6,500 ಬುಕ್ಕಿಂಗ್: ಹೊಸ ಅಲೆಯೆಬ್ಬಿಸಿದ ಅಲ್ಟೊ 800
ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ನೂತನ ಆಲ್ಟೊ 800 ಬಿಡುಗಡೆಗೆ ಮೊದಲೇ 6,500 ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಆಟೊಮೊಬೈಲ್ ದುನಿಯಾದಲ್ಲಿ ಹೊಸ ಅಲೆಯೆಬ್ಬಿಸಿದೆ. ಇದೀಗ ಆಲ್ಟೊ ಬಿಡುಗಡೆಗೆ ಇನ್ನು ಒಂದು ವಾರ ಮಾತ್ರ ಉಳಿದಿರುವಂತೆಯೇ 10,000 ಬುಕ್ಕಿಂಗ್ ಪಡೆದುಕೊಳ್ಳುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.
ನೂತನ ಆಲ್ಟೊ ಕಾರಿನ ದರದ ಬಗ್ಗೆ ಯಾವುದೇ ಮಾಹಿತಿ ಬಂದಿರದ ಹೊರತಾಗಿಯೂ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿರುವುದು ಮಾರುತಿ ಜನಪ್ರಿಯತೆ ಕಾರಣವಾಗಿದೆ. ಪ್ರಸ್ತುತ ಕಾರು ಅಕ್ಟೋಬರ್ 16ರಂದು ರಸ್ತೆಗಿಳಿಯಲಿದ್ದು, ಈ ವೇಳೆ 10,000 ಬುಕ್ಕಿಂಗ್ ಮ್ಯಾಜಿಕ್ ಫಿಗರ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಮಾರ್ಕೆಟಿಂಗ್ ಆಂಡ್ ಸೇಲ್) ಮಾಯಾಂಕ್ ಪರೀಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಧನ ದಕ್ಷತೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿರುವುದೇ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಕಾರಣವಾಗಿದೆ. ಈ ಹಿಂದಿನ ಮಾದರಿಗಿಂತ ಶೇಕಡಾ 15ರಷ್ಟು ಅಂದರೆ ಪ್ರತಿ ಲೀಟರ್‌ಗೆ 22.74 ಕೀ. ಮೀ. ಇಂಧನ ಕ್ಷಮತೆ ಪಡೆಯಲಿದೆ. ಇದರ ಜತೆಗೆ ಆಕರ್ಷಕ ಡಿಸೈನ್, ಸುಧಾರಿತ ಗೇರ್ ಶಿಫ್ಟ್ ಹಾಗೂ ಹಿಂಭಾಗದ ಪ್ರಯಾಣಿಕರಿಗೆ ಕಾಲು ಚಾಚಿಕೊಳ್ಳಲು ಹೆಚ್ಚಿನ ಸ್ಥಳಾವಕಾಶ ಒದಗಿಸಿರುವುದು ಪ್ರಮುಖ ವೈಶಿಷ್ಟ್ಯಗಳಾಗಿವೆ.2001ನೇ ಇಸವಿಯಲ್ಲಿ ಆಗಮಿಸಿದ್ದ ಮಾರುತಿ ಸುಜುಕಿ ಆಲ್ಟೊ ದೇಶೀಯ ಮಾರುಕಟ್ಟೆಯಲ್ಲಿ ಕಳೆದ 11 ವರ್ಷಗಳಲ್ಲಿ 20 ಲಕ್ಷ ಯುನಿಟ್‌ಗಳನ್ನು ಸೇಲ್ ಮಾಡಿದ್ದವು. ಹಾಗೆಯೇ 2.47 ಲಕ್ಷ ಯುನಿಟ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡಿತ್ತು. ಇದೀಗ ನೂತನ ಆಲ್ಟೊ 800 ಕಾರಿಗಾಗಿ ಬರೋಬ್ಬರಿ 470 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು ಆರು ರೂಪಗಳಲ್ಲಿ ಕಾರು ಪ್ರವೇಶ ಮಾಡಲಿದ್ದು, ಸಿಎನ್‌ಜಿ ಹಾಗೂ ಪೆಟ್ರೋಲ್ ಆವೃತ್ತಿಗಳಲ್ಲಿ ತಲಾ ಮೂರರಂತೆ ಬಿಡುಗಡೆಯಾಗಲಿದೆ. ಕಾರು ದರವು 2.5ರಿಂದ 3 ಲಕ್ಷ ರೂಪಾಯಿಗಳ ವರೆಗೆ ಇರಲಿದೆಯೆಂದು ನಿರೀಕ್ಷಿಸಲಾಗಿದೆ.


Click it and Unblock the Notifications
