ಸಿಟಿ ನೆರವಿನಿಂದ ಹೋಂಡಾ ಭರ್ಜರಿ ಮಾರಾಟ
ದೇಶದ ಪ್ರಮುಖ ಪ್ರೀಮಿಯಂ ಕಾರು ತಯಾರಿಕಾ ಕಂಪನಿ ಹೋಂಡಾ ಸಿಯೆಲ್ ಇಂಡಿಯಾ ಕಾರು ಮಾರಾಟ ಗಮನಾರ್ಹ ಏರಿಕೆ ಕಂಡಿದೆ.
ಕಂಪನಿಯು ಕಳೆದ ತಿಂಗಳು 8,856 ಯುನಿಟ್ ವಾಹನ ಮಾರಾಟ ಮಾಡಿದ್ದು, ಕಳೆದ ವರ್ಷದ ಫೆಬ್ರವರಿ ತಿಂಗಳ 4,843 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 85ರಷ್ಟು ಏರಿಕೆ ದಾಖಲಿಸಿದೆ. 2011ರ ಅಂತ್ಯದಲ್ಲಿ ಸಂಭವಿಸಿದ ಥೈಲಾಂಡ್ ನೆರೆಹಾವಳಿ ಕಂಪನಿಯ ವಾಹನ ಉತ್ಪಾದನೆಗೆ ಹೊಡೆತ ನೀಡಿತ್ತು.
ಫೆಬ್ರವರಿಯಲ್ಲಿ ಸುಮಾರು 2,046 ಯುನಿಟ್ ಬ್ರಿಯೊ, 356 ಯುನಿಟ್ ಜಾಝ್ ಕಾರುಗಳು ಮಾರಾಟವಾಗಿವೆ. ಕಾರು ಮಾರಾಟ ಪ್ರಗತಿ ಮುಂಬರುವ ದಿನಗಳಲ್ಲೂ ಮುಂದುವರೆಯುವ ನಿರೀಕ್ಷೆಯನ್ನು ಕಂಪನಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್ ವ್ಯಕ್ತಪಡಿಸಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









