ಮರಳಿಬಂದ ಹೋಂಡಾ ಸಿಟಿ ಆಟೋಮ್ಯಾಟಿಕ್ ಕಾರು

ದೇಶದ ರಸ್ತೆಗೆ ಆಗಮಿಸಿ ನಿರ್ಮಿಸಿದ್ದ ಹೋಂಡಾ ಸಿಟಿ ಆಟೋಮ್ಯಾಟಿಕ್ ಕಾರನ್ನು ಹೋಂಡಾ ಕಂಪನಿಯು ಪುನರ್ ಪರಿಚಯಿಸಿದೆ. ದೇಶದ ಕಾರು ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಸಿಟಿ ಎಸ್ ಕಾರಿಗೆ ಗ್ರಾಹಕರಿಂದ ಬೇಡಿಕೆ ಬಂದಿರುವುದೇ, ಮರು ಪರಿಚಯಿಸಲು ಕಾರಣವೆಂದು ಕಂಪನಿ ಹೇಳಿದೆ.

ಈಗ ದೇಶದಲ್ಲಿ ಹೋಂಡಾ ಸಿಟಿ ಎಂಟು ಆವೃತ್ತಿಗಳು ಮಾರಾಟವಾಗುತ್ತಿವೆ. ಅದರಲ್ಲಿ ಎರಡು ಆವೃತ್ತಿಗಳು ಮೇಲ್ಚಾವಣಿ ಅಥವಾ ಸನ್ ರೂಫ್ ಫೀಚರ್ ಹೊಂದಿದೆ. ನೂತನ ಸಿಟಿ ಎಸ್ ಎಟಿ ಆವೃತ್ತಿಯು ಎಲ್ಲಾ ಹೋಂಡಾ ಡೀಲರುಗಳ ಬಳಿ ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ. ಇದರ ದರ ಸುಮಾರು 9.10 ಲಕ್ಷ ರುಪಾಯಿ ಎಂದು ಕಂಪನಿ ಹೇಳಿದೆ.

ಆದರೆ ಕಂಪನಿಯು ಈ ಕಾರಿನ ಯಾವುದೇ ಫೀಚರುಗಳನ್ನು ಬದಲಾಯಿಸಿಲ್ಲ. ಹಳೆಯ ಹೋಂಡಾ ಸಿಟಿ ಎಸ್ ಹೇಗಿತ್ತೋ, ಅದೇ ಫೀಚರುಗಳು ಮುಂದುವರೆದಿವೆ. ಈಗ ಆಟೋಮ್ಯಾಟಿಕ್ ಗೇರ್ ಕಾರುಗಳಿಗೆ ಬೇಡಿಕೆಯಿರುವ ಹಿನ್ನಲೆಯಲ್ಲಿ ಕಂಪನಿಯು ಈ ಕಾರನ್ನು ಮರುಪರಿಚಯಿಸಿದೆ ಅಷ್ಟೇ.

ಹಳೆಯ ಎಂಜಿನೇ ಮುಂದುವರೆದಿದೆ. ಅಂದರೆ ಹೋಂಡಾ ಸಿಟಿ ಆಟೋಮ್ಯಾಟಿಕ್ ಕಾರು 1.5 ಲೀಟರಿನ ಐ-ವಿಟೆಕ್ ಎಂಜಿನ್ ಹೊಂದಿದೆ. ಇದು 6,600 ಆವರ್ತನಕ್ಕೆ 116.3 ಅಶ್ವಶಕ್ತಿ ಮತ್ತು 4,800 ಆವರ್ತನಕ್ಕೆ 146 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಹೋಂಡಾ ಸಿಟಿ ಎಸ್ ಮ್ಯಾನುಯಲ್ ಗೇರ್ ಕಾರಿನ ಮೈಲೇಜ್ 16.8 ಕಿ.ಮಿ. ಇದೆ. ಆಟೋಮ್ಯಾಟಿಕ್ ಆವೃತ್ತಿಯ ಮೈಲೇಜ್ ಇದಕ್ಕಿಂತ ಕೊಂಚ ಕಡಿಮೆ ಇರುವ ನಿರೀಕ್ಷೆಯಿದೆ.

More from DriveSpark

Article Published On: Friday, August 17, 2012, 14:52 [IST]
English summary
Honda City S Automatic R Launched. Honda cars has launched new automatic variant of City at INR 9.10 lakhs. The new city will boost the honda sales and give tough competition to rivals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+