ಡೀಸೆಲ್ ಕಾರುಗಳಿಗೆ ಹೆಚ್ಚುವರಿ ತೆರಿಗೆ ನಿಶ್ಚಿತ

ಡೀಸೆಲ್ ಕಾರುಗಳಿಗೆ ಹೆಚ್ಚುವರಿ ಸುಂಕ ವಿಧಿಸಲು ಕೇಂದ್ರ ಸರಕಾರವು ಯೋಜಿಸುತ್ತಿದೆ. ಸಣ್ಣ ಡೀಸೆಲ್ ಕಾರುಗಳಿಗೆ 1.55 ಲಕ್ಷ ರುಪಾಯಿ ಸುಂಕ ಮತ್ತು ಸೆಡಾನ್, ಎಸ್‌ಯುವಿ ಮುಂತಾದ ದೊಡ್ಡ ಡೀಸೆಲ್ ಕಾರುಗಳಿಗೆ ಸುಮಾರು 2.55 ಲಕ್ಷ ರುಪಾಯಿಯಷ್ಟು ಹೆಚ್ಚುವರಿ ಸುಂಕ ವಿಧಿಸುವ ತೈಲ ಸಚಿವಾಲಯದ ಪ್ರಸ್ತಾಪವು ಸದ್ಯ ಹಣಕಾಸು ಸಚಿವಾಲಯದ ಮೇಜಿನಲ್ಲಿದೆ.

ತೈಲ ಸಚಿವಾಲಯದ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯವು ಶೀಘ್ರದಲ್ಲಿ ಅಸ್ತು ಎನ್ನುವ ನಿರೀಕ್ಷೆಯಿದೆ. ಡೀಸೆಲ್ ಕಾರುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಅಂಕಿತ ದೊರೆತರೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ದರದ ನಡುವಿನ ಅಂತರ ಹೆಚ್ಚಾಗರಲಿದೆ.

ಈಗ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಡುವೆ ಅಂತಹ ಭಾರಿ ದರ ವ್ಯತ್ಯಾಸವೂ ಇಲ್ಲ. ಡೀಸೆಲ್ ಕಾರುಗಳು ಅತ್ಯಧಿಕ ಮೈಲೇಜ್ ಕೂಡ ನೀಡುತ್ತವೆ. ಪೆಟ್ರೋಲ್ ದರವೂ ದುಬಾರಿಯಾಗಿದೆ. ಇವೆಲ್ಲ ಕಾರಣಗಳಿಂದ ಡೀಸೆಲ್ ಕಾರುಗಳ ಬೇಡಿಕೆ ಅವ್ಯಾಹತವಾಗಿ ಏರಿಕೆ ಕಾಣುತ್ತಿದೆ.

ಡೀಸೆಲ್ ಕಾರುಗಳಿಗೆ ಹೆಚ್ಚುವರಿ ಸುಂಕ ವಿಧಿಸುವ ಸರಕಾರದ ಯೋಜನೆ ಕುರಿತು ಕಾರು ಕಂಪನಿಗಳು ಮತ್ತು ಉದ್ಯಮ ವಿಶ್ಲೇಷಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಡೀಸೆಲನ್ನು ಯಾವುದೇ ಸಬ್ಸಿಡಿ ಅಥವಾ ವಿನಾಯಿತಿ ಇಲ್ಲದೇ ಖಾಸಗಿ ವಾಹನಗಳಿಗೆ ನೀಡುವಂತೆ ಕಾರು ಕಂಪನಿಗಳು ಸರಕಾರಕ್ಕೆ ತಿಳಿಸಿದ್ದವು. ತೆರಿಗೆ ಹೆಚ್ಚಳದಿಂದ ಕಾರು ಮಾರಾಟ ಇಳಿಕೆ ಕಾಣುವ ಭೀತಿಯಲ್ಲಿ ಕಾರು ಕಂಪನಿಗಳಿವೆ.

"ತೈಲ ಕಂಪನಿಗಳ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದೆ" ಎಂದು ಹೆಸರು ಹೇಳಲಿಚ್ಚಸದ ಸರಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಸುಂಕ ವಿಧಿಸಿದರೆ ಗ್ರಾಹಕರಿಗೆ ಡೀಸೆಲ್ ಕಾರು ಖರೀದಿಗೆ ಹಿಂದೇಟು ಹಾಕುವ ಸಾಧ್ಯತೆಗಳಿವೆ ಎಂದು ಉದ್ಯಮ ಮೂಲಗಳು ಅಭಿಪ್ರಾಯಪಟ್ಟಿವೆ.

ನೂತನ ಹೆಚ್ಚುವರಿ ತೆರಿಗೆಯಿಂದ ಪೆಟ್ರೋಲ್ ಕಾರುಗಳ ಮಾರಾಟ ಹೆಚ್ಚಾಗದು. ಯಾಕೆಂದರೆ ಈಗಾಗಲೇ ಪೆಟ್ರೋಲ್ ದರವೂ ಅತ್ಯಧಿಕವಾಗಿ ಏರಿಕೆಯಾಗಿದೆ. ಹೆಚ್ಚಿನ ಜನರು ಪೆಟ್ರೋಲ್ ಕಾರೆಂದರೆ ಭಯಪಡುತ್ತಿದ್ದಾರೆ.

ಎಲ್ಲಾದರೂ ಡೀಸೆಲ್ ಕಾರಿಗೆ ತೆರಿಗೆ ವಿಧಿಸಿದರೆ ಮಹೀಂದ್ರ, ಟೊಯೊಟಾ ಮತ್ತು ಫೋರ್ಡ್ ಕಂಪನಿಗಳಿಗೆ ಹೆಚ್ಚಿನ ನಷ್ಟವಾಗಲಿದೆ. ಯಾಕೆಂದರೆ ಈ ಕಂಪನಿಗಳು ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳನ್ನೇ ಹೆಚ್ಚು ಮಾರಾಟ ಮಾಡುತ್ತಿವೆ. ಮಹೀಂದ್ರ ಕಂಪನಿಯ ಶೇಕಡ 90ರಷ್ಟು ಕಾರು ಮಾರಾಟ ಡೀಸೆಲ್ ಆವೃತ್ತಿಯಾಗಿದೆ. ಈಗಾಗಲೇ ಡೀಸೆಲ್ ಕಾರು ಉತ್ಪಾದನೆಗೆ ಸಾಕಷ್ಟು ಹೂಡಿಕೆ ಮಾಡಿರುವುದರಿಂದ ಮಾರುತಿ ಮತ್ತು ಹ್ಯುಂಡೈಗೂ ನಷ್ಟವಾಗಲಿದೆ.

More from DriveSpark

Article Published On: Wednesday, June 13, 2012, 14:32 [IST]
English summary
The central government is planning to impose excise duty on diesel cars that will make them severely expensive when compared to existing prices. The oil ministry in its recommendations to the finance ministry has sought to impose additional taxes of Rs.1.55 lakhs on small cars and Rs.2.55 lakhs on larger vehicles such as sedans and SUVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+