ಹಾಟ್ ಕರ್ದಶಿಯಾಳ ದುಬಾರಿ ಮರ್ಸಿಡಿಸ್ ಸವಾರಿ

By Nagaraja

ಕಿಮ್ ಕರ್ದಶಿಯಾ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪಡ್ಡೆ ಹುಡುಗರಿಗಂತೂ ಕಿಮ್ ಹೇಳಿದ ತಕ್ಷಣ ಈಕೆಯ ಹಾಟ್ ಹಾಟ್ ದೃಶ್ಯಗಳು ನೆನಪಿಗೆ ಬರಬಹುದು. ಅದೇ ಅಮೆರಿಕದ ನಟಿ, ರೂಪದರ್ಶಿ, ಟಿವಿ ನಿರೂಪಕಿ, ರಿಯಾಲಿಟಿ ಶೋ ನಟಿ ಹಾಗೂ ಉದ್ಯಮಿ ಕಿಮ್ ಕರ್ದಶಿಯಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಅಂದ ಹಾಗೆ ಕಿಮ್ ಕರ್ದಶಿಯಾ ಸುದ್ದಿ ಆಟೋ ಮೊಬೈಲ್ ವಿಭಾಗದಲ್ಲಿ ಯಾಕೆ ಬಂತು ಅಂಥ ಆಶ್ಚರ್ಯಚಕಿತರಾಗಿದ್ದೀರಾ..? ಅದೇನಿಲ್ಲ ಬಿಡಿ ವಿಷಯ ಇಷ್ಟು ಈ ಹಾಟ್ ನಟಿ ಹೊಸ ಮರ್ಸಿಡಿಸ್ ಬೆಂಝ್ ಜಿ63 ಕಾರೊಂದನ್ನು ಖರೀದಿಸಿದ್ದಾರೆ. ಬರೋಬ್ಬರಿ ಒಂದು ಕೋಟಿ ರೂಪಾಯಿ ಬೆಳೆ ಬಾಳುವ ಈ ಐಷಾರಾಮಿ ಕಾರಿನಲ್ಲಿ ಸದ್ಯ ಈಕೆ ಬ್ಯುಸಿಯಾಗಿದ್ದಾರೆ.

ತಾರೆಯರಿಗೆ ತಮ್ಮ ಐಷಾರಾಮಿ ಬದುಕಿನಲ್ಲಿ ಮೋಜು ಮಸ್ತಿಗಾಗಿ ದುಬಾರಿ ಕಾರುಗಳನ್ನು ಖರೀದಿಸುವುದು ದೊಡ್ಡ ವಿಷಯವೇನಲ್ಲ ಬಿಡಿ. ಇಂತಹ ಆಸೆಗಳನ್ನು ನೆರವೇರಿಸಲು ಎಷ್ಟೇ ಬೆಲೆ ತೆತ್ತಾದರೂ ದುಬಾರಿ ಕಾರುಗಳನ್ನು ಖರೀದಿಸಲು ತಯಾರಾಗಿರುತ್ತಾರೆ. ಅದೇ ರೀತಿ ಈ ಹಾಟ್ ನಟಿ ಕೂಡಾ ದುಬಾರಿ ಮರ್ಸಿಡಿಸ್ ಕಾರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ.

ಈ ಮೂಲಕ ಅತಿ ದುಬಾರಿ ಕಾರನ್ನು ಹೊಂದಿರುವ ಶ್ರೀಮಂತರ ಪಟ್ಟಿಗೆ ಕಿಮ್ ಕೂಡಾ ಸೇರ್ಪಡೆಯಾಗಿದ್ದಾರೆ. ಈಕೆ ಕೆಲವು ತಿಂಗಳುಗಳ ಹಿಂದೆಯಷ್ಟೇ ತಮ್ಮ ಬಾಯ್‌ಫ್ರೆಂಡ್‌ಗೆ ಲಂಬೊರ್ಗಿನಿ ಅವೆಟಡೋರ್ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದರು.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ನಿಮ್ಮ ಮಾಹಿತಿಗಾಗಿ ಕಿಮ್ ಫೇವರಿಟ್ ಲಿಸ್ಟ್‌ನಲ್ಲಿ ಹಲವು ಕಾರುಗಳಿವೆ. ಆದರೆ ಕಸ್ಟಮೈಸ್ ಅಥವಾ ಪರಿಷ್ಕೃತ ಕಾರುಗಳಲ್ಲಿ ತುಂಬಾನೇ ಪ್ರೀತಿಯಿದೆ.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಕಿಮ್ ತಮ್ಮ ಈ ನೂತನ ಮರ್ಸಿಡಿಸ್ ಬೆಂಝ್ ಜಿ63 ಕಾರು ತಮ್ಮದಾಗಿಸಿಕೊಳ್ಳಲು 150000 ಅಮೆರಿಕನ್ ಡಾಲರ್ ಖರ್ಚು ಮಾಡಿದ್ದಾರೆ. ಈಕೆಯ ಗ್ಯಾರೇಜಿನಲ್ಲಿ ಈಗಾಗಲೇ ಹಲವು ದುಬಾರಿ ಕಾರುಗಳಿವೆ.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಈ ನೂತನ ಜರ್ಮನ್ ಕಾರಿನಲ್ಲಿ ಆತ್ಯಾಧುನಿಕ ತಂತ್ರಜ್ಞಾನಗಳಾದ ಬ್ಲ್ಯೂಟೂತ್ ಕನೆಕ್ಟಿವಿಟಿ, ಜಿಪಿಎಂ ನೆವಿಗೇಷನ್ ಸಿಸ್ಟಂ, ಯೂಎಸ್‌ಬಿ ಕನೆಕ್ಟರ್‌ಗಳಂತಹ ಫೀಚರ್‌ಗಳನ್ನು ಆಳವಡಿಸಲಾಗಿದೆ. ಇದರ ಜತೆ ಈ ಎಸ್‌ಯುವಿ ಇನ್ನಷ್ಟು ಶಕ್ತಿಗೊಳಿಸಲು ಅತ್ಯಾರ್ಕಷಕ ಕ್ರೋಮ್ ಮೆಟಲ್ ಆಳವಡಿಸಲಾಗಿದೆ. ಒಟ್ಟಿನಲ್ಲಿ ಮೆರ್ಸಿಡಿಸ್ ಬೆಂಝ್ ಜಿ63 ಅದ್ಭುತವಾಗಿದೆ.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್‌ನ ಈ ಐಷಾರಾಮಿ ಕಾರಿನಲ್ಲಿ 5461 ಸಿಸಿ ಕ್ಷಮತೆಯ ಎಂಜಿನ್ ಬಳಸಲಾಗಿದೆ. ಇದರಿಂದ ರೋಡ್ ಡ್ರೈವಿಂಗ್‌ನಲ್ಲಿ ಉತ್ತಮ ಪವರ್ ಸಿಗಲಿದೆ. ಅಲ್ಲದೆ 7 ಟಾನಿಕ್ 7 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಕೂಡಾ ಬಳಸಲಾಗಿದೆ.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಕಿಮ್ ಕರ್ದಶಿಯನ್‌ರ ಎಸ್‌ಯುವಿ ಕಾರು ಗರಿಷ್ಠ 544 ಎಚ್‌ಪಿ ಪವರ್ ಹಾಗೂ 560 lb-ft ಪವರ್ ಉತ್ಪಾದಿಸಲಿದೆ. ಈ ಕಾರು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಲೋಮೀಟರ್ ಗತಿ ನೀಡಲಿದೆ.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್‌ನ ಈ ನೂತನ ಅವತಾರ ಎಲ್ಲ ಅರ್ಥದಲ್ಲೂ ಉತ್ತಮವಾಗಿದೆ. ಈ ಎಸ್‌ಯುವಿ ಕಾರಿನ ಲುಕ್ ಬಗ್ಗೆ ಗಮನಿಸಿದಾಗ ನಮ್ಮ ದೇಶದಲ್ಲಿರುವ ಎಸ್‌ಯುವಿ ಬುಲೆರೊಗೆ ಸಾಮ್ಯತೆ ಹೊಂದಿದೆ.

ಮರ್ಸಿಡಿಸ್ ಬೆಂಝ್ ಜಿ63

ಮರ್ಸಿಡಿಸ್ ಬೆಂಝ್ ಜಿ63

ಕೆಲವು ತಿಂಗಳ ಹಿಂದೆಯಷ್ಟೇ ಅಮೆರಿಕ ನಟಿ ಕಿಮ್ ಕರ್ದಶಿಯಾನ್ ತಮ್ಮ ಬಾಯ್ ಫ್ರೆಂಡ್ ಕಾಯ್ನೆ ವೆಸ್ಟ್‌ಗೆ ಅದ್ದೂರಿ ಲಂಬೊರ್ಗಿನಿ ಕಾರೊಂದನ್ನು ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದರು.

More from DriveSpark

Article Published On: Tuesday, November 6, 2012, 9:35 [IST]
English summary
An American socialite and actress Kim Kardashian is also a true car lover. Kim Kardashian has bought herself a brand new 2013 Mercedes Benz G63 SUV worth USD 150,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+