ವಿಶ್ವದ ಬೆಸ್ಟ್ ಕಾರ್ ಪ್ರಶಸ್ತಿ ಪಡೆದ ಮಾರುತಿ ಆಲ್ಟೊ

Maruti Suzuki Alto World’s Best selling Small Car
ಮಾರುತಿ ಸುಜುಕಿ ಕಂಪನಿಯ ಪುಟ್ಟ ಕಾರು ಆಲ್ಟೊಗೆ ಸೆಡ್ಡು ಹೊಡೆಯುವ ಯಾವುದೇ ಕಾರು ಜಗತ್ತಿನಲ್ಲಿನ್ನೂ ಹುಟ್ಟಿಬಂದಿಲ್ಲ. ಹೀಗಾಗಿ ದೇಶದ ಅತ್ಯಧಿಕ ಮಾರಾಟದ ಮಾರುತಿ ಸುಜುಕಿ ಆಲ್ಟೊ "ಜಗತ್ತಿನ ಅತ್ಯುತ್ತಮ ಸಣ್ಣಕಾರು" ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮಾರುತಿ ಸುಜುಕಿ ಆಲ್ಟೊ ಕಾರು ಫೋಕ್ಸ್ ವ್ಯಾಗನ್ ಮತ್ತು ಫಿಯೆಟ್ ಕಂಪನಿಯ ಸಣ್ಣಕಾರುಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದಿದೆ. ದೇಶದಲ್ಲಿ ಕಳೆದ ವರ್ಷ ಮಾರುತಿ ಸುಜುಕಿ ಕಂಪನಿಯು ಸುಮಾರು 3.10 ಲಕ್ಷ ಆಲ್ಟೊ ಕಾರುಗಳನ್ನು ಮಾರಾಟ ಮಾಡಿತ್ತು.

ಮೂರು ಲಕ್ಷಕ್ಕಿಂತ ಹೆಚ್ಚು ಮಾರಾಟವಾದ ವಿಶ್ವದ ಏಕೈಕ ಕಾರಾಗಿ ಆಲ್ಟೊ ಹೊರಹೊಮ್ಮಿದೆ. ನಂತರದ ಸ್ಥಾನಗಳನ್ನು ಫಿಯೆಟ್ ಮತ್ತು ಫೋಕ್ಸ್ ವ್ಯಾಗನ್ ಪಡೆದಿದೆ. ಬ್ರೆಝಿಲ್ ನಲ್ಲಿ ಫೋಕ್ಸ್ ವ್ಯಾಗನ್ ಗೋಲ್ ಕಾರು 2.93 ಲಕ್ಷ ಯುನಿಟ್ ಮಾರಾಟವಾಗಿದೆ.

ಬ್ರೆಝಿಲ್ ನಲ್ಲಿ ಫಿಯೆಟ್ ಯುನೊ ಕಾರುಗಳು ಸುಮಾರು 2.73 ಲಕ್ಷ ಯುನಿಟ್ ಮಾರಾಟವಾಗಿದೆ. ಜರ್ಮನಿಯಲ್ಲಿ ಫೋಕ್ಸ್ ವ್ಯಾಗನ್ ಗೋಲ್ಫ್ ಕಾರು ಸುಮಾರು 2.58 ಯುನಿಟ್ ಮಾರಾಟವಾಗಿದೆ.

"ದೇಶದ ವಾಹನ ಮಾರುಕಟ್ಟೆಯಲ್ಲಿ ಆಲ್ಟೊಗೆ ಸರಿಸಾಟಿಯಾಗಬಲ್ಲ ಯಾವುದೇ ಕಾರುಗಳಿಲ್ಲ. ಹೀಗಾಗಿ ಕಂಪನಿಯ ಪುಟ್ಟ ಕಾರು ಮಾರಾಟದಲ್ಲಿ ಮುನ್ನಡೆ ಕಾಣುತ್ತಿದೆ" ಎಂದು ಕಂಪನಿಯ ವ್ಯವಸ್ಥಾಪಕ ಕಾರ್ಯನಿರ್ವಹಕರಾದ(ಎಂಇಒ) ಮಾಯಂಕ್ ಪಾರೇಕ್ ಹೇಳಿದ್ದಾರೆ.

More from DriveSpark

Article Published On: Wednesday, January 25, 2012, 14:43 [IST]
English summary
Country's best selling car Maruti Alto also is the world best selling car model in 2011. Maruti alto bags the rank is second consecutive year of 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+