ಹ್ಯುಂಡೈ ಫ್ಲೂಡಿಕ್ ಸೊನಾಟಾ ರಸ್ತೆಗೆ, ದರ 18 ಲಕ್ಷ ರು.

ಹ್ಯುಂಡೈ ಫ್ಲೂಡಿಕ್ ವಿನ್ಯಾಸದ ಕಾರುಲೋಕಕ್ಕೆ ಸೊನಾಟಾ ಕೂಡ ಜೊತೆಯಾಗಿದೆ. ಹ್ಯುಂಡೈ ಕಂಪನಿಯು ನೂತನ ಪ್ರೀಮಿಯಂ ಸೆಡಾನ್ ಕಾರು ಫ್ಲೂಡಿಕ್ ಸೊನಾಟಾ ಪರಿಚಯಿಸಿದೆ. ಇದರ ಆರಂಭಿಕ ದರ 18.52 ಲಕ್ಷ ರುಪಾಯಿ. ಇದು ದೆಹಲಿ ಎಕ್ಸ್ ಶೋ ರೂಂ ದರ.

ಇದರೊಂದಿಗೆ ಕಂಪನಿಯು ಫ್ಲೂಡಿಕ್ ಸೊನಾಟಾದ ಆಟೋಮ್ಯಾಟಿಕ್ ಆವೃತ್ತಿ ಕೂಡ ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 20.61 ಲಕ್ಷ ರುಪಾಯಿ. ಈ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನಲ್ಲಿ ನೂತನ ಸೊನಾಟಾ ಅನಾವರಣಗೊಂಡಿತ್ತು.

ಕೊರಿಯಾದ ಕಾರುತಯಾರಿಕಾ ಕಂಪನಿಯ ನೂತನ ಸೆಡಾನ್ ಆವೃತ್ತಿಯು ಹಲವು ಸುರಕ್ಷತೆ ಮತ್ತು ಆರಾಮದಾಯಕತೆ ಫೀಚರುಗಳೊಂದಿಗೆ ಬಂದಿದೆ. ಸ್ಮಾರ್ಟ್ ಕೀ, ಬಟನ್ ಮೂಲಕ ಕಾರು ಸ್ಟಾರ್ಟ್ ಮಾಡುವ ಫೀಚರು, ಹಿಂಭಾಗ ನೋಡುವ ಕ್ಯಾಮರಾ ಇತ್ಯಾದಿ ಆರಾಮದಾಯಕತೆಯ ಫೀಚರುಗಳಿವೆ.

ಆರು ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ(ಇಎಸ್ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್) ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್(ಇಬಿಡಿ) ಮುಂತಾದ ಸೇಫ್ಟಿ ಫೀಚರುಗಳಿವೆ.

ನೂತನ ಫ್ಲೂಡಿಕ್ ಸೊನಾಟಾ 2.4 ಲೀಟರಿನ ಜಿಡಿಐ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 200 ಹಾರ್ಸ್ ಪವರ್ ಮತ್ತು 255ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

More from DriveSpark

Article Published On: Saturday, March 24, 2012, 11:23 [IST]
English summary
Hyundai has launched its latest premium sedan, the new Fluidic Sonata with a starting price of Rs.18.52 lakhs. Hyundai has launched an automatic variant of the Fluidic Sonata priced at Rs. 20.61 lakhs (ex showroom Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+