ವಾಹನಗಳ ಧೇನಿಸುವನಿಗೆ ನನ್ನ ಪ್ರೀತಿ ಇನಿದನಿ ಅರಿವಾದಿತೇ?

By * ಸ್ಕೂಟಿ

I love Car Bike
ಪ್ರೀತಿಯ ವಾಹನ ಬರಹಗಾರನಿಗೆ ಪ್ರೇಮಿಗಳ ದಿನದ ಶುಭಾಶಯಗಳು. ಪತ್ರತಪ್ಪಿಬರೆದಿಲ್ಲ, ಅನುಮಾನ, ಅಂಜಿಕೆಯಿಂದ ನೋಡಬೇಡ. ಈ ಪ್ರೇಮಿಗಳ ದಿನದಂದು ನನ್ನ ಪ್ರಿಯತಮನಿಗೆ ನಾನು ಬರೆಯುತ್ತಿರುವ ಪ್ರೇಮಪತ್ರವಿದು.

ಪ್ರತಿದಿನ ನಿದ್ದೆಯಲ್ಲೂ ಕಾರು ಬೈಕು ಜೀಪು ಲಾರಿ ಎಂದು ಕನವರಿಸುವ ನಿನಗೆ ಪ್ರೀತಿಪ್ರೇಮದ ಬಗ್ಗೆ ಗೊತ್ತಿರಬಹುದೇ ಎನ್ನುವ ಅನುಮಾನವೂ ನನಗಿದೆ.ಆದರೂ ಈ ಪ್ರೇಮಿಗಳ ದಿನದಂದು ಅಪಾರ ಪ್ರೇಮದಿಂದ ಈ ಪತ್ರಬರೆದಿರುವೆ. ವರ್ಷದ ಎಲ್ಲಾ ದಿನವೂ ಟಾರ್ಕ್ ಪವರ್ ಮತ್ತು ಹಾರ್ಸ್ ಪವರ್ ಕುರಿತೇ ಚಿಂತಿಸಬೇಡ.

ಅಚ್ಚರಿಯಾಗುತ್ತಿದೆ ನಿನ್ನನ್ನು ನೋಡಿ. ಸ್ವಿಫ್ಟ್ ಬಿಡುಗಡೆಯಾದಗ ತಾಜ್ ಮಹಲ್ ಕಂಡಂತೆ ಆಡುತ್ತಿ, ಮಹೀಂದ್ರ ಎಕ್ಸ್ ಯುವಿ ನೋಡಿದ ನಿನ್ನ ಕಣ್ಣಿನ ಬೆರಗು ಮರೆಯುವಂತಿಲ್ಲ. ಯಾರಾದರೂ ಹೊಸ ಕಾರು ಖರೀದಿಸಿದಾಗ ಹೊಸ ಬಟ್ಟೆ ದೊರಕಿದ ಮಕ್ಕಳಂತೆ ಯಾಕೆ ವರ್ತಿಸುತ್ತಿಯೋ ನನಗಿನ್ನೂ ಗೊತ್ತಾಗಿಲ್ಲ.

ಕಾರಿನ ಬೋಲ್ಟಿನಿಂದ ಬಾನೆಟ್ ವರೆಗೆ ವಿಮರ್ಶಿಸುವ ನೀನೆಂದರೆ ನನಗೆ ಅಚ್ಚರಿ. ಸೇಫ್ ಆಗಿ ಡ್ರೈವ್ ಮಾಡಿರೋ ಅಂತ ಸಲಹೆ ನೀಡೋ ನಿನ್ನ ಕುರಿತು ನನಗಿದೆ ಕಾಳಜಿ. ಹೊಸ ಕಾರು ಬೈಕು ಬಂದಿದೆ ಎಂದು ಎಲ್ಲರಿಗಿಂತ ಮುನ್ನ ಸಂಭ್ರಮಿಸುವ ನಿನಗೆ ಕೆಂಪು ಅಂಗಿ ತೊಡಿಸಿ ತಬ್ಬಿಕೊಳ್ಳುವಾಸೆ ನನಗೆ.

ನೀನು ಹೃದಯವೇ ಇಲ್ಲದ ವಾಹನಗಳ ಕುರಿತು ಬರೆಯುವುದನ್ನು ನೋಡಿದರೆ ಒಮ್ಮೊಮ್ಮೆ ನನಗೆ ಅತೀವ ಸಂತೋಷ, ಅಚ್ಚರಿಯಾಗುತ್ತದೆ. ಎಲ್ಲವನ್ನೂ ಪ್ರೀತಿಸುವ ನಿನಗೆ ನನ್ನಲ್ಲೂ ಅದೇ ಪ್ರೀತಿ ಹುಟ್ಟಲಿ ಎನ್ನುವುದು ನನ್ನ ಕೋರಿಕೆ.

ಕೊನೆಗೂ ನಾನ್ಯಾರೆಂದು ಹೇಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಪ್ರತಿದಿನ ನಿನಗೆ ಬರುವ ಸಾವಿರ ಸಾವಿರ ಹಿಟ್ಸ್ ಗಳಲ್ಲಿ ನನ್ನದೂ ಒಂದು ಪಾಲಿದೆ. ಕಾರು ಬೈಕು ಜೀಪು ಲಾರಿ ಬಸ್ಸು ನಿನ್ನ ಬದುಕಾದರೆ ಬೇಡವೆನ್ನಲು ನಾನು ಯಾರು. ನೀನು ಸಾಗುವ ಬದುಕ ಕಾರಿನಲ್ಲಿ ಪಕ್ಕದ ಸೀಟು ನನಗೆ ಮೀಸಲಿರಿಸು ಗೆಳೆಯ. ಒಟ್ಟಾಗಿ ಸವಾರಿ ಮಾಡೋಣ. ಕೊನೆವರೆಗೂ... (ಸ್ಕೂಟಿ ಹೆಸರಲ್ಲಿ ಬಂದ ಈ ಪತ್ರವನ್ನು ಹಾಗೇ ಸುಮ್ಮನೆ ಪ್ರಕಟಿಸಲಾಗಿದೆ).

More from DriveSpark

Article Published On: Tuesday, February 14, 2012, 12:09 [IST]
English summary
Its always special when our readers appreciate our work. On this Valentine's day we received this lovely letter from our reader who has not only appreciated our work but has also wished us luck. Thanks very much.
Read more on ಕಾರು car bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+