ಹ್ಯುಂಡೈ ಸ್ಯಾಂಟ್ರೊ ಕ್ಷಿಂಗ್ ಸಣ್ಣಕಾರಿಗೆ ನೋ ವರಿ
ದೇಶದ ಕಾರು ಮಾರುಕಟ್ಟೆಗೆ ಹ್ಯುಂಡೈ ಮೋಟರ್ಸ್ ಪ್ರಪ್ರಥಮ ಬಾರಿಗೆ ಎಪ್ಸಿಲೊನ್ ಪೆಟ್ರೋಲ್ ಎಂಜಿನಿನ ಸ್ಯಾಂಟ್ರೊ ಸಣ್ಣಕಾರನ್ನು ಪರಿಚಯಿಸಿತ್ತು. ನಾಲ್ಕು ಸಿಲಿಂಡರಿನ 999 ಸಿಸಿಯ ಈ ಪೆಟ್ರೋಲ್ ಎಂಜನ್ 61 ಹಾರ್ಸ್ ಪವರ್ ಮತ್ತಿ ಮೂರು ಸಾವಿರ ಆವರ್ತನಕ್ಕೆ 110 ಟಾರ್ಕ್ ಪವರ್ ನೀಡುತ್ತದೆ. ಕಂಪನಿಯು ನಂತರ 1.1 ಲೀಟರಿನ ಎಂಜಿನ್ ಪರಿಚಯಿಸಿತ್ತು. ಇದು 64 ಅಶ್ವಶಕ್ತಿ ಮತ್ತು 97 ಎನ್ಎಂ ಟಾರ್ಕ್ ಪವರ್ ನೀಡುತ್ತಿದೆ.
ಕಂಪನಿಯು ಈ ದೊಡ್ಡ ಎಂಜಿನನ್ನು ಪ್ರಪ್ರಥಮ ಬಾರಿಗೆ ಸ್ಯಾಂಟ್ರೊ ಕ್ಷಿಂಗ್ ಕಾರಿಗೆ ಅಳವಡಿಸಿತ್ತು. ಮಾರುತಿ ಝೆನ್ ಮುಂತಾದ ಪ್ರತಿಸ್ಪರ್ಧಿ ಕಾರುಗಳಿಗೆ ಹೋಲಿಸಿದರೆ ಸ್ಯಾಂಟ್ರೊ ಕ್ಷಿಂಗ್ ಕಾರಿನ ಎಂಜಿನ್ ಹೆಚ್ಚು ಶಕ್ತಿಶಾಲಿಯಾಗಿದೆ. 1.1 ಲೀಟರಿನ ಎಪ್ಸಿಲೊನ್ ಎಂಜಿನಿನ ಸ್ಯಾಂಟ್ರೊ ಕ್ಷಿಂಗ್ ಕಾರಿಗೆ ದೇಶದಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ.
ಈಗ ಸ್ಯಾಂಟ್ರೊ ಕ್ಷಿಂಗ್ ಕಾರು ಪೆಟ್ರೋಲ್, ಪೆಟ್ರೋಲ್-ಎಲ್ ಪಿಜಿ ಆವೃತ್ತಿಗಳಲ್ಲಿ ದೊರಕುತ್ತದೆ. ಸ್ಯಾಂಟ್ರೊ ಕ್ಷಿಂಗ್ ಹೆಚ್ಚು ಜನಪ್ರಿಯವಾಗಲು ಅದರ ಡೀಸೆಂಟ್ ಮೈಲೇಜ್ ಕೂಡ ಕಾರಣವಾಗಿದೆ. ಸ್ಯಾಂಟ್ರೊ ಕ್ಷಿಂಗ್ ಹೆದ್ದಾರಿಯಲ್ಲಿ ಪ್ರತಿಲೀಟರ್ ಇಂಧನಕ್ಕೆ ಸುಮಾರು 17 ಕಿ.ಮೀ. ಮೈಲೇಜ್ ನೀಡುತ್ತದೆ. ಸಿಟಿ ರಸ್ತೆಯಲ್ಲಿ ಲೀಟರ್ ಗೆ ಸುಮಾರು 14 ಕಿ.ಮೀ. ಮೈಲೇಜ್ ನೀಡುತ್ತದೆ.
ನಿಮ್ಮಲ್ಲೂ ಸ್ಯಾಂಟ್ರೊ ಕ್ಷಿಂಗ್ ಕಾರಿದೆಯಾ? ಅದರ ಕಾರ್ಯಕ್ಷಮತೆಯ ಬಗ್ಗೆ ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ಅಭಿಪ್ರಾಯ ಹಂಚಿಕೊಳ್ಳಿ.


Click it and Unblock the Notifications









