ಸಿಎನ್‌ಜಿ ಕಿಟ್ ಜತೆ ಪರಿಪ್ಕೃತ ಹೊಂಡಾ ಸಿಟಿ; ದರ 9.03 ಲಕ್ಷ ರು.
ದಿನದಿಂದ ದಿನಕ್ಕೆ ಪೆಟ್ರೋಲ್ ದರದಲ್ಲಿ ಭಾರಿ ಏರಿಕೆ ಕಂಡುಬಂದಿದ್ದರ ಹಿನ್ನಲೆಯಲ್ಲಿ ಕಾರು ಖರೀದಿ ಗ್ರಾಹಕರು ಇತರ ಇಂಧನ ಚಾಲಿತ ವಾಹನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿ ಡೀಸೆಲ್ ಎಂಜಿನ್ ಕಾರುಗಳ ಮಾರಾಟದಲ್ಲಿ ಭಾರಿ ವರ್ಧನೆ ಕಂಡುಬಂದಿದೆ. ಮತ್ತೊಂದೆಡೆ ಈಗಾಗಲೇ ಪೆಟ್ರೋಲ್ ಎಂಜಿನ್ ಕಾರು ಹೊಂದಿರುವವರು ತಮ್ಮ ಕಾರುಗಳಿಗೆ ಸಿಎನ್‌ಜಿ ಕಿಟ್ ಆಳವಡಿಸುತ್ತಿದ್ದು, ಈ ಮೂಲಕ ವೆಚ್ಚ ಕಡಿಮೆ ಮಾಡುವುದನ್ನು ಗುರಿಯಿರಿಸಿದ್ದಾರೆ.
ಅಂದ ಹಾಗೆ ಕೆಲವು ವರ್ಷಗಳ ಹಿಂದೆ ಹೊಂಡಾ ಸಿಟಿ, ಮಾರಾಟದಲ್ಲಿ ದೇಶದ ಅತ್ಯುತ್ತಮ ಸೆಗ್ಮೆಂಟ್ ಎನಿಸಿಕೊಂಡಿತ್ತು. ಆದರೆ ಇದೀಗ ಡೀಸೆಲ್ ಎಂಜಿನ್ ಕಾರುಗಳು ಈ ಸ್ಥಾನವನ್ನು ಕಸಿದುಕೊಂಡಿದೆ. ಹಾಗಿದ್ದರೂ ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾರಾಟ ಮಾಡುವುದನ್ನು ಗಮನಿಸಿದಾಗ ಹೊಂಡಾ ಈಗಲೂ ಪ್ರಥಮ ಸ್ಥಾನದಲ್ಲಿದೆ.
ಇದೀಗ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಹೊಂಡಾ ಮೋಟಾರ್ಸ್ ನೂತನ ಪರಿಷ್ಕೃತ ಹೊಂಡಾ ಸಿಟಿ ಬಿಡುಗಡೆ ಮಾಡಿದೆ. ಇದರ ದರ ದೆಹಲಿ ಎಕ್ಸ್ ಶೋರೂಂಗಳಲ್ಲಿ 9.03 ಲಕ್ಷ ರುಪಾಯಿಗಳಾಗಿದೆ. ಅಲ್ಲದೆ ಗ್ರಾಹಕರಿಗೆ ಸಿಎನ್‌ಜಿ ಕಿಟ್ ಆಳವಡಿಸುವ ಆಯ್ಕೆ ಕೂಡಾ ಲಭ್ಯವಿದ್ದು, ಇದಕ್ಕಾಗಿ ಹೆಚ್ಚುವರಿ 50 ಸಾವಿರ ಪಾವತಿಸಬೇಕಾಗಿದೆ.ಪರಿಷ್ಕೃತ ಸಿಎನ್‌ಜಿ ಕಿಟ್ ಸಾಟಿಯಿಲ್ಲದ ಕಾರ್ಯನಿರ್ವಹಣೆ ಹಾಗೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ. ಅಲ್ಲದೆ ಎರಡು ವರ್ಷಗಳ ವಾರಂಟಿ ಕೂಡಾ ಲಭಿಸಲಿದೆ. ಸುಧಾರಿತ 1.5 ಲೀಟರ್ ಹಾಗೂ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ( i-VTEC) ಕೂಡಾ ಹೊಂದಿರಲಿದೆ. ಸಿಟಿ ಪೆಟ್ರೋಲ್ ಮಾದರಿಯಂತೆ ಹೊಂಡಾ ಸಿಎನ್‌ಜಿ ಕೂಡಾ ಸುಗಮ ಡ್ರೈವಿಂಗ್‌ಗೆ ಸಹಕಾರಿಯಾಗಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.
ಸುರಕ್ಷತೆಗೂ ಸಹ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದ್ದು, ಎಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಬ್ರೇಸ್ ಅಸಿಸ್ಟ್ (ಬಿಎ), ಡ್ಯುಯಲ್ ಏರ್‌ಬ್ಯಾಗ್ (ಎಸ್‌ಆರ್‌ಎಸ್) ಹಾಗೂ ಸೀಟ್ ಬೆಲ್ಟ್ ಕೂಡಾ ಆಳವಡಿಸಲಾಗಿದೆ.


Click it and Unblock the Notifications









