ಮಾರುತಿ 800 ತದ್ರೂಪಿ ಕಾರು ರಸ್ತೆಗಿಳಿಯಲು ಸಿದ್ಧತೆ

ಮಾರುತಿ ಸುಜುಕಿ 800 ಕಾರು ಈಗ ಇತಿಹಾಸದ ಪುಟ ಸೇರಿದೆ. ಕಂಪನಿಯು ಈ ಪುಟ್ಟ ಕಾರಿನ ಉತ್ಪಾದನೆ ನಿಲ್ಲಿಸಿ ಹಲವು ಸಮಯ ಸಂದಿವೆ. ಆದರೂ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಮಾರುತಿ 800 ಕಾರುಗಳು ಕಾಣಸಿಗುತ್ತಿರುವುದು ಅದರ ಮಾಸದ ಜನಪ್ರಿಯತೆಗೆ ಸಾಕ್ಷಿ. ಇದೀಗ ಕಂಪನಿಯು ಮಾರುತಿ 800 ಸ್ಥಾನಕ್ಕೆ ಬೇರೊಂದು ಕಾರನ್ನು ತರಲು ಯೋಜಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದ ಅಂತ್ಯಕ್ಕೆ ನೂತನ ಕಾರು ಆಗಮಿಸಲಿದೆ.

ಮಾರುತಿ ಸುಜುಕಿ ಕಂಪನಿಯು 1983ರಲ್ಲಿ ಮಾರುತಿ 800 ಕಾರನ್ನು ಪರಿಚಯಿಸಿತ್ತು. ಇದೀಗ ಪರಿಚಯಿಸಲು ಯೋಜಿಸಿರುವುದು ನೂತನ ಬ್ರಾಂಡ್ ಕಾರು. ಅಂದರೆ ಹೊಸ ಕಾರಿನ ವಿನ್ಯಾಸ, ವಿಶೇಷತೆಗಳು ಮಾರುತಿ 800ಗಿಂತ ಭಿನ್ನವಾಗಿರಲಿದೆ ಎಂದು ಮಾರುತಿ ಸುಜುಕಿ ಕಚೇರಿ ಮೂಲಗಳು ಮಾಹಿತಿ ನೀಡಿವೆ.

ನೂತನ ಸಣ್ಣಕಾರಿನ ದರ 2.5 ಲಕ್ಷ ರುಪಾಯಿಯಿಂದ 3.5 ಲಕ್ಷ ರು.ವರೆಗಿರಲಿದೆ. ಎಂಟ್ರಿ ಲೆವೆಲ್ ಆಲ್ಟೊ ಕಾರಿಗೆ ಬಳಸಿದ ಎಫ್8ಡಿ ಎಂಜಿನ್ ಇದರಲ್ಲೂ ಇರುವ ನಿರೀಕ್ಷೆಯಿದೆ. ನೂತನ ಕಾರು ಆರಂಭಿಕ ಕಾರು ಖರೀದಿದಾರರಿಗೆ ಸೂಕ್ತ ಆಯ್ಕೆಯಾಗಲಿದೆ.

ಪ್ರತಿತಿಂಗಳು ಸುಮಾರು 2 ಸಾವಿರದಷ್ಟು ಮಾರುತಿ 800 ಮಾರಾಟವಾಗುತ್ತಿದ್ದರಿಂದ ಕಂಪನಿಯು ಈ ಸ್ಥಾನಕ್ಕೆ ಬೇರೊಂದು ಕಾರನ್ನು ಪರಿಚಯಿಸಲು ಯೋಜಿಸಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಆದರೆ ನೂತನ ಕಾರು ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಆಗಮಿಸಲಿದೆಯಂತೆ.

ಈಗ ಪ್ರತಿತಿಂಗಳಿಗೆ ಸುಮಾರು 20 ಸಾವಿರ ಯುನಿಟ್‌ನಷ್ಟು ಆಲ್ಟೊ ಕಾರುಗಳು ಮಾರಾಟವಾಗುತ್ತಿವೆ. ಈ ವರ್ಷದ ಅಂತ್ಯಕ್ಕೆ ಆಗಮಿಸಲಿರುವ ಕಾರು ಅತ್ಯಧಿಕ ಇಂಧನ ದಕ್ಷತೆ ಮತ್ತು ಕಡಿಮೆ ಮೇಟೆಂನ್ಸ್ ವೆಚ್ಚ ಹೊಂದಿರಲಿದೆ ಎಂದು ಮಾರುತಿ ಮೂಲಗಳು ತಿಳಿಸಿವೆ. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Tuesday, April 10, 2012, 14:00 [IST]
English summary
Maruti Suzuki 800 will soon be part of history as the Indian carmaker is planing to replace the iconic car with a new model by the end of 2012. The highly successful 800 which was launched in 1983 will be replaced by a totally brand new car, said an official source.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+