ತಪ್ಪು ಮೈಲೇಜ್ ಜಾಹೀರಾತು ನೀಡಿದ ಮಾರುತಿಗೆ ಲಕ್ಷ ರು. ದಂಡ
ಮಾರುತಿಯು ಪ್ರಮುಖ ಪತ್ರಿಕೆಯೊಂದರಲ್ಲಿ ನೀಡಿದ್ದ ಜಾಹೀರಾತಿನಲ್ಲಿ ಮೈಲೇಜ್ ಕುರಿತು ತಪ್ಪು ಮಾಹಿತಿ ನೀಡಲಾಗಿತ್ತು. 2005ನೇ ಮಾಡೆಲ್ ಮಾರುತಿ ಝೆನ್ ಎಲ್ಎಕ್ಸ್ ಪ್ರತಿಲೀಟರಿಗೆ 16.7 ಕಿ.ಮೀ. ಮೈಲೇಜ್ ನೀಡುವುದಾಗಿ ಹೇಳಲಾಗಿತ್ತು.
ಆದರೆ ಈ ಜಾಹೀರಾತು ನೋಡಿ ಕಾರು ಖರೀದಿಸಿದ ರಾಜೀವ್ ಶರ್ಮಾರಿಗೆ ಈ ಝೆನ್ ಮಾಡೆಲಲ್ಲಿ ಪ್ರತಿಲೀಟರಿಗೆ 10.2 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ಪಡೆಯಲು ಸಾಧ್ಯವಾಗಿರಲಿಲ್ಲ. ದಾರಿತಪ್ಪಿಸಿದ ಮಾರುತಿ ಜಾಹೀರಾತು ವಿರುದ್ಧ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
2004ನೇ ಇಸವಿಯ ಆಟೋ ಕಾರ್ ಇಂಡಿಯಾ ನೀಡಿದ ಮಾಹಿತಿಯನ್ನು ಆಧರಿಸಿ ಈ ಜಾಹೀರಾತು ನೀಡಿರುವುದಾಗಿ ಮಾರುತಿ ಸುಜುಕಿ ವಾದಿಸಿದರೂ ಪ್ರಯೋಜನವಾಗಿಲ್ಲ. ಮಾರುತಿ ಸುಜುಕಿ ಕಂಪನಿಯು ಇಂತಹ ವರದಿಗಳನ್ನು ಅವಲಂಬಿಸದೆ ಸ್ವಂತ ಮೈಲೇಜ್ ಟೆಸ್ಟ್ ಮೂಲಕ ಗ್ರಾಹಕರಿಗೆ ನಿಖರ ಮಾಹಿತಿ ನೀಡಬೇಕೆಂದು ನ್ಯಾಯಪೀಠದ ಸಿ.ಕೆ. ಚತುರ್ವೇದಿ ಸೂಚಿಸಿದ್ದಾರೆ.
ಭವಿಷ್ಯದ ಜಾಹೀರಾತುಗಳಲ್ಲಿ ಕಾರುಗಳ ಕನಿಷ್ಠ ಮತ್ತು ಗರಿಷ್ಠ ಮೈಲೇಜ್ ಕುರಿತು ಗ್ರಾಹಕರಿಗೆ ಸಮರ್ಪಕವಾಗಿ ತಿಳಿಸುವಂತೆ ಗ್ರಾಹಕ ವೇದಿಕೆಯ ಸಿ.ಕೆ. ಚತುರ್ವೇದಿ ಹೇಳಿದ್ದಾರೆ. ದೂರುದಾರ ರಾಜೀವ್ ಶರ್ಮಾ ನೀಡಿದ ಜಾಹೀರಾತಿನ ಪ್ರತಿಯೊಂದನ್ನು ಉಲ್ಲೇಖಿಸಿ ಅವರು ಈ ತೀರ್ಪು ನೀಡಿದ್ದಾರೆ.


Click it and Unblock the Notifications









