ಹತ್ತು ಲಕ್ಷ ಕಾರು ರಫ್ತು ಮಾಡಿದ ಮಾರುತಿ

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಾರು ರಫ್ತು ಹತ್ತು ಲಕ್ಷ ಯುನಿಟ್ ತಲುಪಿದೆ. ಕೆಂಪು ಬಣ್ಣದ ಎ-ಸ್ಟಾರ್ ಕಾರನ್ನು ಡೆನ್ಮಾರ್ಕಿಗೆ ರಫ್ತು ಮಾಡುವ ಮೂಲಕ ಕಂಪನಿಯು ಹತ್ತು ಲಕ್ಷ ಯುನಿಟ್ ರಫ್ತು ಗುರಿ ಸಾಧಿಸಿದೆ. ಸ್ವಿಜರ್ ಲ್ಯಾಂಡ್, ಮಾಲ್ಟಾ, ಸ್ವಿಡನ್, ಅಲ್ಜೇರಿಯಾ, ಈಜಿಪ್ಟ್ ಮತ್ತು ಮೊರೊಕೊ ಕಂಪನಿಗೆ ಪ್ರಮುಖ ವಿದೇಶಿ ಮಾರುಕಟ್ಟೆಗಳಾಗಿವೆ.

"ಸುಮಾರು ಹತ್ತು ಲಕ್ಷ ಕಾರನ್ನು ವಿದೇಶಿ ಮಾರುಕಟ್ಟೆಗೆ ತಲುಪಿಸಿರುವುದು ಕಂಪನಿಯ ಪಾಲಿಗೆ ಪ್ರಮುಖ ಸಾಧನೆಯಾಗಿದೆ. ಎರಡು ವರ್ಷದ ಹಿಂದೆ ನಮಗೆ ಯುರೋಪ್ ಪ್ರಮುಖ ಮಾರುಕಟ್ಟೆಯಾಗಿತ್ತು. ಆದರೆ ಈಗ ಯುರೋಪೇತರ ರಾಷ್ಟ್ರಗಳನ್ನೂ ನಾವು ಗುರುತಿಸಿದ್ದೇವೆ. ಕಂಪನಿಯ ರಫ್ತು ಕಾರ್ಯತಂತ್ರದ ಬದ್ಧತೆಯು ಮಾರಾಟ ಹೆಚ್ಚಾಗಲು ನೆರವಾಗಿದೆ" ಎಂದು ಕಂಪನಿಯ ಎಂಡಿ ಶಿಂಝು ನಕನಿಶಿ ಹೇಳಿದ್ದಾರೆ.

ಸುಜುಕಿ ಆಲ್ಟೊ ಮತ್ತು ಸುಜುಕಿ ಸೆಲೆರಿಯೊ ಹೆಸರಿನಲ್ಲಿ ಎ-ಸ್ಟಾರ್ ಕಾರುಗಳ ಮಾರಾಟ ಹೆಚ್ಚಾಗಿದೆ. ಅಲ್ಜೇರಿಯಾ ನಮಗೆ ಪ್ರಮುಖ ಮಾರುಕಟ್ಟೆ. ಇಲ್ಲಿ ಸುಮಾರು ಒಂದು ಲಕ್ಷ ಕಾರು ಮಾರಾಟ ಮಾಡಿದ್ದೇವೆ" ಎಂದು ಅವರು ಹೇಳಿದ್ದಾರೆ.

2009-10ರಲ್ಲಿ ಮಾರುತಿ ಸುಜುಕಿ ಕಂಪನಿಯು ಸುಮಾರು 1.47 ಲಕ್ಷ ಕಾರುಗಳನ್ನು ರಫ್ತು ಮಾಡಿತ್ತು. ಇದರಲ್ಲಿ ಸುಮಾರು ಶೇಕಡ 75ರಷ್ಟು ರಫ್ತು ಯುರೋಪ್ ಮಾರುಕಟ್ಟೆಗಾಗಿತ್ತು. ಆದರೆ 2011-12ರಲ್ಲಿ ಯುರೋಪೇತರ ರಾಷ್ಟ್ರಗಳಿಗೆ ಕಂಪನಿಯ ಕಾರು ರಫ್ತು ಶೇಕಡ 23ರಿಂದ ಶೇಕಡ 66ಕ್ಕೆ ನೆಗೆದಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಈಗ ಕಂಪನಿಯ ಸುಮಾರು 10 ಲಕ್ಷ ಕಾರುಗಳು ಜಗತ್ತಿನ 125 ರಾಷ್ಟ್ರಗಳಲ್ಲಿ ಸವಾರಿ ನಡೆಸುತ್ತಿವೆ. ಆಸಕ್ತಿದಾಯಕ ವಿಷಯವೆಂದರೆ ರಫ್ತು ವಹಿವಾಟಿನಲ್ಲಿ ಎ-ಸ್ಟಾರ್ ಕಂಪನಿಯ ಜನಪ್ರಿಯ ಕಾರಾಗಿದೆ. ಕಂಪನಿಯು 38 ತಿಂಗಳ ಹಿಂದೆ ಅಂದರೆ ಜನವರಿ 2009ರಲ್ಲಿ ಜಾಗತಿಕ ಮಾರುಕಟ್ಟೆಗೆ ಕಾರು ರಫ್ತು ಆರಂಭಿಸಿತ್ತು" ಎಂದು ನಕನಿಶಿ ಹೇಳಿದ್ದಾರೆ.

More from DriveSpark

Article Published On: Wednesday, May 2, 2012, 9:58 [IST]
English summary
Car market leader Maruti Suzuki India Limited exported its one millionth vehicle here today. The glistening red colored A-star left the Mundra coast line along with 2,200 other vehicles for various international destinations including Switzerland, Malta, Sweden in Europe and Algeria, Egypt and Morocco in the non European destinations. The millionth car will be sold in Denmark.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+