ಆಲ್ಟೊ, ವ್ಯಾಗನಾರ್, ಎಸ್ಟಿಲೊ, ಸ್ವಿಫ್ಟ್, ಭರ್ಜರಿ ಡಿಸ್ಕೌಂಟ್

ಪೆಟ್ರೋಲ್ ದರ ಹೆಚ್ಚಾದ ನಂತರ ಮಾರುತಿ ಸುಜುಕಿ ಪೆಟ್ರೋಲ್ ಕಾರುಗಳ ದರ ಕಡಿಮೆಯಾಗಿದೆ. ಕಂಪನಿಯು ಪೆಟ್ರೋಲ್ ಕಾರುಗಳಿಗೆ ಸುಮಾರು 50 ಸಾವಿರ ರುಪಾಯಿವರೆಗೆ ವಿನಾಯಿತಿ ಪ್ರಕಟಿಸಿದೆ. ಇದು ತಾತ್ಕಾಲಿಕ ಅವಧಿಯ ವಿನಾಯಿತಿಯಾಗಿದ್ದು, ಪೆಟ್ರೋಲ್ ಕಾರು ಬೇಕಾದವರೂ ತ್ವರೆ ಮಾಡಿ ಎಂದು ಕಂಪನಿ ತಿಳಿಸಿದೆ.

ಕಂಪನಿಯು ಮಾರುತಿ 800 ಕಾರಿಗೆ ಸುಮಾರು 19 ಸಾವಿರ ರುಪಾಯಿ ವಿನಾಯಿತಿ ಪ್ರಕಟಿಸಿದೆ. ಕಂಪನಿಯು ಈಗಾಗಲೇ ಮಾರುತಿ 800 ಉತ್ಪಾದನೆ ನಿಲ್ಲಿಸಿರುವುದರಿಂದ ಯಾರೂ ಕೂಡ ಹೆಚ್ಚು ಡಿಸ್ಕೌಂಟ್ ಬಯಸುವುದಿಲ್ಲ. ಆದರೆ ಮಾರುತಿ ಆಲ್ಟೊ ಎಫ್8ಡಿ, ಎಫ್8ಡಿ ಸಿಎನ್ ಜಿ ಎಲ್ಎಕ್ಸ್ಐ ಮತ್ತು ಕೆ10 ಕಾರುಗಳಿಗೆ ಕಂಪನಿಯು 45 ಸಾವಿರ ರುಪಾಯಿಯಿಂದ 50 ಸಾವಿರ ರುಪಾಯಿವರೆಗೆ ದರ ವಿನಾಯಿತಿ ನೀಡುತ್ತಿದೆ.

ವ್ಯಾಗನಾರ್ ಪೆಟ್ರೋಲ್, ಡ್ಯೊ, ಸಿಎನ್ಜಿ ಆವೃತ್ತಿಗಳಿಗೆ ಮಾರುತಿ ಸುಜುಕಿ ಕಂಪನಿಯು 43 ಸಾವಿರ ರುಪಾಯಿಯಿಂದ 50 ಸಾವಿರ ರುಪಾಯಿವರೆಗೆ ಡಿಸ್ಕೌಂಟ್ ಪ್ರಕಟಿಸಿದೆ. ಎಸ್ಟಿಲೊ ಪೆಟ್ರೋಲ್ ಮತ್ತು ಸಿಎನ್ಜಿ ಆವೃತ್ತಿಗಳಿಗೆ ಕಂಪನಿಯು 55 ಸಾವಿರ ರುಪಾಯಿ ಡಿಸ್ಕೌಂಟ್ ನೀಡುತ್ತಿದೆ.

ಜೊತೆಗೆ ಮಾರುತಿ ಎಕೊ ಪೆಟ್ರೋಲ್ ಮತ್ತು ಸಿಎನ್ಜಿ ಕಾರುಗಳಿಗೆ ಕಂಪನಿಯು 15 ಸಾವಿರ ರುಪಾಯಿ ದರ ತಗ್ಗಿಸಿದೆ. ಮಾರುತಿ ಆಮ್ನಿ ಕೂಡ 12 ಸಾವಿರ ರುಪಾಯಿ ಅಗ್ಗವಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಆವೃತ್ತಿ ದರವೂ 15 ಸಾವಿರ ರುಪಾಯಿ ಕಡಿಮೆಯಾಗಿದೆ.

ವಿಶೇಷವೆಂದರೆ ಮಾರುತಿ ಸುಜುಕಿ ರಿಟ್ಜ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳೆರಡರ ದರವೂ ಕಡಿಮೆಯಾಗಿದೆ. ಕಂಪನಿಯು ರಿಟ್ಜ್ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಕ್ರಮವಾಗಿ 41 ಸಾವಿರ ರುಪಾಯಿ ಮತ್ತು 20 ಸಾವಿರ ರುಪಾಯಿ ಕಡಿಮೆ ಮಾಡಿದೆ.

ಮಾರುತಿ ಸುಜುಕಿ ಕಂಪನಿಯು ಎಸ್ಎಕ್ಸ್4 ಪೆಟ್ರೋಲ್, ಸಿಎನ್ ಜಿ ಮತ್ತು ಡೀಸೆಲ್ ಆವೃತ್ತಿಗಳಿಗೂ ದರ ವಿನಾಯಿತಿ ಪ್ರಕಟಿಸಿದೆ. ಈ ಆವೃತ್ತಿಗಳಿಗೆ ಸುಮಾರು 71 ಸಾವಿರ ರುಪಾಯಿವರೆಗೆ ಡಿಸ್ಕೌಂಟ್ ಇದೆ.

More from DriveSpark

Article Published On: Saturday, June 9, 2012, 12:01 [IST]
English summary
Maruti Suzuki Petrol Cars Price Discounts. Maruti 800 discount of Rs. 19,000. Alto, A-Star discount ranging between Rs. 45,000 to Rs. 50,000. WagonR petrol discount rate of Rs. 43,000. Estilo petrol Discount Rs 55,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+