ಕಾರಿನ ಆರೋಗ್ಯ ಚೆಕ್ ಮಾಡಿಸಲು ಹ್ಯುಂಡೈ ಕ್ಲಿನಿಕ್ ಗೆ ಕರೆತನ್ನಿ

ಯಶಸ್ವಿ ಹನ್ನೆರಡನೇ ವರ್ಷದ ರಾಷ್ಟ್ರ ಮಟ್ಟದ ಉಚಿತ ಕಾರು ಕೇರ್ ಕ್ಲಿನಿಕ್ ಸೇವೆಯನ್ನು ಮಾರ್ಚ್ ಹದಿನಾರರಿಂದ ಹ್ಯುಂಡೈ ಆರಂಭಿಸಿದೆ. ಈ ಸೇವೆ ಹ್ಯುಂಡೈನ ಎಲ್ಲಾ ವರ್ಕ್ ಶಾಪ್ ಗಳಲ್ಲೂ ಮಾರ್ಚ್ 25ರ ತನಕ ಇರಲಿದೆ. ಈ ಕ್ಲಿನಿಕ್ ನಲ್ಲಿ ಹಲವು ರಿಯಾಯಿತಿ ಸೇವೆಗಳು ಗ್ರಾಹಕರಿಗೆ ದೊರಕಲಿದೆ ಎಂದು ಕಂಪನಿ ಹೇಳಿದೆ.

ಕಾರು ಕೇರ್ ಸೇವೆ ಉಚಿತವಾಗಿರುತ್ತದೆ. ದೇಶದಲ್ಲಿರುವ 785 ವರ್ಕ್ ಶಾಪ್ ಗಳಲ್ಲಿ ಕಾರಿನ 85 ಪಾಯಿಂಟುಗಳನ್ನು ಉಚಿತವಾಗಿ ಚೆಕ್ ಮಾಡಿಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. ಅಂದರೆ ಎಂಜಿನ್, ಗೇರ್ ಬಾಕ್ಸ್, ಎಲೆಕ್ಟ್ರಿಕಲ್ ಸಿಸ್ಟಮ್ಸ್, ಬಾಡಿ ಪೇಂಟ್ ಇತ್ಯಾದಿಗಳನ್ನು ಚೆಕ್ ಮಾಡಿಸಿಕೊಳ್ಳಬಹುದು.

"ಇಲ್ಲಿವರೆಗೆ ಕಂಪನಿ ಆಯೋಜಿಸಿದ ಕಾರು ಕೇರ್ ಕ್ಲಿನಿಕ್ ಸೇವೆ ಯಶಸ್ವಿಯಾಗಿದೆ. ಗ್ರಾಹಕರೊಂದಿಗೆ ಸಂವಹನ ನಡೆಸಲು ಇದು ನಮಗೆ ಪ್ರಮುಖ ಅವಕಾಶ. ಈ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಗ್ರಾಹಕರಿಗೆ ತಿಳಿಸಲಾಗಿದೆ" ಎಂದು ಹ್ಯುಂಡೈ ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

ಇದೇ ಸಮಯದಲ್ಲಿ ಕಂಪನಿಯು ಗ್ರಾಹಕರಿಗೆ ಶೇಕಡ 10ರಷ್ಟು ವಿನಾಯಿತಿ ದರದಲ್ಲಿ ಬಿಡಿಭಾಗಗಳನ್ನು ನೀಡಲಿದೆ. ಜೊತೆಗೆ ಕಾರ್ಮಿಕ ಶುಲ್ಕದಲ್ಲೂ ಶೇಕಡ 20ರಷ್ಟು ವಿನಾಯಿತಿ ನೀಡಲಿದೆ.

ಇಷ್ಟು ಮಾತ್ರವಲ್ಲದೇ ಪ್ರತಿದಿನ ಬರುವ ಗ್ರಾಹಕರಿಗೆ ಲಾಟರಿ ಆಯ್ಕೆಯ ಮೂಲಕ ಕಾರಿನ ವಾರೆಂಟಿ ವಿಸ್ತರಣೆ, ಸ್ಯಾಮ್ ಸಂಗ್ ಟ್ಯಾಬ್ಲೆಟ್, ಮೊಬೈಲ್ ಫೋನ್, ಕ್ಯಾಮರಾ ಮತ್ತು ಇನ್ನಿತರ ಆಸಕ್ತಿದಾಯಕ ಉಡುಗೊರೆಗಳನ್ನು ಪಡೆಯುವ ಅವಕಾಶವೂ ಇದೆ. ನಿಮ್ಮಲ್ಲಿ ಹ್ಯುಂಡೈ ಕಂಪನಿಯ ಕಾರಿದ್ದರೆ ಚೆಕ್ ಮಾಡಿಸಿಕೊಳ್ಳಬಹುದು. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, March 16, 2012, 9:07 [IST]
English summary
Hyundai Motors India has announced the launch of its 12th nation wide car care clinic. The Hyundai car care clinic will be open from 16th March until the 25th at all Hyundai workshops. The carmaker is hoping its customers can enjoy the best facilities along with attractive offers during this clinic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+