ಸೆಕೆಂಡ್ ಹ್ಯಾಂಡ್ ಕಾರಿಗೆ ಡಿಮಾಂಡಪ್ಪೋ ಡಿಮಾಂಡು

ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಕೆಲವು ಕಾರಣಗಳು: ಕೆಲವರಲ್ಲಿ ಹೊಸ ಕಾರು ಖರೀದಿಸುವಷ್ಟು ದುಡ್ಡು ಇರುವುದಿಲ್ಲ. ಇನ್ನು ಕೆಲವರಿಗೆ ಹೊಸ ಕಾರು ಖರೀದಿಸೋ ಅವಶ್ಯಕತೆಯೂ ಇರುವುದಿಲ್ಲ. ಕೆಲವೊಮ್ಮೆ ಪ್ರಥಮ ಬಾರಿಗೆ ಕಾರೊಂದನ್ನು ಖರೀದಿಸುವರು ತಮ್ಮ ಡ್ರೈವಿಂಗ್ ಅನುಭವ ಹೆಚ್ಚಿಸುವುದಕೋಸ್ಕರ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ್ತಾರೆ.
ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಜನಪ್ರಿಯ ಬ್ರಾಂಡುಗಳಾಗಿವೆ. ಹೆಚ್ಚಿನ ಜನರು ಕಡಿಮೆ ದರ, ಕಡಿಮೆ ಮೇಟೆಂನ್ಸ್ ವೆಚ್ಚ ಮತ್ತು ಅತ್ಯುತ್ತಮ ಮೈಲೇಜ್ ನೀಡುವ ಕಾರಣದಿಂದ ಮಾರುತಿ ಕಾರುಗಳನ್ನು ಇಷ್ಟಪಡುತ್ತಾರೆ. ಕಡಿಮೆ ದರ ಮತ್ತು ವಿನ್ಯಾಸ ಇಷ್ಟಪಟ್ಟು ಹೆಚ್ಚಿನವರು ಹ್ಯುಂಡೈ ಕಾರುಗಳನ್ನು ಖರೀದಿಸುತ್ತಾರೆ.
ಹತ್ತು ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿ ಐದು ಮಾರುತಿ ಅಥವಾ ಹ್ಯುಂಡೈ ಕಂಪನಿಯ ಕಾರುಗಳ ಮಾರಾಟವಾಗುತ್ತವೆಂದು ಸೆಕೆಂಡ್ ಹ್ಯಾಂಡ್ ಕಾರು ಡೀಲರೊಬ್ಬರು ಕನ್ನಡ ಡ್ರೈವ್ ಸ್ಪಾರ್ಕಿಗೆ ತಿಳಿಸಿದ್ದಾರೆ.
ಈ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ ಸ್ವಿಫ್ಟ್ ಹೆಚ್ಚು ಜನಪ್ರಿಯ ಕಾರಾಗಿದೆ. ಆಲ್ಟೊ ಕಾರಿಗೂ ಅತ್ಯುತ್ತಮ ಬೇಡಿಕೆಯಿದೆ. ಹ್ಯುಂಡೈ ಕಂಪನಿಯ ಸ್ಯಾಂಟ್ರೊ ಮತ್ತು ಅಸೆಂಟ್ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.
ಹೊಸ ಕಾರು ಮಾರುಕಟ್ಟೆಯಲ್ಲಿ ದೊರಕದ ಕಾರುಗಳನ್ನು ಖರೀದಿಸಲು ಸಾಧ್ಯವಾಗಿರುವುದು ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯ ಇನ್ನೊಂದು ಅನುಕೂಲತೆಯಾಗಿದೆ. ಹೀಗಾಗಿ ಈಗಲೂ ಟೊಯೊಟಾ ಕ್ವಾಲಿಸ್, ಮಾರುತಿ ಎಸ್ಟಿಮ್, ಬೊಮೆರೊ, ಜಿಪ್ಸಿ, ಫಿಯೆಟ್ ಪಾಲಿಯಾ, ಸ್ಕೋಡಾ ಒಕ್ಟಾವಿಯಾ ಮತ್ತು ಫಿಯೆಟ್ ಪದ್ಮಿನಿಗೆ ಬೇಡಿಕೆಯಿದೆ.
ಹೊಸ ಕಾರಿಗಿಂತ ಒಂದು ವರ್ಷ ಬಳಕೆ ಮಾಡಿದ ಕಾರಿನ ದರ 50 ಸಾವಿರ ರು.ನಿಂದ 1 ಲಕ್ಷ ರು.ನಷ್ಟು ಅಗ್ಗವಾಗಿರುತ್ತದೆ. ಸೆಕೆಂಡ್ ಹ್ಯಾಂಡ್ ಹ್ಯಾಚ್ ಬ್ಯಾಕ್ ಕಾರಿನ ದರ 2-5 ಲಕ್ಷ ರು. ಆಸುಪಾಸಿನಲ್ಲಿರುತ್ತದೆ. ಸೆಕೆಂಡ್ ಹ್ಯಾಂಡ್ ಸೆಡಾನ್ ದರ ಸುಮಾರು 4-7 ಲಕ್ಷ ರು. ಆಸುಪಾಸಿನಲ್ಲಿರುತ್ತದೆ.


Click it and Unblock the Notifications








