ಮಾರುತಿ ಸುಜುಕಿಗೆ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿ ಗರಿ
ಅಕ್ಟೋಬರ್ 10-13ರ ದಿನಾಂಕಗಳಲ್ಲಿ ಲಂಡನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಬ್ರಿಟನ್ ಸೆಕ್ರಟರಿ ಆಫ್ ಸ್ಟೇಟ್ ಕಮ್ಯೂನಿಟೀಸ್ ಎರಿಕ್ ಪಿಕಲ್ಸ್ ಅವರಿಂದ ಮಾರುತಿ ಸುಜುಕಿ ಕಂಪನಿ ಪರ ಮುಖ್ಯ ಕಾರ್ಯನಿರ್ವಾಹಕ ಆಡಳಿತಧಿಕಾರಿ ಸಿ ವೈ ಸಿದ್ಧಿಕಿ ಪ್ರಶಸ್ತಿ ಸ್ವೀಕರಿಸಿದರು.
ಇನ್ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್‌ನಿಂದ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು 1992ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯ ಮಾಡಲಾಗಿತ್ತು. ವಿಶ್ವದ್ಯಾಂತ ಕಾರ್ಪೊರೇಟ್ ಎಕ್ಸೆಲೆನ್ಸ್‌ಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ಸಮಾರಂಭದಲ್ಲಿ ಬ್ರಿಟನ್ ಮಾಜಿ ಪ್ರಧಾನಿ ಸ್ವೀಡನ್ ಓಲಾ ಉಲ್‌ಸ್ಟನ್ ಹಾಗೂ ಇಸ್ಟಿಟ್ಯೂಟ್ ಆಫ್ ಡೈರಕ್ಟರ್ಸ್ (ಇಂಡಿಯಾ) ಮುಖ್ಯಸ್ಥ ಜೆಎಸ್ ಅಹ್ಲುವಾಲಿಯಾ ಉಪಸ್ಥಿತರಿದ್ದರು.
ಈ ನಡುವೆ ಹಬ್ಬದ ಸೀಸನಿನಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ನೂತನ ಆಲ್ಟೊ 800 ಕಾರುಗಳು ಈಗಾಗಲೇ 17 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ. ಇದರಂತೆ ಪ್ರಸಕ್ತ ಆರ್ಥಿಕ ಸಾಲಿನ ಎರಡನೇ ಅವಧಿಯಲ್ಲಿ ಶೇಕಡಾ 10ರಷ್ಟು ಮಾರಾಟ ವೃದ್ಧಿ ಸಾಧಿಸುವ ನಿರೀಕ್ಷೆ ಹೊಂದಿದೆ.


Click it and Unblock the Notifications









