ಹೊಸ ಹ್ಯುಂಡೈ ಐ20 ಫ್ಲೂಡಿಕ್ ರಸ್ತೆಗೆ, ದರ 4.73 ಲಕ್ಷ ರು.
ಇದು ಹ್ಯುಂಡೈ ಐ20ಯ ಫೇಸ್ ಲಿಫ್ಟೆಡ್ ಆವೃತ್ತಿ. ಫ್ಲೂಡಿಕ್ ವಿನ್ಯಾಸ ಹೊರತುಪಡಿಸಿ ಇನ್ಯಾವುದೇ ಫೀಚರುಗಳು, ವಿನ್ಯಾಸಗಳು ಬದಲಾವಣೆಯಾಗದಿರುವ ನಿರೀಕ್ಷೆಯಿದೆ. ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಫ್ಲೂಡಿಕ್ ಐ20 ಕಾರನ್ನು ಕಂಪನಿಯು ಸೀದಾ ಭಾರತಕ್ಕೆ ಪರಿಚಯಿಸಿದ್ದು ವಿಶೇಷ. ಬೇರೆ ಯಾವುದೇ ದೇಶಗಳಲ್ಲಿ ಪರಿಚಯಿಸಿಲ್ಲ.
ನೂತನ ಕಾರಿನ ಪ್ರಮುಖ ಬದಲಾವಣೆಯೆಂದರೆ ಎಂಜಿನ್ ತಂತ್ರಜ್ಞಾನ. ಇದು 1.2 ಲೀಟರ್ ಪೆಟ್ರೋಲ್ ವಿಟಿವಿಟಿ ಎಂಜಿನ್ ಹೊಂದಿದೆ. ಇದು ಸುಮಾರು 84 ಹಾರ್ಸ್ ಪವರ್ ಮತ್ತು ನೀಡಲಿದೆ. ಹಳೆಯ ಐ20 80 ಹಾರ್ಸ್ ಪವರ್ ನೀಡುತ್ತಿತ್ತು. ಡೀಸೆಲ್ ಕಾರು 90 ಹಾರ್ಸ್ ಪವರಿನ 1.4 ಲೀಟರ್ ಕಾಮನ್ ರೈಲ್ ಟರ್ಬೊ ಎಂಜಿನ್ ಹೊಂದಿದೆ.
ಇದೀಗ ಹ್ಯುಂಡೈ ಐ20 ಫ್ಲೂಡಿಕ್ ಹ್ಯಾಚ್ ಬ್ಯಾಕ್ ಕಾರಿನ ಮುಂಭಾಗ ಮತ್ತು ಹಿಂಭಾಗದ ವಿನ್ಯಾಸದಲ್ಲಿ ಬದಲಾವಣೆಯಾಗಿ ಆಕರ್ಷಕವಾಗಿ ಕಾಣುತ್ತದೆ. ಕಂಪನಿಯ ಫ್ಲೂಡಿಕ್ ವಿನ್ಯಾಸಕ್ಕೆ ದೇಶದ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಪನಿಯು ಹೆಚ್ಚಿನ ಕಾರುಗಳಿಗೆ ಫ್ಲೂಡಿಕ್ ಟಚ್ ನೀಡಲು ನಿರ್ಧರಿಸಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications









