ಮಾರುತಿ ಎರ್ಟಿಗಾ: ಬಜೆಟ್ ನಂತರ ಹಾಜರ್!
ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಮಲ್ಟಿಪರ್ಪೊಸ್ ವೆಹಿಕಲ್ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಆಗಮಿಸಲಿದೆ ಎಂದು ಕಾದುಕುಳಿತವರಿಗಿದು ನಿರಾಶೆಯ ಸುದ್ದಿ. ಎರ್ಟಿಗಾ ಆಗಮನ ತುಸು ವಿಳಂಬವಾಗಲಿದೆ. ಬಜೆಟ್ ನಂತರ ನೂತನ ಎಂಪಿವಿ ರಸ್ತೆಗಿಳಿಯಲಿದೆ.
ಕೇಂದ್ರ ಸರಕಾರವು ಡೀಸೆಲ್ ಎಂಜಿನಿನ ಕಾರುಗಳಿಗೆ ಅತ್ಯಧಿಕ ತೆರಿಗೆ ವಿಧಿಸುವ ನಿರೀಕ್ಷೆಯಿದೆ. ಜೊತೆಗೆ ಶೇಕಡ 2ರಷ್ಟು ಹೆಚ್ಚುವರಿ ವ್ಯಾಟ್ ಕೂಡ ವಿಧಿಸುವ ಸೂಚನೆಗಳಿವೆ. ಇದರಿಂದ ಡೀಸೆಲ್ ಕಾರುಗಳು ದೇಶದಲ್ಲಿ ದುಬಾರಿಯಾಗಲಿವೆ. ಹೀಗಾಗಿ ನೂತನ ಎರ್ಟಿಗಾ ದರ ಕಾರ್ಯತಂತ್ರದ ಕುರಿತು ಸಮರ್ಪಕ ನಿರ್ಧಾರಕ್ಕೆ ಬರಲು ಮಾರುತಿ ಸುಜುಕಿ ಬಜೆಟ್ ನಂತರದ ಮಹೂರ್ತ ಫಿಕ್ಸ್ ಮಾಡಿದೆ.
ಕನ್ನಡ ಡ್ರೈವ್ ಸ್ಪಾರ್ಕ್ ಸ್ಪೆಷಲ್: ಎರ್ಟಿಗಾ ಸಂಪೂರ್ಣ ವಿಮರ್ಶೆ ಓದಿ


Click it and Unblock the Notifications









