ಇಂಡಿಯನ್ ಜಿಪಿ; ನಾಯಿಗಳ ಹಾವಳಿ ತಡೆಯಲು ಭಾರಿ ಭದ್ರತೆ

ಕಳೆದ ಬಾರಿ ಚೊಚ್ಚಲ ಇಂಡಿಯನ್ ಗ್ರಾಂಡ್ ಪ್ರಿ ಫಾರ್ಮುಲಾ ಒನ್ ರೇಸ್ ಆಯೋಜನೆಗೊಂಡ ಸಂದರ್ಭದಲ್ಲಿ ಆಯೋಜಕರು ಸ್ವಲ್ಪ ಮುಜುಗರಕ್ಕೆ ಒಳಗಾಗುವಂತಾಗಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಘಟನೆಗಳಿಗೆ ಎಡೆಮಾಡಿಕೊಡದಂತೆ ಮುಂಜಾಗ್ರತೆ ವಹಿಸುತ್ತಿರುವ ಆಯೋಜಕರು ನಾಯಿಗಳ ಹಾವಳಿಯನ್ನು ತಡೆಯಲು ಬಿಗು ಸಂರಕ್ಷಣಾ ವಲಯವನ್ನು ಏರ್ಪಡಿಸಿದ್ದಾರೆ.

ನವದೆಹಲಿಯ ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಅಂತರಾಷ್ಟ್ರೀಯ ಸೆರ್ಕ್ಯೂಟ್‌ನಲ್ಲಿ ಈಗಾಗಲೇ ಎಫ್-1 ಅಭ್ಯಾಸ ರೇಸ್‌ಗಳು ಆರಂಭಿಸಿದ್ದು, ಭಾನುವಾರ ಅಪರಾಹ್ನ ಬಳಿಕ ಚಾಂಪಿಯನ್‌ಶಿಪ್ ರೇಸ್ ನಡೆಯಲಿದೆ. ಇದರಂತೆ ನಾಯಿ ಸೇರಿದಂತೆ ಇತರ ಪ್ರಾಣಿಗಳು ಟ್ರ್ಯಾಕ್‌ಗೆ ಬರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

ಶ್ರವಣಾತೀತ ಪರಿಕರಗಳನ್ನು ಬಳಸುವ ಮೂಲಕ ನಾಯಿಗಳ ಹಾವಳಿಗಳನ್ನು ತಡೆಗಟ್ಟಲಾಗುತ್ತಿದೆ. ಅಲ್ಲದೆ ನಾಯಿಗಳ ಹಾವಳಿಗಳನ್ನು ತಡೆಯಲು ಟ್ರ್ಯಾಕ್ ಸುತ್ತಲು ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಫ್-1 ಸೆರ್ಕ್ಯೂಟ್ ಆರರಿಂದ ಏಳು ಎಂಟ್ರಿ ಪಾಯಿಂಟ್‌‍ಗಳಿದ್ದು ಎಲ್ಲ ಕಡೆಗಳಲ್ಲೂ ಸಂರಕ್ಷಣೆ ನೀಡಲಾಗಿದೆ. ಕಳೆದ ಬಾರಿ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಿಂದ ನಾಯಿ ಒಳ ನುಗ್ಗಿದ್ದರ ಪರಿಣಾಮ ಸಮಸ್ಯೆ ಸೃಷ್ಟಿಯಾಗಿತ್ತು ಎಂದು ಸಂಘಟಕರು ತಿಳಿಸಿದ್ದಾರೆ.

More from DriveSpark

Article Published On: Saturday, October 27, 2012, 9:05 [IST]
English summary
Formula 1 organisers in India say they are determined to ensure that the track near Delhi is completely "dog proof" ahead of Sundays race.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+