ಪೆಟ್ರೋಲ್ ಕಾರು ಉತ್ಪಾದನೆ ಕಡಿಮೆ ಮಾಡಿದ ಮಾರುತಿ

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿ ಕಂಪನಿಯು ಕೆಲವು ಪೆಟ್ರೋಲ್ ಕಾರುಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಆರಂಭಿಸಿದೆ. ಮಾರುಕಟ್ಟೆಯಲ್ಲಿ ಕೆಲವು ಆವೃತ್ತಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. ವಿಶೇಷವೆಂದರೆ ಕಂಪನಿಯು ಬೆಸ್ಟ್ ಸೆಲ್ಲರ್ ಖ್ಯಾತಿಯ ಸಣ್ಣಕಾರು ಆಲ್ಟೊ ಉತ್ಪಾದನೆಯನ್ನೂ ಕಡಿಮೆ ಮಾಡಿದೆ.

ಪೆಟ್ರೋಲ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದೂ ಇದಕ್ಕೆ ಪ್ರಮುಖ ಕಾರಣವಾಗಿದೆ. "ಇತ್ತೀಚೆಗೆ ಪೆಟ್ರೋಲ್ ಕಾರುಗಳಿಗೆ ಬೇಡಿಕೆಯು ಕಡಿಮೆಯಾಗುತ್ತಿದೆ. ಪೆಟ್ರೋಲ್ ಕಾರುಗಳ ಉತ್ಪಾದನೆ ಕಡಿಮೆ ಮಾಡುವ ಮೂಲಕ ಸ್ಟಾಕ್ ಕ್ಲೀಯರ್ ಮಾಡಲು ನಿರ್ಧರಿಸಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ವ್ಯವಸ್ಥಾಪಕ ನಿರ್ವಹಣಾಧಿಕಾರಿ ಮಯಾಂಕ್ ಪಾರೇಕ್ ಹೇಳಿದ್ದಾರೆ.

"ಕಂಪನಿಯು ಆಲ್ಟೊ, ಮಾರುತಿ 800, ಎಸ್ಟಾರ್, ಎಸ್ಟಿಲೊ ಮತ್ತು ಆಮ್ನಿ ಮುಂತಾದ ಪೆಟ್ರೋಲ್ ಕಾರುಗಳ ಉತ್ಪಾದನೆಯನ್ನು ಮೂರುದಿನಗಳ ಮಟ್ಟಿಗೆ ಸ್ಥಗಿತಗೊಳಿಸಿದ್ದೇವೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾರುತಿ ಸುಜುಕಿ ಮಾತ್ರವಲ್ಲದೇ ಹೆಚ್ಚಿನ ಕಾರು ಕಂಪನಿಗಳು ಪೆಟ್ರೋಲ್ ಕಾರು ಉತ್ಪಾದನೆ ಕಡಿಮೆ ಮಾಡಿ ಡೀಸೆಲ್ ಕಾರು ಉತ್ಪಾದನೆ ಹೆಚ್ಚಿಸುತ್ತಿವೆ. ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ಪರಿಚಯಿಸಿರುವ ಎರ್ಟಿಗಾ ಎಂಪಿವಿ ಮತ್ತು ಅತ್ಯಧಿಕ ಮಾರಾಟದ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ವೇಟಿಂಗ್ ಪಿರೆಯಿಡ್ ಮೂರು ತಿಂಗಳಿನಿಂದ ಆರು ತಿಂಗಳವರೆಗಿದೆ.

ಪ್ರಮುಖ ಕಾರು ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ ಮೋಟರ್ಸ್ ಮತ್ತು ಟಾಟಾ ಮೋಟರ್ಸ್ ಕಂಪನಿಗಳು ಪೆಟ್ರೋಲ್ ಕಾರು ಖರೀದಿದಾರರಿಗೆ ವಿಶೇಷ ಆಫರು, ದರ ವಿನಾಯಿತಿ ನೀಡುತ್ತಿವೆ. ಆದರೂ ಪೆಟ್ರೋಲ್ ಕಾರುಗಳ ಮಾರಾಟ ಹೆಚ್ಚಿಸಿಕೊಳ್ಳಲು ಕಾರು ಕಂಪನಿಗಳು ವಿಫಲವಾಗುತ್ತಿವೆ.

More from DriveSpark

Article Published On: Friday, June 8, 2012, 10:40 [IST]
English summary
India's leading carmaker, Maruti Suzuki has downsized production of some of the petrol models due to declining sales in the market. The cars include the company's best selling Alto small car. Demand for diesel cars have been at an all time high with frequent petrol price hikes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+