ಹೋಲಿಕೆ: ಮಹೀಂದ್ರ ಕ್ವಾಂಟೊ vs ಮಾರುತಿ ಎರ್ಟಿಗಾ

ಮಹೀಂದ್ರ ಕ್ವಾಂಟೊ ಮತ್ತು ಮಾರುತಿ ಸುಜುಕಿ ಎರ್ಟಿಗಾ ನಡುವೆ ಯಾವೆಲ್ಲ ಹೋಲಿಕೆ, ಭಿನ್ನತೆ ಇವೆ? ಇವೆರಡು ಕಾರುಗಳು ಮಾರುಕಟ್ಟೆಯಲ್ಲಿ ಯಾವ ರೀತಿಯಲ್ಲಿ ಪೈಪೋಟಿ ನಡೆಸಲಿವೆ? ಪುಟ್ಟ ಕ್ವಾಂಟೊ ಕಂಡರೆ ಎರ್ಟಿಗಾಕ್ಕೆ ಯಾಕೆ ಭಯ? ಇವೆರಡರಲ್ಲಿ ಯಾವುದು ಬೆಸ್ಟ್?

ಮೊದಲ ನೋಟಕ್ಕೆ ಕ್ವಾಂಟೊ ಬೆಸ್ಟ್. ಎಲ್ಲಾ ಫೀಚರುಗಳ ಹೊರತಾಗಿಯೂ ರೋಡ್ ಪ್ರಸೆನ್ಸ್ ವಿಷ್ಯದಲ್ಲಿ ಕ್ವಾಂಟೊ ಗಮನಸೆಳೆಯುತ್ತದೆ. ಪವರ್ ಮತ್ತು ಟಾರ್ಕ್ ಕೂಡ ಕ್ವಾಂಟೊ ಕಾರಲ್ಲಿ ಹೆಚ್ಚಿದೆ. ದರದ ವಿಷಯದಲ್ಲೂ ಎರ್ಟಿಗಾಕ್ಕಿಂತ ಕೊಂಚ ಕಡಿಮೆ ದರಕ್ಕೆ ಕ್ವಾಂಟೊ ದೊರಕುತ್ತದೆ.

ಕ್ವಾಂಟೊ ಮತ್ತು ಎರ್ಟಿಗಾ ಕಾರುಗಳ ಇಂಟಿರಿಯರ್, ಎಕ್ಸ್ ಟೀರಿಯರ್, ಮೈಲೇಜ್, ದರ, ಶಕ್ತಿಸಾಮರ್ಥ್ಯ, ಫೀಚರುಗಳ ನಡುವಿನ ಹೋಲಿಕೆ ಇಲ್ಲಿದೆ. ಇಲ್ಲಿರುವ ಚಿತ್ರಗಳನ್ನು ಕ್ಲಿಕ್ಕಿಸುತ್ತ ಇವೆರಡು ಕಾರುಗಳ ನಡುವಿನ ಭಿನ್ನತೆ, ಸಾಮ್ಯತೆಯನ್ನು ತಿಳಿದುಕೊಳ್ಳಬಹುದು.

ಕ್ವಾಂಟೊ ಮತ್ತು ಎರ್ಟಿಗಾ ದರ

ಕ್ವಾಂಟೊ ಮತ್ತು ಎರ್ಟಿಗಾ ದರ

ಕ್ವಾಂಟೊ ಕಾರಿನ ಬೆಂಗಳೂರು ಎಕ್ಸ್ ಶೋರೂಂ ದರ: ಕ್ವಾಂಟೊ ಸಿ2: 6.08 ಲಕ್ಷ ರು., ಕ್ವಾಂಟೊ ಸಿ4: 6.63 ಲಕ್ಷ ರು., ಕ್ವಾಂಟೊ ಸಿ6: 7.16 ಲಕ್ಷ ರು., ಕ್ವಾಂಟೊ ಸಿ8: 7.69 ಲಕ್ಷ ರು. ಇ

ಎರ್ಟಿಗಾ ದರ: ಎರ್ಟಿಗಾ ಎಲ್ಎಕ್ಸ್ಐ 5.89 ಲಕ್ಷ ರು., ವಿಎಕ್ಸ್ಐ 6.60 ಲಕ್ಷ ರು., ಝಡ್ಎಕ್ಸ್ಐ 7.30 ಲಕ್ಷ ರು. ಇದೆ. ಡೀಸೆಲ್ ಎರ್ಟಿಗಾ ಎಲ್‌ಡಿಐ 7.30 ಲಕ್ಷ ರು., ವಿಡಿಐ 7.60 ಲಕ್ಷ ರು. ಮತ್ತು ಝಡ್‌ಡಿಐ ದರ 8.45 ಲಕ್ಷ ರು ಇದೆ.

ಕ್ವಾಂಟೊ, ಎರ್ಟಿಗಾ ಹೊರವಿನ್ಯಾಸ ಹೀಗಿದೆ ನೋಡಿ

ಕ್ವಾಂಟೊ, ಎರ್ಟಿಗಾ ಹೊರವಿನ್ಯಾಸ ಹೀಗಿದೆ ನೋಡಿ

ಮಹೀಂದ್ರ ಕ್ವಾಂಟೊ ನಾಲ್ಕು ಮೀಟರಿಗಿಂತ ಸಣ್ಣದಾದ ಕಾರು. ಹೊರವಿನ್ಯಾಸದಲ್ಲಿ ಕ್ವಾಂಟೊ ಹೆಚ್ಚು ಆಕರ್ಷಕ. ಇದರ ಟೇಲ್ ಲ್ಯಾಂಪ್, ಹಿಂಬದಿಯ ಸ್ನೇಪ್ನಿ ವಿನ್ಯಾಸ ಅತ್ಯಾಕರ್ಷಕ. ಹೈಎಂಡ್ ಆವೃತ್ತಿಗೆ ಮಾತ್ರ ಅಲಾಯ್ ವೀಲ್ ಇದೆ.

ಎರ್ಟಿಗಾ ಎಕ್ಸ್ ಟೀರಿಯರ್: ವಿನ್ಯಾಸದ ವಿಷಯದಲ್ಲಿ ಕ್ವಾಂಟೊದಷ್ಟು ಎರ್ಟಿಗಾ ಗಮನಸೆಳೆಯುವುದಿಲ್ಲ. ಆದರೆ ಎರ್ಟಿಗಾ ವಿನ್ಯಾಸ ಸರಳವಾಗಿದೆ. ಸ್ಪಷ್ಟ ಹೆಡ್ ಲ್ಯಾಂಪ್, ಸ್ಮಾರ್ಟಾಗಿರೋ ರಿಯರ್ ಸ್ಪೈಲರ್, ವಿಸ್ತರಿಸಿರುವ ಟೇಲ್ ಲ್ಯಾಂಪ್ ಸೇರಿದಂತೆ ಒಟ್ಟಾರೆ ವಿನ್ಯಾಸ ಆಕರ್ಷಕವಾಗಿದೆ. ಇದರಲ್ಲಿರುವ 15 ಇಂಚಿನ ಅಲಾಯ್ ವೀಲ್ ಗಮನ ಸೆಳೆಯುತ್ತದೆ.

ಕ್ವಾಂಟೊ, ಎರ್ಟಿಗಾ ಕಾರಿನೊಳಗೆ ನೋಡು

ಕ್ವಾಂಟೊ, ಎರ್ಟಿಗಾ ಕಾರಿನೊಳಗೆ ನೋಡು

ಕ್ವಾಂಟೊ ಕಾರಿನೊಳಗೆ ನೋಡು

ಐದು ಜನರು ಆರಾಮವಾಗಿ ಇದರಲ್ಲಿ ಕುಳಿತುಕೊಳ್ಳಬಹುದು. ಅನಿವಾರ್ಯವಾದರೆ ಹಿಂಬದಿಯಲ್ಲಿರುವ ಪುಟ್ಟ ಸೀಟುಗಳಲ್ಲಿ ಹೆಚ್ಚುವರಿಯಾಗಿ ಇಬ್ಬರು ಮುದುಡಿ ಕುಳಿತುಕೊಳ್ಳಬಹುದು. ಹೆಚ್ಚುವರಿ ಸೀಟು ಮಡುಚಿಟ್ಟು ಲಗೇಜ್ ಸ್ಥಳಾವಕಾಶ ಮಾಡಿಕೊಳ್ಳಬಹುದು. ಈ ಕಾರಲ್ಲಿ ಸ್ಪೋರ್ಟ್ಸ್ ಕಾರುಗಳಲ್ಲಿರಬೇಕಾದ ಆಕರ್ಷಕ ಫೀಚರುಗಳಿವೆ. ಸೀಟುಗಳು ಕೊಂಚ ಎತ್ತರದಲ್ಲಿದ್ದು ಹೆಚ್ಚು ಕಂಫರ್ಟ್ ಎನಿಸುತ್ತದೆ.

ಎರ್ಟಿಗಾ ಕಾರಿನೊಳಗೆ

ಎರ್ಟಿಗಾ ಇಂಟಿರಿಯರ್ ಕೂಡ ಆಕರ್ಷಕವಾಗಿದೆ. ಸ್ವಿಫ್ಟ್ ಕಾರಿನ ವಿನ್ಯಾಸ ಹೋಲುತ್ತದೆ. ಇದರಲ್ಲೂ 7 ಸೀಟುಗಳಿವೆ. ಎರ್ಟಿಗಾ ಕಾರಿನಲ್ಲಿ ವಿಶಾಲ ಬೂಟ್ ಸ್ಥಳಾವಕಾಶವಿದೆ.

ಕ್ವಾಂಟೊ ಎಂಜಿನ್, ಪವರ್, ಕಾರ್ಯಕ್ಷಮತೆ

ಕ್ವಾಂಟೊ ಎಂಜಿನ್, ಪವರ್, ಕಾರ್ಯಕ್ಷಮತೆ

ಕ್ವಾಂಟೊ ಕಾರು 1.5 ಲೀಟರಿನ 3 ಸಿಲಿಂಡರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು 100 ಹಾರ್ಸ್ ಪವರ್ ಮತ್ತು 240ಎನ್ಎಂ ಟಾರ್ಕ್ ಪವರ್ ನೀಡುತ್ತದೆ. 5 ಸ್ಪೀಡ್ ಮ್ಯಾನುಯಲ್ ಗೇರ್ ಇದೆ. ಗಂಟೆಗೆ ಗರಿಷ್ಠ 140-150 ಕಿ.ಮೀ. ವೇಗದಲ್ಲಿ ಸಾಗಬಹುದು. 0-100 ಕಿ.ಮೀ. ವೇಗವನ್ನು 17.8 ಸೆಕೆಂಡಿನಲ್ಲಿ ಪಡೆಯಬಹುದು. ಪವರ್ ಮತ್ತು ಟಾರ್ಕ್ ವಿಷಯದಲ್ಲಿ ಎರ್ಟಿಗಾವನ್ನು ಕ್ವಾಂಟೊ ಹಿಂದಿಕ್ಕಿದೆ.

ಎರ್ಟಿಗಾ ಎಂಜಿನ್, ಪವರ್, ಕಾರ್ಯಕ್ಷಮತೆ

ಎರ್ಟಿಗಾ ಎಂಜಿನ್, ಪವರ್, ಕಾರ್ಯಕ್ಷಮತೆ

ಮಾರುತಿ ಸುಜುಕಿ ಎರ್ಟಿಗಾ ಕೆ-ಸೀರಿಸ್ ಎಂಜಿನ್ ಹೊಂದಿದೆ. ಇದು 94 ಹಾರ್ಸ್ ಪವರ್ ಮತ್ತು 13.2 ಕೆಜಿಎಂ ಟಾರ್ಕ್ ಪವರ್ ನೀಡುತ್ತದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಿದೆ. 1.3ಲೀಟರ್ ಟಿಡಿಐಎಸ್ ಸೂಪರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 88 ಹಾರ್ಸ್ ಪವರ್ ಮತ್ತು 20.4 ಕೆಜಿಎಂ ಟಾರ್ಕ್ ನೀಡುತ್ತದೆ. ಕ್ವಾಂಟೊಗಿಂತ ಹೆಚ್ಚು ವೇಗದಲ್ಲಿ ಇದರಲ್ಲಿ ಸಾಗಬಹುದು. ಎರ್ಟಿಗಾ ಕಾರಿನಲ್ಲಿ ಗಂಟೆಗೆ ಗರಿಷ್ಠ 170 ಕಿ.ಮೀ. ವೇಗದಲ್ಲಿ ಸಾಗಬಹುದು.

ಕ್ವಾಂಟೊ ಫೀಚರುಗಳು

ಕ್ವಾಂಟೊ ಫೀಚರುಗಳು

ಕ್ವಾಂಟೊ ಕಾರಿನಲ್ಲಿ ಎಚ್ವಿಎಸಿ, ಟಿಲ್ಟ್ ಸ್ಟಿಯರಿಂಗ್, ಫ್ಲೋರ್ ಕನ್ಸೋಲ್, ಬ್ಲೂಟೂಥ್ ಕನೆಕ್ಟಿವಿಟಿ, ರಿಯರ್ ವಿಂಡೊ ಡೆಮಿಸ್ಟರ್, ಡ್ರೈವರ್ ಸೀಟು ಎತ್ತರ ಹೊಂದಾಣಿಕೆ, ಮುಂಭಾಗದ ಪ್ರಯಾಣಿಕ ಮತ್ತು ಚಾಲಕನಿಗೆ ಸೆಂಟರ್ ಆರ್ಮ್ ರೆಸ್ಟ್, ಬಾಟಲ್ ಇಡಲು ಹೋಲ್ಡರ್, ಹೊಂದಾಣಿಕೆ ಮಾಡಬಹುದಾದ ಹೆಡ್ ರೆಸ್ಟ್, ಸ್ನಾಕ್ ಟ್ರೇ, ಡ್ರೈವರ್ ಸೀಟಿನ ಕೆಳಭಾಗದಲ್ಲಿ ಸಂಗ್ರಹ ಸ್ಥಳಾವಕಾಶ, ಡೋರ್ ಟ್ರಿಮ್ ಪ್ಯಾಬ್ರಿಕ್, ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋಸ್, ಡಿಜಿಟಲ್ ಟ್ರೈವ್ ಅಸಿಸ್ಟ್ ಸಿಸ್ಟಮ್, ಕರ್ಟೆಸಿ ಲ್ಯಾಂಪ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಸಿಡಿ, ಎಂಪಿ3 ಮತ್ತು ರೇಡಿಯೊ, ಆಟೋ ಕ್ಲೈಮೇಟ್ ಕಂಟ್ರೋಲ್ ಇರುವ ಏರ್ ಕಂಡಿಷನ್ ಇತ್ಯಾದಿ ಫೀಚರುಗಳಿವೆ.

ಮಾರುತಿ ಎರ್ಟಿಗಾ ಫೀಚರುಗಳು

ಮಾರುತಿ ಎರ್ಟಿಗಾ ಫೀಚರುಗಳು

ಟಿಲ್ಟ್ ಹೊಂದಾಣಿಕೆ ಫೀಚರು ಇರುವ ಎಲೆಕ್ಟ್ರಿಕ್ ಪವರ್ ಸ್ಟಿಯರಿಂಗ್, ಸ್ಟಿಯರಿಂಗ್ ವೀಲ್ನಲ್ಲೇ ಆಡಿಯೋ ಕಂಟ್ರೋಲ್ಸ್, ಸೆಕೆಂಡರ್ ರೋ ದಲ್ಲಿ ಎಸಿ ಮತ್ತು ಕಂಟ್ರೋಲ್, ಪೂರ್ಣವಾಗಿ ಮಡುಚಬಹುದಾದ ಮೂರನೇ ಸಾಲಿನ ಸೀಟುಗಳು, ಇನ್ ಬಿಲ್ಟ್ ಮ್ಯೂಸಿಕ್ ಸಿಸ್ಟಮ್, ಸೆಕೆಂಡ್ ರೋಗೆ ಆರ್ಮ್ ರೆಸ್ಟ್, ಯುಎಸ್ ಬಿ ಇರುವ ಆಡಿಯೋ ಯುನಿಟ್, ಕೀಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋಸ್, ಮಲ್ಟಿ ಇನ್ಫಾರ್ಮೆಷನ್ ಡಿಸ್ ಪ್ಲೇ, ಎಲೆಕ್ಟ್ರಿಕ್ ಹೊಂದಾಣಿಕೆಯ ಸೈಡ್ ಮಿರರ್ ಇತ್ಯಾದಿ ಹಲವು ಫೀಚರುಗಳು ಎರ್ಟಿಗಾ ಕಾರಿನಲ್ಲಿವೆ.

ಕ್ವಾಂಟೊ ಮತ್ತು ಎರ್ಟಿಗಾ ಮೈಲೇಜ್ : ಮಹೀಂದ್ರ ಕ್ವಾಂಟೊ ಕಾರು ಪ್ರತಿಲೀಟರಿಗೆ 17.21 ಕಿ.ಮೀ. ಮೈಲೇಜ್ ನೀಡುತ್ತದೆ. ಮಾರುತಿ ಎರ್ಟಿಗಾ ಪೆಟ್ರೋಲ್ ಆವೃತ್ತಿಯು ಪ್ರತಿಲೀಟರಿಗೆ 16.02 ಕಿ.ಮೀ. ಮತ್ತು ಡೀಸೆಲ್ ಆವೃತ್ತಿಯು 20.77 ಕಿ.ಮೀ. ಮೈಲೇಜ್ ನೀಡುತ್ತದೆ.

ಕ್ವಾಂಟೊ ಮತ್ತು ಎರ್ಟಿಗಾ ದರ: ಕ್ವಾಂಟೊ ಕಾರಿನ ಬೆಂಗಳೂರು ಎಕ್ಸ್ ಶೋರೂಂ ದರ: ಕ್ವಾಂಟೊ ಸಿ2: 6.08 ಲಕ್ಷ ರು., ಕ್ವಾಂಟೊ ಸಿ4: 6.63 ಲಕ್ಷ ರು., ಕ್ವಾಂಟೊ ಸಿ6: 7.16 ಲಕ್ಷ ರು., ಕ್ವಾಂಟೊ ಸಿ8: 7.69 ಲಕ್ಷ ರು.

ಎರ್ಟಿಗಾ ಎಲ್ಎಕ್ಸ್ಐ 5.89 ಲಕ್ಷ ರು., ವಿಎಕ್ಸ್ಐ 6.60 ಲಕ್ಷ ರು., ಝಡ್ಎಕ್ಸ್ಐ 7.30 ಲಕ್ಷ ರು. ಇದೆ. ಡೀಸೆಲ್ ಎರ್ಟಿಗಾ ಎಲ್‌ಡಿಐ 7.30 ಲಕ್ಷ ರು., ವಿಡಿಐ 7.60 ಲಕ್ಷ ರು. ಮತ್ತು ಝಡ್‌ಡಿಐ ದರ 8.45 ಲಕ್ಷ ರು ಇದೆ.

ಕ್ವಾಂಟೊ ಹೊರವಿನ್ಯಾಸ: ಮಹೀಂದ್ರ ಕ್ವಾಂಟೊ ನಾಲ್ಕು ಮೀಟರಿಗಿಂತ ಸಣ್ಣದಾದ ಕಾರು. ಹೊರವಿನ್ಯಾಸದಲ್ಲಿ ಕ್ವಾಂಟೊ ಹೆಚ್ಚು ಆಕರ್ಷಕ. ಇದರ ಟೇಲ್ ಲ್ಯಾಂಪ್, ಹಿಂಬದಿಯ ಸ್ನೇಪ್ನಿ ವಿನ್ಯಾಸ ಅತ್ಯಾಕರ್ಷಕ. ಹೈಎಂಡ್ ಆವೃತ್ತಿಗೆ ಮಾತ್ರ ಅಲಾಯ್ ವೀಲ್ ಇದೆ.

ಎರ್ಟಿಗಾ ಎಕ್ಸ್ ಟೀರಿಯರ್: ವಿನ್ಯಾಸದ ವಿಷಯದಲ್ಲಿ ಕ್ವಾಂಟೊದಷ್ಟು ಎರ್ಟಿಗಾ ಗಮನಸೆಳೆಯುವುದಿಲ್ಲ. ಆದರೆ ಎರ್ಟಿಗಾ ವಿನ್ಯಾಸ ಸರಳವಾಗಿದೆ. ಸ್ಪಷ್ಟ ಹೆಡ್ ಲ್ಯಾಂಪ್, ಸ್ಮಾರ್ಟಾಗಿರೋ ರಿಯರ್ ಸ್ಪೈಲರ್, ವಿಸ್ತರಿಸಿರುವ ಟೇಲ್ ಲ್ಯಾಂಪ್ ಸೇರಿದಂತೆ ಒಟ್ಟಾರೆ ವಿನ್ಯಾಸ ಆಕರ್ಷಕವಾಗಿದೆ. ಇದರಲ್ಲಿರುವ 15 ಇಂಚಿನ ಅಲಾಯ್ ವೀಲ್ ಗಮನ ಸೆಳೆಯುತ್ತದೆ.

ಕ್ವಾಂಟೊ ಇಂಟಿರಿಯರ್: ಐದು ಜನರು ಆರಾಮವಾಗಿ ಇದರಲ್ಲಿ ಕುಳಿತುಕೊಳ್ಳಬಹುದು. ಅನಿವಾರ್ಯವಾದರೆ ಹಿಂಬದಿಯಲ್ಲಿರುವ ಪುಟ್ಟ ಸೀಟುಗಳಲ್ಲಿ ಹೆಚ್ಚುವರಿಯಾಗಿ ಇಬ್ಬರು ಮುದುಡಿ ಕುಳಿತುಕೊಳ್ಳಬಹುದು. ಹೆಚ್ಚುವರಿ ಸೀಟು ಮಡುಚಿಟ್ಟು ಲಗೇಜ್ ಸ್ಥಳಾವಕಾಶ ಮಾಡಿಕೊಳ್ಳಬಹುದು. ಈ ಕಾರಲ್ಲಿ ಸ್ಪೋರ್ಟ್ಸ್ ಕಾರುಗಳಲ್ಲಿರಬೇಕಾದ ಆಕರ್ಷಕ ಫೀಚರುಗಳಿವೆ. ಸೀಟುಗಳು ಕೊಂಚ ಎತ್ತರದಲ್ಲಿದ್ದು ಹೆಚ್ಚು ಕಂಫರ್ಟ್ ಎನಿಸುತ್ತದೆ.

ಎರ್ಟಿಗಾ ಕಾರಿನೊಳಗೆ: ಎರ್ಟಿಗಾ ಇಂಟಿರಿಯರ್ ಕೂಡ ಆಕರ್ಷಕವಾಗಿದೆ. ಸ್ವಿಫ್ಟ್ ಕಾರಿನ ವಿನ್ಯಾಸ ಹೋಲುತ್ತದೆ. ಇದರಲ್ಲೂ 7 ಸೀಟುಗಳಿವೆ. ಎರ್ಟಿಗಾ ಕಾರಿನಲ್ಲಿ ವಿಶಾಲ ಬೂಟ್ ಸ್ಥಳಾವಕಾಶವಿದೆ.

ಕ್ವಾಂಟೊ ಎಂಜಿನ್, ಪವರ್, ಕಾರ್ಯಕ್ಷಮತೆ: ಕ್ವಾಂಟೊ ಕಾರು 1.5 ಲೀಟರಿನ 3 ಸಿಲಿಂಡರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು 100 ಹಾರ್ಸ್ ಪವರ್ ಮತ್ತು 240ಎನ್ಎಂ ಟಾರ್ಕ್ ಪವರ್ ನೀಡುತ್ತದೆ. 5 ಸ್ಪೀಡ್ ಮ್ಯಾನುಯಲ್ ಗೇರ್ ಇದೆ. ಗಂಟೆಗೆ ಗರಿಷ್ಠ 140-150 ಕಿ.ಮೀ. ವೇಗದಲ್ಲಿ ಸಾಗಬಹುದು. 0-100 ಕಿ.ಮೀ. ವೇಗವನ್ನು 17.8 ಸೆಕೆಂಡಿನಲ್ಲಿ ಪಡೆಯಬಹುದು. ಪವರ್ ಮತ್ತು ಟಾರ್ಕ್ ವಿಷಯದಲ್ಲಿ ಎರ್ಟಿಗಾವನ್ನು ಕ್ವಾಂಟೊ ಹಿಂದಿಕ್ಕಿದೆ.

ಎರ್ಟಿಗಾ ಎಂಜಿನ್, ಪವರ್, ಕಾರ್ಯಕ್ಷಮತೆ: ಮಾರುತಿ ಸುಜುಕಿ ಎರ್ಟಿಗಾ ಕೆ-ಸೀರಿಸ್ ಎಂಜಿನ್ ಹೊಂದಿದೆ. ಇದು 94 ಹಾರ್ಸ್ ಪವರ್ ಮತ್ತು 13.2 ಕೆಜಿಎಂ ಟಾರ್ಕ್ ಪವರ್ ನೀಡುತ್ತದೆ. ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಿದೆ. 1.3ಲೀಟರ್ ಟಿಡಿಐಎಸ್ ಸೂಪರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 88 ಹಾರ್ಸ್ ಪವರ್ ಮತ್ತು 20.4 ಕೆಜಿಎಂ ಟಾರ್ಕ್ ನೀಡುತ್ತದೆ. ಕ್ವಾಂಟೊಗಿಂತ ಹೆಚ್ಚು ವೇಗದಲ್ಲಿ ಇದರಲ್ಲಿ ಸಾಗಬಹುದು. ಎರ್ಟಿಗಾ ಕಾರಿನಲ್ಲಿ ಗಂಟೆಗೆ ಗರಿಷ್ಠ 170 ಕಿ.ಮೀ. ವೇಗದಲ್ಲಿ ಸಾಗಬಹುದು.

ಕ್ವಾಂಟೊ ಫೀಚರುಗಳು: ಕ್ವಾಂಟೊ ಕಾರಿನಲ್ಲಿ ಎಚ್ವಿಎಸಿ, ಟಿಲ್ಟ್ ಸ್ಟಿಯರಿಂಗ್, ಫ್ಲೋರ್ ಕನ್ಸೋಲ್, ಬ್ಲೂಟೂಥ್ ಕನೆಕ್ಟಿವಿಟಿ, ರಿಯರ್ ವಿಂಡೊ ಡೆಮಿಸ್ಟರ್, ಡ್ರೈವರ್ ಸೀಟು ಎತ್ತರ ಹೊಂದಾಣಿಕೆ, ಮುಂಭಾಗದ ಪ್ರಯಾಣಿಕ ಮತ್ತು ಚಾಲಕನಿಗೆ ಸೆಂಟರ್ ಆರ್ಮ್ ರೆಸ್ಟ್, ಬಾಟಲ್ ಇಡಲು ಹೋಲ್ಡರ್, ಹೊಂದಾಣಿಕೆ ಮಾಡಬಹುದಾದ ಹೆಡ್ ರೆಸ್ಟ್, ಸ್ನಾಕ್ ಟ್ರೇ, ಡ್ರೈವರ್ ಸೀಟಿನ ಕೆಳಭಾಗದಲ್ಲಿ ಸಂಗ್ರಹ ಸ್ಥಳಾವಕಾಶ, ಡೋರ್ ಟ್ರಿಮ್ ಪ್ಯಾಬ್ರಿಕ್, ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋಸ್, ಡಿಜಿಟಲ್ ಟ್ರೈವ್ ಅಸಿಸ್ಟ್ ಸಿಸ್ಟಮ್, ಕರ್ಟೆಸಿ ಲ್ಯಾಂಪ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಸಿಡಿ, ಎಂಪಿ3 ಮತ್ತು ರೇಡಿಯೊ, ಆಟೋ ಕ್ಲೈಮೇಟ್ ಕಂಟ್ರೋಲ್ ಇರುವ ಏರ್ ಕಂಡಿಷನ್ ಇತ್ಯಾದಿ ಫೀಚರುಗಳಿವೆ.

ಮಾರುತಿ ಎರ್ಟಿಗಾ ಫೀಚರುಗಳು: ಟಿಲ್ಟ್ ಹೊಂದಾಣಿಕೆ ಫೀಚರು ಇರುವ ಎಲೆಕ್ಟ್ರಿಕ್ ಪವರ್ ಸ್ಟಿಯರಿಂಗ್, ಸ್ಟಿಯರಿಂಗ್ ವೀಲ್ನಲ್ಲೇ ಆಡಿಯೋ ಕಂಟ್ರೋಲ್ಸ್, ಸೆಕೆಂಡರ್ ರೋ ದಲ್ಲಿ ಎಸಿ ಮತ್ತು ಕಂಟ್ರೋಲ್, ಪೂರ್ಣವಾಗಿ ಮಡುಚಬಹುದಾದ ಮೂರನೇ ಸಾಲಿನ ಸೀಟುಗಳು, ಇನ್ ಬಿಲ್ಟ್ ಮ್ಯೂಸಿಕ್ ಸಿಸ್ಟಮ್, ಸೆಕೆಂಡ್ ರೋಗೆ ಆರ್ಮ್ ರೆಸ್ಟ್, ಯುಎಸ್ ಬಿ ಇರುವ ಆಡಿಯೋ ಯುನಿಟ್, ಕೀಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋಸ್, ಮಲ್ಟಿ ಇನ್ಫಾರ್ಮೆಷನ್ ಡಿಸ್ ಪ್ಲೇ, ಎಲೆಕ್ಟ್ರಿಕ್ ಹೊಂದಾಣಿಕೆಯ ಸೈಡ್ ಮಿರರ್ ಇತ್ಯಾದಿ ಹಲವು ಫೀಚರುಗಳು ಎರ್ಟಿಗಾ ಕಾರಿನಲ್ಲಿವೆ.

More from DriveSpark

Article Published On: Tuesday, September 25, 2012, 12:28 [IST]
English summary
Car Compare: Mahindra Quanto vs Maruti Suzuki Ertiga. Price, Mileage, Interior, Exterior, Power and torque, Space, features and specification.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+