ದಿನಕ್ಕೊಂದು ವಾಹನ ಸಲಹೆ: ಕನ್ನಡ ಡ್ರೈವ್ ಸ್ಪಾರ್ಕ್ ವಿಶೇಷ

ಬಹುಸಂಖ್ಯೆಯಲ್ಲಿರುವ ದೇಶದ ಮಧ್ಯಮವರ್ಗದವರಿಗೆ ಫ್ಯಾಮಿಲಿ ಕಾರು ಖರೀದಿಯ ಕನಸಿರುತ್ತದೆ. ಕಾಲೇಜು ಹುಡುಗರಿಗೆ/ಹುಡುಗಿಯರಿಗೆ ಬೈಕ್/ಸ್ಕೂಟರ್ ಖರೀದಿ ಬಯಕೆ. 30 ವಯಸ್ಸು ದಾಟಿದವರ ವಾಹನ ಆಯ್ಕೆ ಅಭಿಲಾಸೆಗಳೇ ಬೇರೆ ಇರುತ್ತವೆ.
ಹದಿನೆಂಟು ವಯಸ್ಸು ದಾಟಿದ ಎಲ್ಲಾ ಜಮಾನದವರ ವಾಹನ ಸವಾರಿ ಅಭೀಪ್ಸೆಗೆ ಕನ್ನಡ ಡ್ರೈವ್ ಸ್ಪಾರ್ಕ್ ಇನ್ನಷ್ಟು ಅಶ್ವಶಕ್ತಿ ತುಂಬಲು ಯಾವತ್ತೂ ರೆಡಿ. ಇನ್ನು ಮುಂದೆ ಈ ತಾಣದಲ್ಲಿ ದಿನಕ್ಕೊಂದು ವಾಹನ ಸಲಹೆ, ಸೂಚನೆ, ಮಾರ್ಗದರ್ಶನಗಳು ಮೂಡಿಬರಲಿದೆ.
ವಾಹನ ಸಾಲ ಪಡೆಯುವುದು ಹೇಗೆ? ವಾಹನ ವಿಮೆಯಲ್ಲಿ ದುಡ್ಡು ಉಳಿಸೋದು ಹೇಗೆ? ಕಾರು ಅಥವಾ ಬೈಕಿನ ಮೈಲೇಜ್ ಹೆಚ್ಚಿಸುವುದು ಹೇಗೆ? ಕಾರು ಖರೀದಿಸುವುದು ಹೇಗೆ? ಮಾರಾಟ ಮಾಡುವುದು ಹೇಗೆ? ಕಾರಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ವಾಹನ ಖರೀದಿಗೆ ಮುನ್ನ ಇರಬೇಕಾದ ಮುನ್ನೇಚರಿಕೆಗಳೇನು? ಆನ್ ಲೈನ್ ನಲ್ಲಿ ಅಥವಾ ಆಫ್ ಲೈನಲ್ಲಿ ವಾಹನ ಖರೀದಿಸುವುದು ಹೇಗೆ? ಹೊಸ ಕಾರು ಖರೀದಿ ಹೇಗೆ? ಹಳೆ ಕಾರು ಮಾರಾಟ ಹೇಗೆ? ಯಾವ ಕಾರು ಉತ್ತಮ ಅಥವಾ ಅಧಮ? ಪೆಟ್ರೋಲಾ ಡೀಸೆಲ್ಲಾ?
ಇಷ್ಟು ಮಾತ್ರವಲ್ಲ ಕಾರು ಬೈಕಿನ ಬಿಡಿಭಾಗಗಳ ಕುರಿತು, ವಾಹನ ತೊಳೆಯುವುದು ಹೇಗೆ, ಆಯಿಲ್ ಬದಲಾಯಿಸುವುದು ಹೇಗೆ? ಎಂಜಿನ್ ಆರೋಗ್ಯ ಕಾಪಿಡುವುದು ಹೇಗೆ? ಆಕ್ಸೆಸರಿ ಬಳಕೆ ಹೇಗೆ? ಆನ್ ಲೈನಲ್ಲಿ ವಾಹನ ಖರೀದಿಸುವುದು ಹೇಗೆ?
ಕಾರಿನ ಟೈರ್ ಬದಲಾಯಿಸುವುದು ಹೇಗೆ? ಮಳೆಗಾಲದಲ್ಲಿ, ಚಳಿಗಾಲದಲ್ಲಿ ಡ್ರೈವಿಂಗ್ ಮಾಡುವುದು ಹೇಗೆ, ವಾಹನ ಚಾಲನೆ ಕುರಿತು ಸಂಚಾರಿ ನೀತಿನಿಯಮಗಳೇನು? ಸುರಕ್ಷತೆಯ ಸವಾರಿ ಹೇಗೆ? ಕನಸಿನ ಕಾರು ಬೈಕು ಖರೀದಿಸಲು ಬಯಸುವರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು?
ಹೀಗೆ ವಾಹನ ಸವಾರರಿಗೆ ಲೆಕ್ಕವಿಲ್ಲದಷ್ಟು ಆಪ್ತ ಸಲಹೆಗಳು ಕನ್ನಡ ಡ್ರೈವ್ ಸ್ಪಾರ್ಕಿನಲ್ಲಿ ಮೂಡಿಬರಲಿವೆ. ಯಾವ ಸಲಹೆ ನಿಮಗೆ ಬೇಕು ಎಂದು ಅಪ್ಪಣೆ ಮಾಡಿದರೆ ಸಾಕು. ಅದಕ್ಕೆ ಆರಂಭದಲ್ಲಿ ಆದ್ಯತೆ ನೀಡಲಿದ್ದೇವೆ. ನಿಮ್ಮ ಸಲಹೆ ಸೂಚನೆಗಳಿಗೂ ಸ್ವಾಗತ. ವಾಹನ ಸಲಹೆಗಳು
ದಿನ ದಿನದ ಸಲಹೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ


Click it and Unblock the Notifications








