ಮಾರುತಿ ಡಿಜೈರ್ ಸ್ಟಾಕ್ ಖಾಲಿ, ಪ್ರತಿಸ್ಪರ್ಧಿಗಳಿಗೆ ಸುವರ್ಣಾವಕಾಶ

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿ ಕಂಪನಿಯ ಡಿಜೈರ್ ದಾಸ್ತಾನು ಖಾಲಿಯಾಗುತ್ತಿದೆ. ಮಾನೆಸರ್ ಘಟಕದಲ್ಲಿ ಉತ್ಪಾದನೆಗೆ ಬೀಗಮುದ್ರೆ ಹಾಕಿರುವುದು ಇದಕ್ಕೆ ಕಾರಣ. ಮಾರುತಿ ಸಂಕಷ್ಟದ ಲಾಭ ಪಡೆದುಕೊಳ್ಳಲು ಉಳಿದ ಪ್ರತಿಸ್ಪರ್ಧಿ ಕಾರು ಕಂಪನಿಗಳು ಸಿದ್ಧವಾಗಿವೆ.

ಈ ಹಬ್ಬದ ಅವಧಿಗೆ ಸುಮಾರು ಆರು ಹೊಸ ಕಾರುಗಳು ಆಗಮಿಸಲಿವೆ ಎಂದು ಎಕಾನಮಿಕ್ ಟೈಮ್ಸ್ ವರದಿ ಹೇಳಿದೆ. ಮಾನೆಸರ್ ಘಟಕದಲ್ಲಿ ಇತ್ತೀಚೆಗೆ ನೌಕರರ ಗಲಭೆಯಿಂದ ಮಾರುತಿ ಸುಜುಕಿ ಕಂಪನಿಯು ಮಾನೆಸರ್ ಘಟಕಕ್ಕೆ ಬೀಗ ಹಾಕಿತ್ತು. ಅಲ್ಲಿಗೆ ನಮ್ಮ ರಾಜ್ಯದ ದೈವಜ್ಞ ಸೋಮಯಾಜಿ ವಾಸ್ತು ಪೂಜೆ ಮಾಡಲು ಹೋದ ಕಥೆ ಗೊತ್ತಲ್ವ?

ಈ ಹಬ್ಬದ ಸೀಸನಿನಲ್ಲಿ ಟಾಟಾ ಇಂಡಿಗೊ ಮಾಂಝಾ ಸಿಎಸ್, ಜನರಲ್ ಮೋಟರ್ಸ್ ಕಂಪನಿಯ ಷೆವರ್ಲೆ ಸೇಲ್, ಮಹೀಂದ್ರ ವೆರಿಟೊ, ಹೊಸ ಅಂಬಾಸಡರ್ ಕಾರು, ರೆನೊ ಸ್ಕಾಲಾ ಮತ್ತು ಫೋರ್ಡ್ ಹೊಸ ಫಿಯೆಸ್ಟಾ ಕಾರುಗಳು ಆಗಮಿಸುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಡಿಜೈರ್ ಕಾರಿನ ದಾಸ್ತಾನು ಖಾಲಿಯಾಗಿರುವುದರಿಂದ ಈ ಕಂಪನಿಗಳು ಆದಷ್ಟು ಬೇಗ ಹೊಸ ಕಾರುಗಳನ್ನು ಪರಿಚಯಿಸಲು ಯೋಜಿಸಿವೆಯಂತೆ. ಈ ಸಮಯದಲ್ಲಿ ಹಳೆ ಕಾರುಗಳಾದ ಟಾಟಾ ಇಂಡಿಗೊ ಸಿಎಸ್, ಟೊಯೊಟಾ ಎಟಿಯೋಸ್, ಹ್ಯುಂಡೈ ಅಸೆಂಟ್ ಮತ್ತು ಷೆವರ್ಲೆ ಅವಿಯೊ ಕಾರುಗಳ ಮಾರಾಟ ಹೆಚ್ಚಿಸಿಕೊಳ್ಳಲು ಕಂಪನಿಗಳು ಪ್ರಯತ್ನಿಸುತ್ತಿವೆ.

ಈ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಡಿಜೈರ್ ಮಾರಾಟ 58,371 ಯುನಿಟಿಗೆ ತಲುಪಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಎರಡು ಪಟ್ಟು ಏರಿಕೆಯಾಗಿದೆ. ಬೆಂಗಳೂರಿನ ಮಾರುತಿ ಡೀಲರುಗಳ ಪ್ರಕಾರ ಈಗಲೂ ಡಿಜೈರ್ ಕಾರಿಗೆ ಅತ್ಯಧಿಕ ಬೇಡಿಕೆಯಿದೆ. ಆದರೆ ಸದ್ಯಕ್ಕೆ ನೋ ಸ್ಟಾಕ್ ಸಮಸ್ಯೆಯಿದೆ.

More from DriveSpark

Article Published On: Friday, August 10, 2012, 15:57 [IST]
English summary
Maruti's loss is rivals' gain. About half a dozen entry-level sedans will hit the Indian roads this festive season even as Dzire, the country's top-selling sedan, has gone out of production due to a lockout at Maruti Suzuki's Manesar plant following labour unrest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+