ತೀಚೆಗೆ ಕ್ಲಾಸಿಕ್ ಸರಣಿಯ(ಹಳೆಯ ಫಿಯೆಸ್ಟಾ) ನೂತನ ಆವೃತ್ತಿಯನ್ನು ಪರಿಚಯಿಸಿತ್ತು. ನೂತನ ಫೋರ್ಡ್ ಕ್ಲಾಸಿಕ್ ಟೈಟಾನಿಯಂ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದೀಗ ಈ ಕಾರು ಮೈಲೇಜಿನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
ಫೋರ್ಡ್ ಕ್ಲಾಸಿಕ್ ಟೈಟಾನಿಯಂ ಡೀಸೆಲ್ ಆವೃತ್ತಿಯು ಪ್ರತಿಲೀಟರಿಗೆ ಸುಮಾರು 32.38 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರು 1.4 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಫೋರ್ಡ್ ಕ್ಲಾಸಿಕ್ ಉಳಿದ ಆವೃತ್ತಿಗಳ ಮೈಲೇಜ್ ಇಷ್ಟೊಂದು ಇಲ್ಲ.
ಅಮೆರಿಕದ ಕಾರು ತಯಾರಿಕಾ ಕಂಪನಿ ಫೋರ್ಡ್ ಇತ್ತೀಚೆಗೆ ಹೆಚ್ಚು ದಕ್ಷತೆಯ ಎಂಜಿನ್ ಅಭಿವೃದ್ಧಿಪಡಿಸಲು ಹೆಚ್ಚು ಒತ್ತು ನೀಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಲೀಟರಿನ ಫೋರ್ಡ್ ಎಕೊ ಬೂಸ್ಟ್ ಎಂಜಿನ್ ಇದಕ್ಕೆ ಒಂದು ನಿದರ್ಶನವಾಗಿದೆ.
ಫೋರ್ಡ್ ಕ್ಲಾಸಿಕ್ ಟೈಟಾನಿಯಂ ಪೆಟ್ರೋಲ್ ಆವೃತ್ತಿಯು 1.6 ಲೀಟರ್ ಡ್ಯೂರಾಟೆಕ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 101 ಪಿಎಸ್ ಪವರ್ ಮತ್ತು 146 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಫೋರ್ಡ್ ಕ್ಲಾಸಿಕ್ ಪೆಟ್ರೋಲ್ ಆವೃತ್ತಿಯ ಮೈಲೇಜ್ ಪ್ರತಿ ಲೀಟರಿಗೆ 21.27 ಕಿ.ಮೀ. ಇದೆ.
ಪ್ರತಿಲೀಟರಿಗೆ 32 ಕಿ.ಮೀ. ಮೈಲೇಜ್ ನೀಡುವ ಫೋರ್ಡ್ ಫಿಯೆಸ್ಟಾ ಟೈಟಾನಿಯಂ ಡೀಸೆಲ್ ಎಂಜಿನ್ 68 ಪಿಎಸ್ ಪವರ್ ಮತ್ತು 160 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದರ ದರ 6.9 ಲಕ್ಷ ರುಪಾಯಿ. ಇದು ದೆಹಲಿ ಎಕ್ಸ್ ಶೋರೂಂ ದರವಾಗಿದೆ.
ಫೋರ್ಡ್ ಫಿಯೆಸ್ಟಾ ಕ್ಲಾಸಿಕ್ ಟೈಟಾನಿಯಂ ಕಾರಿನಲ್ಲಿ ಬ್ಲೂಟೂಥ್, ಸ್ಪೀಡ್ ಸೆನ್ಸಿಂಗ್ ವಾಲ್ಯೂಂ ಕಂಟ್ರೋಲ್, ನೂತನ ವಿನ್ಯಾಸದ ಅಲಾಯ್ ವೀಲ್ ಸೇರಿದಂತೆ ಹಲವು ಹೊಸ ಫೀಚರುಗಳಿವೆ.


Click it and Unblock the Notifications









