ಡೀಸೆಲ್ ಕಾರು ಕುರಿತು ಮಾರುತಿ ಸುಜುಕಿ ಭರವಸೆ

ಮಾರುತಿ ಸುಜುಕಿ ಇಂಡಿಯಾ ಚೇರ್ಮನ್ ಆರ್. ಸಿ. ಭಾರ್ಗವ ಕಂಪನಿಯ 31ನೇ ವಾರ್ಷಿಕ ಸಭೆಯಲ್ಲಿ ಡೀಸೆಲ್ ಕಾರು ಉತ್ಪಾದನೆ ಹೆಚ್ಚಿಸುವ ಭರವಸೆಯನ್ನು ಷೇರುದಾರರಿಗೆ ನೀಡಿದ್ದಾರೆ. ಕಂಪನಿಯು 2014ರಲ್ಲಿ ಡೀಸೆಲ್ ಕಾರು ಉತ್ಪಾದನೆ ಹೆಚ್ಚಿಸುವುದಾಗಿ ಹೇಳಿದ್ದಾರೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಬೃಹತ್ ಡೀಸೆಲ್ ಕಾರು ತಯಾರಿಕಾ ಕಂಪನಿಯಾಗಲಿದೆ ಎಂದು ಭಾರ್ಗವ ಹೇಳಿದ್ದಾರೆ. ಈಗ ಹೆಚ್ಚು ಜನರು ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿಡುತ್ತಿದ್ದಾರೆ. ಹೀಗಾಗಿ ಕಂಪನಿಯು ಡೀಸೆಲ್ ಕಾರು ಉತ್ಪಾದನೆಗೆ ಹೆಚ್ಚು ಒತ್ತು ನೀಡಲಿದೆ ಎಂದರು.

ಸಣ್ಣಕಾರು ಸ್ಪೆಷಲಿಸ್ಟ್ ಆಗಿದ್ದ ಮಾರುತಿ ಸುಜುಕಿ ಕಂಪನಿಯು ಈಗ ಹಲವು ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಈಗ ಎರ್ಟಿಗಾ ಎಂಪಿವಿ, ಸ್ವಿಫ್ಟ್, ಸ್ವಿಫ್ಟ್ ಡಿಜೈರ್ ಮತ್ತು ಮಾರುತಿ ಎಸ್ಎಕ್ಸ್4 ಕಾರುಗಳು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.

ಮುಂದಿನ ಕೆಲವೇ ವರ್ಷಗಳಲ್ಲಿ ಕಂಪನಿಯು ಡೀಸೆಲ್ ಎಂಜಿನ್ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿದೆ. ಈಗ ಕಂಪನಿಯು ಡೀಸೆಲ್ ಎಂಜಿನ್ ಹೆಚ್ಚುವರಿ ಬೇಡಿಕೆಯನ್ನು ಫಿಯೆಟ್ ಕಂಪನಿಯಿಂದ ಪೂರೈಸಿಕೊಳ್ಳುತ್ತಿದೆ.

ಮಾರುತಿ ಸುಜುಕಿ ಕಂಪನಿಯು ಈಗ ವರ್ಷಕ್ಕೆ 3 ಲಕ್ಷ ಡೀಸೆಲ್ ಎಂಜಿನ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. 2014ರ ವೇಳೆಗೆ ಇದನ್ನು ವರ್ಷಕ್ಕೆ 7 ಲಕ್ಷ ಯುನಿಟಿಗೆ ಹೆಚ್ಚಿಸುವ ಗುರಿ ಹೊಂದಿದೆ.

ಕಂಪನಿಯು ಮಾನೆಸರಿನಲ್ಲಿ ಎರಡು ಹೆಚ್ಚುವರಿ ಘಟಕಗಳನ್ನು ನಿರ್ಮಿಸಿದೆ. ಇದರಿಂದ ಹೆಚ್ಚುವರಿ ಡೀಸೆಲ್ ಎಂಜಿನ್ ಉತ್ಪಾದನೆ ಸಾಧ್ಯವಿದೆ. ಗುಜರಾತಿನಲ್ಲಿ ನಿರ್ಮಿಸಲಿರುವ ಹೊಸ ಘಟಕದಲ್ಲೂ ಕಂಪನಿಯು ಡೀಸೆಲ್ ಎಂಜಿನ್ ಉತ್ಪಾದಿಸಲಿದೆ. ಒಟ್ಟಾರೆ ಕಂಪನಿಯು ಮುಂದಿನ ದಿನಗಳಲ್ಲಿ ಡೀಸೆಲ್ ಕಾರು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವುದು ಸ್ಪಷ್ಟವಾಗಿದೆ.

More from DriveSpark

Article Published On: Wednesday, August 29, 2012, 11:17 [IST]
English summary
Maruti Suzuki India Chairman RC Bhargava has stated that the carmaker was planning to boost diesel car production by 2014. Mr Bhargava made this statement during the carmaker's 31st annual general meeting with share holders.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+