ದೇಶದಲ್ಲಿ ದೊಡ್ಡಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡು

ಹೆದ್ದಾರಿಯಲ್ಲಿ ಅಥವಾ ಸಿಟಿ ಟ್ರಾಫಿಕ್ ನಡುವೆ ರಸ್ತೆಯನ್ನೊಮ್ಮೆ ದಿಟ್ಟಿಸಿನೋಡಿ. ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಎಕ್ಸ್‌ಎಕ್ಸ್4, ನಿಸ್ಸಾನ್ ಸನ್ನಿ, ಸ್ಕೋಡಾ ರಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಮುಂತಾದ ಕಾರುಗಳು ಹೆಚ್ಚಾಗಿ ಕಾಣುತ್ತದೆ. ಅದೇ ರೀತಿ ವ್ಯಾಗನಾರ್, ಸ್ಯಾಂಟ್ರೊ, ಸ್ಪಾರ್ಕ್ ಸಂಖ್ಯೆ ಕಡಿಮೆಯಿರುವುದು ಗೋಚರವಾಗುತ್ತದೆ.

ಕೆಲವೇ ವರ್ಷಗಳ ಹಿಂದೆ ರಸ್ತೆತುಂಬಾ ತುಂಬಿಕೊಂಡಿದ್ದ ಸಣ್ಣಕಾರುಗಳಿಗೇನಾಯ್ತು? ಜನರೇಕೆ ಈ ಪರಿ ದೊಡ್ಡಕಾರುಗಳಿಗೆ ಮುಗಿಬೀಳುತ್ತಿದ್ದಾರೆ? ಸೆಡಾನ್, ಸ್ಪೋರ್ಟ್, ಎಂಪಿವಿ ಕಾರುಗಳ ಬೇಡಿಕೆ ಹೆಚ್ಚಲು ಕಾರಣವೇನು? ಮುಂತಾದ ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜ.

ಸುಧಾರಿಸಿದ ಆರ್ಥಿಕ ಪರಿಸ್ಥಿತಿ ಮತ್ತು ಹೆಚ್ಚಿದ ನಿರೀಕ್ಷೆಯಿಂದಾಗಿ ಜನರಿಗೆ ಸಣ್ಣಕಾರುಗಳು ಹೆಚ್ಚು ದಿನ ತೃಪ್ತಿ ನೀಡುತ್ತಿಲ್ಲ. ಸಣ್ಣಕಾರು ಹೊಂದಿರುವರ ಮನದ ಮೂಲೆಯಲ್ಲಿ ದೊಡ್ಡಕಾರಿನ ಕನಸು ಮೊಳಕೆಯೊಡೆಯುತ್ತಿದೆ. ಪರಿಣಾಮವಾಗಿ ಕಾಂಪ್ಯಾಕ್ಟ್ ಸೆಡಾನ್ ಕಾರುಗಳ ಮಾರಾಟ ಏರಿಕೆ ಕಾಣುತ್ತಿದೆ.

ಜನರು ಸಣ್ಣ ಹ್ಯಾಚ್‌ಬ್ಯಾಕ್ ಖರೀದಿ ಬಿಟ್ಟು ಬೃಹತ್ ಸೆಡಾನ್ ಅಥವಾ ಎಂಪಿವಿ ಖರೀದಿಗೆ ಗಮನ ನೀಡುತ್ತಿದ್ದಾರೆ. ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಎಕ್ಸ್‌ಎಕ್ಸ್4, ನಿಸ್ಸಾನ್ ಸನ್ನಿ, ಸ್ಕೋಡಾ ರಾಪಿಡ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಮುಂತಾದ ಜನಪ್ರಿಯ ಸೆಡಾನ್ ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ.

ಕೆಲವು ವರ್ಷಗಳ ಹಿಂದೆ ರಸ್ತೆಯಲ್ಲಿ ಮಾರುತಿ ಸುಜುಕಿ ವ್ಯಾಗನಾರ್, ಹ್ಯುಂಡೈ ಸ್ಯಾಂಟ್ರೊ ಮತ್ತು ಷೆವರ್ಲೆ ಸ್ಪಾರ್ಕ್ ಪಾರಮ್ಯ ಹೆಚ್ಚಿತ್ತು. ಇದೀಗ ಈ ಕಾರುಗಳ ಮಾರಾಟ ಇಳಿಕೆ ಕಾಣುತ್ತಿದೆ. ಹಾಗಂತ ಸಣ್ಣಕಾರುಗಳ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ಕಾರು ಕಂಪನಿಗಳಿಗೆ ಚಿಂತೆ ಉಂಟುಮಾಡಿಲ್ಲ. ಇದೇ ಸಮಯದಲ್ಲಿ ದೊಡ್ಡಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಕಂಪನಿಗಳಿಗೆ ಹೆಚ್ಚು ಲಾಭಕರವಾಗಿ ಪರಿಣಮಿಸಿದೆ.

ವಿವಿಧ ವಯೋಮಾನಕ್ಕೆ ತಕ್ಕಂತೆ ಕಾರು ಖರೀದಿಸುವ ಮನೋಭಾವವೂ ಹೆಚ್ಚಾಗುತ್ತಿದೆ. ಯುವಪೀಳಿಗೆ ಹೆಚ್ಚು ಸ್ಥಳಾವಕಾಶವಿರುವ ಮತ್ತು ಹೆಚ್ಚು ಆರಾಮದಾಯಕತೆ ನೀಡುವ ಕಾರುಗಳಿಗೆ ಹೆಚ್ಚು ಹಣ ವಿನಿಯೋಗಿಸಲು ಸಿದ್ಧರಿರುತ್ತಾರೆ. ಮಾರುತಿ ಸುಜುಕಿ ಮುಂತಾದ ಸಣ್ಣಕಾರು ಸ್ಪೆಷಲಿಸ್ಟ್ ಕಂಪನಿಯೂ ಎಂಪಿವಿ ಕಾರು ಹೊರತರಲು ಆರಂಭಿಸುವುದು ಯಾಕೆಂದು ನಿಮಗೀಗ ಅರಿವಾಗಿರಬಹುದು.

ಹಳೆಯ ಜಮಾನಕ್ಕೆ ಹೋಲಿಸಿದರೆ ಈಗ ಸೆಡಾನ್ ಕಾರುಗಳ ದರ ಸುಮಾರು 2 ಲಕ್ಷ ರು.ನ್ಟು ಕಡಿಮೆಯಾಗಿದೆ. ಸುಮಾರು 6 ಲಕ್ಷ ಆರಂಭಿಕ ದರಕ್ಕೆ ಸೆಡಾನ್ ಕಾರುಗಳು ದೊರಕುತ್ತವೆ. ಈ ಹಿಂದೆ ಸೆಡಾನ್ ಆರಂಭಿಕ ದರ 8 ಲಕ್ಷ ರು. ಆಗಿತ್ತು. ಕೊಂಚ ದುಡ್ಡು ಹೆಚ್ಚು ಕೊಟ್ಟು ವಿಶಾಲ ಆರಾಮದಾಯಕ ಕಾರೊಂದನ್ನು ಖರೀದಿಸುವ ವಿಶಾಲ ಮನೋಭಾವವೂ ಹೆಚ್ಚಾಗುತ್ತಿದೆ.

ರಸ್ತೆಗಳು ಇನ್ನಷ್ಟು ವಿಶಾಲವಾಗಬೇಕಿದೆ!

More from DriveSpark

Article Published On: Monday, April 16, 2012, 10:56 [IST]
English summary
The Indian car market which was predominantly a small car market has shown a visible division towards bigger cars. If we notice the sales of small cars in the last two years we will only see a slight growth while sales of sedans and MPVs have been growing at a faster pace.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+