ಇಂಡಿಯನ್ ಗ್ರಾಂಡ್ ಪ್ರಿಗೆ ಕ್ಷಣಗಣನೆ ಆರಂಭ; ನೀವು ರೆಡಿನಾ..?
ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಫಾರ್ಮುಲಾ ಒನ್ ಗ್ರಾಂಡ್ ಪ್ರಿ ರೇಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷ ನಡೆದ ಚೊಚ್ಚಲ ಎಫ್-1 ರೇಸ್ ಭಾರಿ ಯಶಸ್ಸು ಕಂಡಿತ್ತಲ್ಲದೆ ಯುವ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.
ಕ್ರಿಕೆಟ್‌ನ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹಿತ ಅನೇಕ ಬಾಲಿವುಡ್ ಗಣ್ಯರು ಈ ಅದ್ಧೂರಿ ರೇಸ್‌ಗೆ ಸಾಕ್ಷಿಯಾಗಿದ್ದರು. ಇದೀಗ ಎರಡನೇ ಆವೃತ್ತಿಯು ಅಕ್ಟೋಬರ್ 26ರಿಂದ 28ರ ವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಸಾಗಲಿದೆ. ಅಕ್ಟೋಬಲ್ 26ರಂದು ಮೊದಲ ಆನ್-ಟ್ರ್ಯಾಕ್ ಸೆಸನ್ ನಡೆಯಲಿದೆ. ಇದಾದ ಬಳಿಕ ಜೆಕೆ ರೇಸಿಂಗ್ ಏಷಿಯಾ ಸಿರೀಸ್ ಹಾಗೂ ಎಫ್1 ಅಭ್ಯಾಸ ಅವಧಿಯು ಸಾಗಲಿದೆ. ಬಳಿಕ ಮಧ್ಯಾಹ್ನ ಎರಡು ಗಂಟೆಗೆ ಎರಡನೇ ಎಫ್-2 ಅವಧಿಗೂ ಮುನ್ನ ಎಆರ್‌ಎಫ್ ಎಫ್2000 ಕಾರು ಹರಾಜು ನಡೆಯಲಿದೆ.
ಎಫ್1 ಅರ್ಹತಾ ಸುತ್ತು ಶನಿವಾರ 2ಗಂಟೆಗೆ ನಡೆಯಲಿದ್ದು, ಅಂತಿಮ ರೇಸ್ ಅಕ್ಟೋಬರ್ 28, ಭಾನುವಾರ ಸಂಜೆ 3ರ ವೇಳೆಗೆ ಸಾಗಲಿದೆ. ದೇಶಿಯ ಸಹಿತ ಅಂತರಾಷ್ಟ್ರೀಯ ದರ್ಜೆಯ ಚಾಲಕರು ಟೂರ್ನಿಗೆ ಮೆರಗು ನೀಡಲಿದ್ದಾರೆ.
ಇಂಡಿಯನ್ ಗ್ರಾಂಡ್ ಪ್ರಿ ಸಂಪೂರ್ಣ ವೇಳಾಪಟ್ಟಿ ಇಂತಿದೆ:ಅಕ್ಟೋಬರ್ 26, ಶುಕ್ರವಾರ:
- ಜೆಕೆ ರೇಸಿಂಗ್ ಏಷಿಯಾ ಸಿರೀಸ್ (ಅಭ್ಯಾಸ): 08:45-09:15
- ಎಫ್1 ಮೊದಲ ಅಭ್ಯಾಸ: 10:00-11:30
- ಎಂಆರ್‌ಎಫ್ ಚಾಲೆಂಜ್ (ಅಭ್ಯಾಸ): 12:00-12:30
- ಎಫ್1 ಪೆಡೊಕ್ ಕ್ಲಬ್: 12:35-13:45
- ಎಫ್1 ಸೆಕೆಂಡ್ ಪ್ರಾಕ್ಟಿಸ್: 14:00-15:30
- ಎಫ್1 ಸುದ್ದಿಗೋಷ್ಠಿ: 16:00-17:00
- ಎಂಆರ್‌ಎಫ್ ಚಾಲೆಂಜ್ (ಅರ್ಹತಾ ಸುತ್ತು) 16:00-16:30
- ಮಾರ್ಷಲ್ ಪಿಟ್ ಲೇನ್ ವಾಲ್ಕ್: 17:45
ಅಕ್ಟೋಬರ್ 27, ಶನಿವಾರ:
- ಜೆಕೆ ಏಷಿಯಾ ರೇಸಿಂಗ್ ಸಿರೀಸ್ (ಅರ್ಹತಾ ಸುತ್ತು): 09:15-09:45
- ಎಫ್1 ಪೆಡೊಕ್ ಕ್ಲಬ್ (ಪಿಟ್ ಲೇನ್ ವಾಲ್ಕ್): 09:50-10:40
- ಎಫ್1 ಮೂರನೇ ಅಭ್ಯಾಸ: 11:00-12:00
- ಎಂಆರ್‌ಎಫ್ ಚಾಂಪಿಯನ್‌ಶಿಪ್ ಮೊದಲ ರೇಸ್ (10 ಲಾಪ್ಸ್ ಅಥವಾ 25 ನಿಮಿಷ): 12:25-12:55
- ಎಫ್1 ಪೆಡೊಕ್ ಕ್ಲಬ್ ಪಿಟ್ ಲೇನ್ ವಾಲ್ಕ್: 13:00-13:45
- ಎಫ್1 ಅರ್ಹತಾ ಸುತ್ತು: 14:00
- ಜೆಕೆ ಏಷಿಯಾ ರೇಸಿಂಗ್ ಸಿರೀಸ್ ಮೊದಲ ರೇಸ್ (10 ಲಾಪ್ಸ್ ಅಥವಾ 25 ನಿಮಿಷ): 15:30-16:00
ಅಕ್ಟೋಬರ್ 28, ಭಾನುವಾರ:
- ಎಫ್1 ಪಾಡೊಕ್ ಕ್ಲಬ್ ಪಿಟ್ ಲೇನ್ ವಾಲ್ಕ್: 10:00-10:50
- ಎಂಆರ್‌ಎಫ್ ಚಾಂಪಿಯನ್‌ಶಿಪ್ ಎರಡನೇ ರೇಸ್ (10 ಲಾಪ್ಸ್ ಅಥವಾ 25 ನಿಮಿಷ): 11:00-11:30
- ಜೆಕೆ ಏಷಿಯಾ ರೇಸಿಂಗ್ ಸಿರೀಸ್ ಸೆಕೆಂಡ್ ರೇಸ್ (10 ಲಾಪ್ಸ್ ಅಥವಾ 25 ನಿಮಿಷ): 12:00-12:30
- ಎಫ್1 ಪೆಡೊಕ್ ಕ್ಲಬ್ ಪಿಟ್ ಲೇನ್ ವಾಲ್ಕ್: 12:35-14:15
- ಎಫ್1 ಡ್ರೈವರ್ ಗ್ರಿಡ್ ಪರೇಡ್: 13:30
- ಎಫ್1 ಆರಂಭದ ಗ್ರಿಡ್ ಅನಾವರಣ: 13:40-14:15
- ರಾಷ್ಟ್ರಗೀತೆ: 14:46
- ಗ್ರಾಂಡ್ ಪ್ರಿಕ್ಸ್: 15:00


Click it and Unblock the Notifications









