ಮಾರುತಿಯಿಂದ ಪುಟ್ಟ ಸ್ಪೋರ್ಟ್ ಕಾರು ಆಲ್ಫಾ
ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಎಲ್‌ಯುವಿ ಎರ್ಟಿಗಾ ಆಗಮಿಸಿ ಹೆಚ್ಚು ದಿನ ಕಳೆದಿಲ್ಲ. ಇದೀಗ ಕಂಪನಿಯು ನೂತನ ಸಣ್ಣ ಅಥವಾ ಮಿನಿ ಎಸ್‌ಯುವಿ ಎಕ್ಸ್ಎ ಆಲ್ಫಾ ಕಾರನ್ನು ಪರಿಚಯಿಸಲಿದೆ. ಇದೇ ಕಾರಿನ ಕಾನ್ಸೆಪ್ಟ್ ಆವೃತ್ತಿಯನ್ನು ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.
ನೂತನ ಮಿನಿ ಆಲ್ಪಾ ಕಾರಿನ ಉತ್ಪಾದನೆ ಮುಂದಿನ ವರ್ಷ ಆರಂಭವಾಗಲಿದೆ. ಆದರೆ ಇದನ್ನು ಮುಂದಿನ ಕೆಲವೇ ತಿಂಗಳಲ್ಲಿ ಅಧಿಕೃತವಾಗಿ ಲಾಂಚ್ ಮಾಡಲು ಕಂಪನಿ ಯೋಜಿಸಿದೆ. "ನೂತನ ಕಾರು ಉತ್ಪಾದನೆಯಾಗುವ ಮುನ್ನವೇ ಅನಾವರಣ ಮಾಡಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ಸಿಇಒ ಶಿಂಜೊ ನಕನಿಶಿ ಹೇಳಿದ್ದಾರೆ.
Maruti Mini SUV XA Alpha ಭಾರತಕ್ಕೆ ಹೊಸತು. ಯಾಕೆಂದರೆ ಇಂತಹ ಕಾರುಗಳು ನೋಡಲು ಸಣ್ಣಗಾತ್ರ ಹೊಂದಿದ್ದು ನಗರಗಳ ರಸ್ತೆಗೆ ಸೂಕ್ತವಾಗಿದೆ. ಈ ಕಾರುಗಳು ನೋಡಲು ಸಣ್ಣದಾಗಿದ್ದರೂ ಚಾಲನೆಯಲ್ಲಿ ಸ್ಪೋರ್ಟ್ ಕಾರುಗಳ ಅನುಭವವನ್ನು ನೀಡುತ್ತವೆ.
ಫೋರ್ಡ್ ಕಂಪನಿಯು ಎಕೊಸ್ಪೋರ್ಟ್ ಮೂಲಕ ಇಂತಹ ಸಣ್ಣ ಎಸ್‌ಯುವಿ ಟ್ರೆಂಡ್ ಆರಂಭಿಸಿತ್ತು. ರೆನೊ ಕಂಪನಿ ಪರಿಚಯಸಲಿರುವ ಡಸ್ಟರ್ ಕೂಡ ಇಂತಹದ್ದೇ ಕಾರು. ಮಿನಿ ಕ್ಷೈಲೊ ಕೂಡ ಇದೇ ಕೆಟಗರಿಯಲ್ಲಿ ಬರಲಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಪುಟ್ಟಪುಟ್ಟ ಸ್ಫೋರ್ಟ್ ಯುಟಿಲಿಟಿ ಕಾರುಗಳು ಹೆಚ್ಚಾಗಲಿವೆ.


Click it and Unblock the Notifications









