ನಮ್ಮೂರಲ್ಲಿ ಎಸ್‌ಯುವಿ ಕಾರುಬಾರು ಬಲುಜೋರು!

ನಮ್ಮೂರಲ್ಲೀಗ ಎಸ್‌ಯುವಿ ಹವಾ ಜೋರಾಗಿಯೇ ಇದೆ. ನಮ್ಮೂರು ಅಂದರೆ ಪುಟ್ಟಭಾರತ. ಅದು ಬೆಂಗಳೂರು ಆಗಿರಬಹುದು. ದೆಹಲಿ, ಮುಂಬೈ ಆಗಿರಬಹುದು. ಅಥವಾ ದೂರದ ನೋಯ್ಡಾನೂ ಆಗಿರಬಹುದು. ಹತ್ತಿರದ ಪುತ್ತೂರು ಆಗಿರಬಹುದು. ಒಟ್ಟಾರೆ ದೇಶದ ಹೆಚ್ಚಿನ ವಾಹನ ಪ್ರೀಯರಿಗೆ ಸ್ಪೋರ್ಟ್ ಯುಟಿಲಿಟಿ ವಾಹನ ಅಚ್ಚುಬೆಲ್ಲದಷ್ಟೇ ಅಚ್ಚುಮೆಚ್ಚು.

ಸದ್ಯ 10 ಲಕ್ಷ ರುಪಾಯಿಗಿಂತ ಕಡಿಮೆಯ ಎಸ್‌ಯುವಿಗೆ ಡಿಮ್ಯಾಂಡ್ ಜಾಸ್ತಿ ಇದೆ. ಈಗಾಗಲೇ ಜಾಗತಿಕ ಕಂಪನಿ ರೆನೊ ನಮ್ಮ ಎಸ್‌ಯುವಿ ಮಾರ್ಕೆಟ್ನಲ್ಲಿ ಭರ್ಜರಿಯಾಗಿ ಪದಾರ್ಪಣೆ ಮಾಡಿರುವುದು ಎಲ್ಲರಿಗೂ ಗೊತ್ತು. ಕನ್ನಡ ಡ್ರೈವ್ ಸ್ಪಾರ್ಕಿಗೆ ಲಭಿಸಿರುವ ಮಾಹಿತಿ ಪ್ರಕಾರ ಈಗಾಗಲೇ ರೆನೊ ಡಸ್ಟರ್ ಬುಕ್ಕಿಂಗ್ 5 ಸಾವಿರ ದಾಟಿದೆ.

ಈ ಹವಾದ ಲಾಭ ಪಡೆಯಲು ಜಾಗತಿಕ ಕಂಪನಿಗಳು ಕಣ್ಣಿಗೆ ಎಣ್ಣಿಬಿಟ್ಟು ಕಾಯುತ್ತಿವೆ ಎಂಬ ಸುದ್ದಿ ನಮಗೆ ಸಿಕ್ಕಿದೆ. ಶೀಘ್ರದಲ್ಲಿ ಒಂದು ಶುಭಮಹೂರ್ತದಲ್ಲಿ ಫೋರ್ಡ್ ಕಂಪನಿಯು ಎಸ್‌ಯುವಿಯೊಂದನ್ನು ಪರಿಚಯಿಸಲಿದೆ. ಅದರ ಹೆಸರು ಫೋರ್ಡ್ ಎಕೋಸ್ಪೋರ್ಟ್. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ.

ಈ ಸೆಗ್ಮೆಂಟಿನಲ್ಲಿ ಪಾಲು ಪಡೆಯಲು ಮಾರುತಿ ಸುಜುಕಿ ಮತ್ತು ಹ್ಯುಂಡೈ ಕೂಡ ಪ್ರಯತ್ನಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಎಸ್‌ಯುವಿ ಎಕ್ಸ್ ಎ ಆಲ್ಪಾ ಪ್ರದರ್ಶಿಸಿತ್ತು. ಹ್ಯುಂಡೈ ಕೂಡ ಎಚ್ಎನ್ ಡಿ-7 ಎಂಬ ಎಸ್‌ಯುವಿ ಪರಿಚಯಿಸಲಿದೆಯಂತೆ.

ನಮ್ಮ ಅಂದಾಜಿನ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಈ ಎಲ್ಲಾ ಕಂಪನಿಗಳು ಸುಮಾರು 10 ಲಕ್ಷ ರುಪಾಯಿಗಿಂತ ಕಡಿಮೆ ದರದ ಎಸ್‌ಯುವಿ ಪರಿಚಯಿಸಲಿವೆ. ಟೊಯೊಟಾ ಮತ್ತು ಜನರಲ್ ಮೋಟರ್ಸ್ ಕೂಡ ಈ ಬಳಗಕ್ಕೆ ಜೊತೆಯಾಗುವ ನಿರೀಕ್ಷೆಯಿದೆ.

ಜಾಗತಿಕ ವಾಹನ ಕಂಪನಿಗಳು ನಮ್ಮೂರ ಎಸ್‌ಯುವಿ ಮಾರುಕಟ್ಟೆ ಮೇಲೆ ಕಣ್ಣು ಹಾಕಲು ಕಾರಣವೇನು? "ದೇಶದಲ್ಲಿ ಎಸ್‌ಯುವಿ, ಎಂಯುವಿ ಸೆಗ್ಮೆಂಟ್ ಪ್ರಸಕ್ತ ವರ್ಷದ ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಶೇಕಡ 50.85ರಷ್ಟು ಬೆಳೆದಿದೆ" ಡ್ರೈವ್ ಸ್ಪಾರ್ಕ್ ವಾಹನ ರಿಸರ್ಚ್ ತಂಡ ಅಭಿಪ್ರಾಯಪಟ್ಟಿದೆ.

ಕೈಗೆಟುಕುವ ದರದ ಎಸ್‌ಯುವಿಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಿದೆ. ರೆನೊ ದಸ್ಟರ್ ಆರಂಭಿಕ ದರ 7.19 ಲಕ್ಷ ರು. ಇದೆ. ಈ ಹಿಂದೆ ಎಸ್‌ಯುವಿ ಸೆಗ್ಮೆಂಟಿನಲ್ಲಿ ಟಾಟಾ ಮೋಟರ್ಸ್ ಪ್ರಾಬಲ್ಯ ಪಡೆದಿತ್ತು. ಟಾಟಾ ಸಫಾರಿ ದೇಶದ ರಸ್ತೆಗೆ ಆಗಮಿಸಿ ಹಲವು ವರ್ಷ ಕಳೆದಿದೆ.

ಎಲ್ಲಾ ವಾಹನ ಕಂಪನಿಗಳ ಫ್ಯಾಕ್ಟರಿಯಲ್ಲೂ ಎಸ್‌ಯುವಿ ಉತ್ಪಾದನೆ ಜೋರಾಗುವ ಸೂಚನೆ ದೊರಕಿದೆ. ಶೀಘ್ರದಲ್ಲಿ ನಮ್ಮ ರಸ್ತೆಗಿಳಿಯಲಿರುವ ಸ್ಪೋರ್ಟ್ ಯುಟಿಲಿಟಿ ಯಾವುದು ಗೊತ್ತಾ? ಈಗ ಹೇಳೋದಿಲ್ಲ. ಗೆಸ್ ಮಾಡ್ತಾ ಇರಿ. ಜೊತೆಗೆ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ...

More from DriveSpark

Article Published On: Thursday, July 26, 2012, 12:32 [IST]
English summary
Global Car Makers Eye SUV Space In India. The next upcoming compact SUV in India will be from Ford. Ford is expected to launch the Ford EcoSport SUV in India next year. Maruti Suzuki and Hyundai on the other hand are also looking to tap into this segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+