ಹುಬ್ಬಳ್ಳಿ ನಮ್ಗೆ ಲಕ್ಕಿ ಊರು, ಹಾಗಂದವರು ಯಾರು?

Hubli Turns lucky Hunting Ground For Carmakers
ಹುಬ್ಬಳ್ಳಿಯೆಂದರೆ ಜೋಳದ ರೊಟ್ಟಿಯ ರುಚಿಯನ್ನು ನೆನಪಿಸಿಕೊಳ್ಳುವರು ಹೆಚ್ಚು. ಹುಬ್ಬಳ್ಳಿ ಅಭಿಮಾನ ಬಳಗಕ್ಕೆ ಕಾರು ಕಂಪನಿಗಳು ಸೇರ್ಪಡೆಯಾಗಿವೆ. ಅಲ್ಲಿನ ಕಾರು ಮಾರುಕಟ್ಟೆ ದಿನೇ ದಿನೇ ವೇಗ ಪಡೆದುಕೊಳ್ಳುತ್ತಿದೆ.

ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಮಹೀಂದ್ರ, ಫಿಯೆಟ್, ಹೋಂಡಾ, ಷೆವರ್ಲೆ, ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಾರುಗಳ ಶೋರೂಂಗಳು ಹುಬ್ಳಿಯಲ್ಲಿವೆ. ಕಳೆದ ಎರಡು ವರ್ಷಗಳಿಂದ ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಮುಂತಾದ ವಿದೇಶಿ ಕಂಪನಿಗಳು ಹುಬ್ಬಳ್ಳಿಯಲ್ಲಿ ಶೋರೂಂ ತೆರೆದಿವೆ.

ಇಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಡೀಲರುಗಳು ರಾಜ್ಯದ ವಿವಿದೆಡೆಯಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸಿ ಇಲ್ಲಿ ಮಾರಾಟ ಮಾಡುತ್ತಾರೆ. ಹಗುರ ವಾಣಿಜ್ಯ ವಾಹನಗಳಿಗೇ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಇಲ್ಲಿ ಸ್ಪೋರ್ಟ್ ಯುಟಿಲಿಟಿ, ಮಲ್ಟಿ ಯುಟಿಲಿಟಿ ಮತ್ತು ಸೆಡಾನ್ ಕಾರುಗಳಿಗೂ ಬೇಡಿಕೆಯಿದೆ.

ಹೋಂಡಾ ಕಂಪನಿಯ ಸಿಆರ್ ವಿ, ಅಕಾರ್ಡ್ ಮತ್ತು ಸಿಟಿ ಬ್ರಾಂಡುಗಳಿಗೆ ಇಲ್ಲಿ ಅತ್ಯಧಿಕ ಬೇಡಿಕೆಯಿದೆ. ಹೋಂಡಾ ಕಂಪನಿಯು ಪ್ರತಿತಿಂಗಳು ಈ ಸೆಗ್ಮೆಂಟ್ ಕಾರುಗಳನ್ನು ಕಡಿಮೆಯಿಂದರೂ 2-25 ಯುನಿಟ್ ಗಳಷ್ಟು ಮಾರಾಟ ಮಾಡುತ್ತಿದೆಯಂತೆ. ಟೊಯೊಟಾ ಕಂಪನಿಯ ಇನ್ನೋವಾ ಕಾರುಗಳಿಗೆ ಇಲ್ಲಿ ಅತ್ಯಧಿಕ ಬೇಡಿಕೆಯಿದೆ. ಸ್ಕಾರ್ಪಿಯೊ, ಎಂಡೊವರ್ ಮತ್ತು ಟಾಟಾ ಸಫಾರಿ ಕಾರುಗಳಿಗೂ ಬೇಡಿಕೆಯಿದೆ.

ಇಲ್ಲಿ ಹೈಎಂಡ್, ಸೂಪರ್ ಕಾರು, ಎಸ್ ಯುವಿಗಳೂ ಬೇಡಿಕೆ ಪಡೆದುಕೊಳ್ಳುತ್ತಿವೆ. ಡೀಲರೊಬ್ಬರ ಪ್ರಕಾರ ಹುಬ್ಬಳ್ಳಿ ಈಗ ಹಿಂದಿನಂತಿಲ್ಲ. ಸುತ್ತಮುತ್ತಲಿನ ಹಲವು ತಾಲೂಕುಗಳ ಜನರು ವಾಹನ ಖರೀದಿಗೆ ಹುಬ್ಬಳ್ಳಿ ನಗರವನ್ನೇ ಅವಲಂಬಿಸಿದ್ದಾರೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಕರ್ನಾಟಕದ ಪ್ರಮುಖ ವಾಹನ ಹಬ್ ಆಗೋ ಸೂಚನೆ ದಟ್ಟವಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Saturday, February 25, 2012, 13:13 [IST]
English summary
The sleepy town of Hubli in Karnataka has turned out to be a lucky hunting ground for car makers. Several carmakers have now opened their showrooms in Hubli after sales from this region increased.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+