ಹುರ್ರೆ, ಗ್ರಾಹಕನಿಗೆ ಮಾರುತಿಯಿಂದ ಉಚಿತ ಪೆಟ್ರೋಲ್

ನಿಮಗೆ ಪೆಟ್ರೋಲ್ ಬೇಕೆ? ಹಾಗಾದರೆ ಹತ್ತಿರದ ಮಾರುತಿ ಶೋರೂಂಗೆ ಹೋಗಿ ಒಂದು ಪೆಟ್ರೋಲ್ ಕಾರು ಖರೀದಿಸಿ. ಕಂಪನಿಯು ನೂತನ ಸ್ಕೀಮ್ ಮೂಲಕ ಪೆಟ್ರೋಲ್ ಕಾರು ಖರೀದಿದಾರರಿಗೆ ಬರೋಬ್ಬರಿ 36 ಲೀಟರ್ ಪೆಟ್ರೋಲ್ ನೀಡಲಿದೆ. ಪೆಟ್ರೋಲ್ ದರ ದುಬಾರಿಯಾಗಿರುವುದರಿಂದ ಕಂಪನಿಯು ಈ ವಿನೂತನ ಆಫರ್ ನೀಡಿದೆ.

ನೂತನ ಆಫರ್ ಮೂಲಕ ಗ್ರಾಹಕರು 36 ಲೀಟರ್ ಪೆಟ್ರೋಲ್ ಪಡೆಯಬಹುದಾಗಿದೆ. ಪ್ರತಿಲೀಟರಿಗೆ 80 ರುಪಾಯಿ ಲೆಕ್ಕದಲ್ಲಿ ಸುಮಾರು 2,800 ರುಪಾಯಿ ಉಳಿಸಬಹುದು. ಸರಾಸರಿ ಮೈಲೇಜ್ ಲೆಕ್ಕದಲ್ಲಿ ಹೇಳುವುದಾದರೆ ಗ್ರಾಹಕರು ಸುಮಾರು 540 ಕಿ.ಮೀ. ದೂರ ಸಾಗಬಹುದು. ನಂತರ ತಮ್ಮ ಸ್ವಂತ ದುಡ್ಡಿನಲ್ಲಿ ಪೆಟ್ರೋಲ್ ಹಾಕಿಕೊಳ್ಳಬಹುದು.

ಮಾರುತಿ ಸುಜುಕಿ ಮಾತ್ರವಲ್ಲದೇ ಇತರ ಕಾರು ಕಂಪನಿಗಳು ಕೂಡ ಪೆಟ್ರೋಲ್ ಕಾರುಗಳಿಗೆ ಹಲವು ರೀತಿಯ ಆಫರುಗಳನ್ನು ನೀಡುತ್ತಿವೆ. ಕೆಲವೊಂದು ಕಂಪನಿಗಳು ಉಚಿತ ವಿಮೆ, ವಾರೆಂಟಿ ವಿಸ್ತರಣೆ, ದರ ವಿನಾಯಿತಿ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ. ಆದರೆ ಪೆಟ್ರೋಲ್ ಮೂಲಕ ಗ್ರಾಹಕರಿಗೆ ಗಾಳ ಹಾಕುವ ಐಡಿಯಾ ಬಂದದ್ದು ಮಾರುತಿಗೆ ಮಾತ್ರ ಎನ್ನಬಹುದು.

ಪೆಟ್ರೋಲ್ ಕಾರುಗಳಿಗೆ ಮಾರುತಿ ಸುಜುಕಿ ಕಂಪನಿಯು ಭಾರಿ ಪ್ರಮಾಣದಲ್ಲಿ ದರ ವಿನಾಯಿತಿ ನೀಡುತ್ತಿದೆ. ಮಾರುತಿ ಪೆಟ್ರೋಲ್ ಕಾರು ಖರೀದಿಸಿದರೆ ಗ್ರಾಹಕರು ಸುಮಾರು 18 ಸಾವಿರ ರುಪಾಯಿಯಿಂದ 30 ಸಾವಿರ ರುಪಾಯಿವರೆಗೆ ದುಡ್ಡು ಉಳಿಸಬಹುದು. ಆಲ್ಟೊ ಕಾರಿಗೆ ಕಂಪನಿಯು ಸುಮಾರು 30 ಸಾವಿರ ರುಪಾಯಿ ದರ ವಿನಾಯಿತಿ ಮಾಡಿದೆ. ಎ-ಸ್ಟಾರ್, ವ್ಯಾಗನಾರ್, ಎಸ್ಟಿಲೊ ಕಾರುಗಳಿಗೂ ಕಂಪನಿ ದರ ವಿನಾಯಿತಿ ನೀಡಿದೆ.

More from DriveSpark

Article Published On: Tuesday, June 12, 2012, 16:24 [IST]
English summary
Do You want free petrol? Then walk in to your nearest Maruti Suzuki showroom and buy one of their petrol cars. The leading Indian carmaker has launched a new scheme to attract buyers to its petrol cars and the buyers can win as much as 36 litres of free petrol by participating in the Roll the Dices, Beat Petrol Prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+