ಭವಿಷ್ಯದ ಪೊಲೀಸ್ ಕಾರು ಬಗ್ಗೆ ಜಾಗರೂಕರಾಗಿರಿ
ವಿಶ್ವದೆಲ್ಲೆಡೆ ಭಯೋತ್ಪಾದನೆ ಚಟುವಟಿಕೆ ವ್ಯಾಪಕವಾಗುತ್ತಿರುವಂತೆಯೇ ನಾನಾ ದೇಶಗಳು ತಮ್ಮ ಆಂತರಿಕ ಭದ್ರತೆಗಾಗಿ ದೊಡ್ಡ ಪ್ರಮಾಣದ ಮೊತ್ತವನ್ನೇ ಮೀಸಲಿರಿಸುತ್ತವೆ. ತಮ್ಮ ದೇಶದ ಪ್ರಜೆಗಳಿಗೆ ಸರ್ವೋಚ್ಛ ಭದ್ರತೆ ಒದಗಿಸುವುದು ಪ್ರತಿಯೊಂದು ದೇಶದ ಕರ್ತವ್ಯವಾಗಿರುತ್ತದೆ.
ಹಾಗಿರುವಾಗ ಕಾರು ತಯಾರಕ ಕಂಪನಿಗಳು ಸಹ ಹಲವು ವಿಧಧ ಭದ್ರತಾ ಕಾರುಗಳ ತಯಾರಿಸುವ ಬಗ್ಗೆ ಯೋಚನಾ ಮಗ್ನವಾಗಿರುತ್ತವೆ. ಇದರಂತೆ 2025ನೇ ಇಸವಿಯಲ್ಲಿ ಪೊಲೀಸ್ ಭದ್ರತಾ ಕಾರು ಹೇಗಿರಬೇಕು ಎಂಬುದಕ್ಕೆ ಈಗಾಗಲೇ ಪರಿಕಲ್ಪನೆ ನೀಡಲಾಗುತ್ತಿದೆ.
ಇತ್ತೀಚೆಗಷ್ಟೇ ಸಾಗಿದ ಲಾಸ್ ಏಜಂಲೀಸ್ ಆಟೋ ಶೋದಲ್ಲಿ ಭವಿಷ್ಯದ ಪೊಲೀಸ್ ಕಾರು ವಿನ್ಯಾಸ ಪ್ರಮುಖ ಆಕರ್ಷಣೆಯಾಗಿದ್ದವು. ಈ ಆಟೋ ಶೋದಲ್ಲಿ ಜಗತ್ತಿನೆಲ್ಲೆಡೆಯ ಪ್ರಮುಖ ವಾಹನ ತಯಾರಕ ಕಂಪನಿಗಳು ಭವಿಷ್ಯದ ಪೊಲೀಸ್ ಕಾರುಗಳ ಬಗ್ಗೆ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿವೆ. ಇದರಲ್ಲಿ ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ಹೊಂಡಾ ಕಾನ್ಸೆಪ್ಟ್ ಕಾರುಗಳು ಗಮನಸೆಳೆದಿದ್ದವು.
ಭವಿಷ್ಯದ ಪೊಲೀಸ್ ಕಾರುಗಳಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆಕರ್ಷಕ ಲುಕ್ ಹಾಗೂ ಗರಿಷ್ಠ ಇಂಧನ ಕ್ಷಮತೆ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. 2025ರ ವೇಳೆಗೆ ಈ ಕಾನ್ಸೆಪ್ಟ್ ಕಾರುಗಳು ಕಾನೂನು ಸುವ್ಯವಸ್ಥೆ ಕಾಪಾಡಲು ನೆರವಾಗಲಿದೆ.

ಜರ್ಮನಿಯ ಪ್ರಮುಖ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಈ ಪೂಲೀಸ್ ಕಾರು ಕಾನ್ಸೆಪ್ಟನ್ನು ತಯಾರಿಸಿದೆ. ಅಲ್ಲದೆ ಇತ್ತೀಚೆಗಷ್ಟೇ ಸಾಗಿದ ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ವಿರೋಧಿಗಳನ್ನು ಎದುರಿಸುವ ನಿಟ್ಟಿನಲ್ಲಿ ಭದ್ರತೆಯ ವಿಚಾರಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ

ಭವಿಷ್ಯದ ಈ ಪೊಲೀಸ್ ಕಾನ್ಸೆಪ್ಟ್ ಕಾರನ್ನು ಹೊಂಡಾ ತಯಾರಿಸಿದೆ. ಕಂಪನಿಯು ಈ ಕಾರಿಗೆ ಚಿಪ್ಸ್ ಕ್ರಾಲರ್ ಎಂದು ಹೆಸರಿಸಿದೆ.

2025ರ ವೇಳೆಗೆ ಈ ಎಲ್ಲ ಕಾನ್ಸಪ್ಟ್ ಕಾರುಗಳು ಭದ್ರತಾ ಪಡೆಗಳ ಕೈಸೇರುವ ನಿರೀಕ್ಷೆಯಿದೆ.

ಜಪಾನ್ ಕಾರು ತಯಾರಕ ಕಂಪನಿ ಹೊಂಡಾದ ಫ್ಯೂಚರ್ ಪೊಲೀಸ್ ಕಾರು ಕಾನ್ಸೆಪ್ಟ್

ಭವಿಷ್ಯದ ಪೊಲೀಸ್ ಕಾರು ಕಾನ್ಸೆಪ್ಟ್

ಜರ್ಮನಿಯ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಈ ಭವಿಷ್ಯದ ಪೊಲೀಸ್ ಕಾರಿಗೆ ರೂಪುರೇಷೆ ನೀಡಿದೆ.

ಈ ಎಸ್‌ಯುವಿ ಕಾರು ಲಾಸ್ ಏಂಜಲೀಸ್ ಆಟೋ ಶೋದ ಪ್ರಮುಖ ಆಕರ್ಷಣೆಯಾಗಿತ್ತು.

ಯಾವುದೇ ರೀತಿಯ ಆಕ್ರಮಣಗಳನ್ನು ಎದುರಿಸಲು ಇಂತಹ ಕಾರುಗಳು ಸನ್ನದ್ಧವಾಗಿರುತ್ತವೆ.

ವಾಟರ್ ಟ್ಯಾಂಕ್ ಜತೆ ಆಯುಧಗಳನ್ನು ಕೊಂಡೊಯ್ಯಲು ಕಾರಿನಲ್ಲಿ ಸೌಲಭ್ಯ ಏರ್ಪಡಿಸಲಾಗಿದೆ. ಹಾಗೆಯೇ ಸಂಪೂರ್ಣ ಬುಲೆಟ್ ಪ್ರೂಪ್ ಕಾರು ಇದಾಗಿದೆ.

ಭವಿಷ್ಯದ ಪೊಲೀಸ್ ಕಾರು ಕಾನ್ಸೆಪ್ಟ್



Click it and Unblock the Notifications








