ಏರ್‌ಬ್ಯಾಗ್ ಸಮಸ್ಯೆ: ಲಕ್ಷ ಲಕ್ಷ ಹ್ಯುಂಡೈ ಕಾರುಗಳ ಹಿಂಪಡೆತ

ಹ್ಯುಂಡೈ ಮೋಟರ್ಸ್ ಕಂಪನಿಯ ಮತ್ತೊಂದು ರಿಕಾಲ್ ಪರ್ವ ಆರಂಭವಾಗಿದೆ. ಏರ್ ಬ್ಯಾಗ್ ಸಮಸ್ಯೆ ಹಿನ್ನಲೆಯಲ್ಲಿ ಕಂಪನಿಯು ಸುಮಾರು 2,20,000 ಸಾಂತಾ ಫೆ ಮತ್ತು ಸೊನಾಟಾ ಸೆಡಾನ್ ಕಾರುಗಳನ್ನು ಹಿಂಪಡೆಯಲಿದೆ.

2007ರಿಂದ 2009ರವರೆಗೆ ಉತ್ಪಾದನೆಯಾದ ಸುಮಾರು 2 ಲಕ್ಷಕ್ಕೂ ಹೆಚ್ಚು ಸಾಂತಾ ಫೆ ಮತ್ತು ಸೊನಾಟಾ ಕಾರುಗಳನ್ನು ಕಂಪನಿಯು ಹಿಂಪಡೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಪ್ರಾಧಿಕಾರ(ಅಮೆರಿಕ) ಹೇಳಿದೆ. ಈ ರಿಕಾಲ್ ಭಾರತದ ಕಾರುಗಳಿಗೆ ಅನ್ವಯವಾಗುವುದಿಲ್ಲ.

ಹ್ಯುಂಡೈ ಸಾಂತಾ ಫೆ ಕಾರಿನ ಮುಂಭಾಗದ ಪ್ರಯಾಣಿಕ ಏರ್ ಬ್ಯಾಗ್ ಅಪಘಾತದ ಸಮಸ್ಯೆಯಲ್ಲಿ ತೆರೆಯುವುದಿಲ್ಲವೆಂದು ವಿಶ್ಲೇಷಕರು ಹೇಳಿದ್ದಾರೆ. ಕ್ಲಾಸಿಫಿಕೆಷನ್ ಸಿಸ್ಟಮ್ ಸಮಸ್ಯೆಯಿಂದ ಈ ತೊಂದರೆ ಕಾಣಿಸಿಕೊಂಡಿದೆ. ಇದನ್ನು ಸರಿಪಡಿಸಿಕೊಡುವಂತೆ ಅಮೆರಿಕ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ.

ಇದೇ ರೀತಿಯ ಸಮಸ್ಯೆ ಹ್ಯುಂಡೈ ಸೊನಾಟಾ ಕಾರಿನಲ್ಲೂ ಪತ್ತೆಯಾಗಿದೆ. ಇದಕ್ಕಾಗಿ 2012-13 ಮಾಡೆಲಿನ ಸುಮಾರು 22 ಸಾವಿರ ಸೊನಾಟಾ ಸೆಡಾನುಗಳನ್ನು ಹಿಂಪಡೆಯಲು ಕಂಪನಿ ನಿರ್ಧರಿಸಿದೆ.

ವಿದೇಶಗಳಲ್ಲಿ ವಾಹನಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಕಂಡುಬಂದರೂ ವಾಹನಗಳನ್ನು ಹಿಂಪಡೆಯಲಾಗುತ್ತದೆ. ಆದರೆ ದೇಶದಲ್ಲಿ ಇನ್ನೂ ಇಂತಹ ವ್ಯವಸ್ಥೆ ಬಂದಿಲ್ಲ. ಹೀಗಾಗಿ ಬ್ರಾಂಡ್ ಇಮೇಜಿಗೆ ಪೆಟ್ಟಾಗುವ ಭೀತಿಯಲ್ಲಿ ವಾಹನ ಕಂಪನಿಗಳು ಹಿಂಪಡೆತಕ್ಕೆ ಮುಂದಾಗುತ್ತಿಲ್ಲ.

More from DriveSpark

Article Published On: Tuesday, July 31, 2012, 12:28 [IST]
English summary
Hyundai has announced yet another recall campaign. This time around Hyundai is recalling more than 220,000 Santa Fe and Sonata sedans for a potential airbag flaw. According to the National Highway Traffic Safety Administration [United States of America], the recall campaign will witness close to 200,000 SUV's from the 2007-2009 model years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+