ಹ್ಯುಂಡೈ ಹೊರತರಲಿದೆ ಎಲಂಟ್ರಾ ಮತ್ತು ಸೊನಾಟಾ

Hyundai Elantra Sonata sedans coming to India
ದೇಶದ ವಾಹನ ಮಾರುಕಟ್ಟೆಯಲ್ಲಿ ಎರಡನೇ ಅಗ್ರ ಕಾರು ಕಂಪನಿ ಹ್ಯುಂಡೈ ದೇಶದ ರಸ್ತೆಗೆ ಎರಡು ಪ್ರೀಮಿಯಂ ಕಾರುಗಳನ್ನು ಪರಿಚಯಿಸಲು ನಿರ್ಧರಿಸಿದೆ. ಮುಂದಿನ ಕೆಲವೇ ತಿಂಗಳಲ್ಲಿ ಪ್ರೀಮಿಯಂ ಸೆಡಾನ್ ಕಾರುಗಳಾದ ಎಲಂಟ್ರಾ ಮತ್ತು ಸೊನಾಟಾ ಕಾರುಗಳನ್ನು ಪರಿಚಯಿಸುವುದಾಗಿ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ನಾವು ಪ್ರೀಮಿಯಂ ಕಾರು ಮಾರುಕಟ್ಟೆಯೊಳಗೆ ಹೊಸ ಎರಡು ಕಾರುಗಳ ಮೂಲಕ ಈ ವರ್ಷ ಪ್ರವೇಶಿಸಲಿದ್ದೇವೆ" ಎಂದು ಹ್ಯುಂಡೈ ಮೋಟರ್ ಇಂಡಿಯಾದ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

ಕೊರಿಯಾದ ಕಾರು ಕಂಪನಿ ಹ್ಯುಂಡೈ ಸೊನಾಟಾ ಕಾರನ್ನು ಫೆಬ್ರವರಿ ತಿಂಗಳ ಅಂತ್ಯದಲ್ಲಿಯೇ ಪರಿಚಯಿಸಲಿದೆ. ಈ ಕಾರು ಹೋಂಡಾ ಸಿವಿಕ್, ಟೊಯೊಟಾ ಕೊರೊಲಾ, ಜಿಎಂ ಕ್ರೂಝ್ ಮತ್ತು ಫೋಕ್ಸ್ ವ್ಯಾಗನ್ ಜೆಟ್ಟಾ ಕಾರುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ನೂತನ ಎಲಂಟ್ರಾ ಕಾರಿನ ದರ ಸುಮಾರು 10-13 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಈಗಾಗಲೇ ಪಸ್ಸಾಟ್, ಹೋಂಡಾ ಅಕಾರ್ಡ್ ಮತ್ತು ಹೋಂಡಾ ಸೂಪರ್ಬ್ ಕಾರುಗಳು ಪ್ರೀಮಿಯಂ ಕಾರು ಮಾರುಕಟ್ಟೆಯನ್ನು ಆಳುತ್ತಿದೆ. ಈ ಸೆಗ್ಮೆಂಟಿನಲ್ಲಿ ಪ್ರತಿ ವರ್ಷ ಸುಮಾರು 15 ಸಾವಿರದಷ್ಟು ಪ್ರೀಮಿಯಂ ಕಾರುಗಳು ಮಾರಾಟವಾಗುತ್ತಿವೆ.

More from DriveSpark

Article Published On: Wednesday, February 8, 2012, 15:25 [IST]
English summary
Hyundai will re-enter the premium car segment in India with next generation Elantra and Sonata sedans over the next couple of months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+