ಐಟಿಐ ಸಂಸ್ಥೆಗಳನ್ನು ದತ್ತು ತೆಗೆದುಕೊಳ್ಳುವತ್ತ ಮಾರುತಿ

ಸುಮಾರು 40 ಐಟಿಐ ಕೇಂದ್ರಗಳನ್ನು ದತ್ತು ತೆಗೆದುಕೊಳ್ಳಲು ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಯೋಜಿಸಿದೆ. ಗುಜರಾತಿನಲ್ಲಿ 18 ಸಾವಿರ ಕೋಟಿ ರುಪಾಯಿಯ ವಿಸ್ತರಣಾ ಯೋಜನೆಯ ಸಿಬ್ಬಂದಿ ಅವಶ್ಯಕತೆಗಾಗಿ ಈ ನಿರ್ಧಾರಕ್ಕೆ ಬಂದಿದೆ.

ಈಗಾಗಲೇ ಗುಜರಾತಿನಲ್ಲಿ ಕಂಪನಿಯು ಸುಮಾರು ಹತ್ತು ಇಂಡಸ್ಟಿಯಲ್ ಟ್ರೈನಿಂಗ್ ಸಂಸ್ಥೆಗಳನ್ನು ದತ್ತು ತೆಗೆದುಕೊಂಡಿದೆ. ಕಂಪನಿಯು ಇಂತಹ ದತ್ತು ತೆಗೆದುಕೊಂಡ ಸಂಸ್ಥೆಗಳಿಂದ ನೂರಾರು ವಿದ್ಯಾರ್ಥಿಗಳನ್ನು ಕಂಪನಿಗೆ ನೇಮಿಸಿಕೊಳ್ಳಲಿದೆ.

ಇಂತಹ 50 ಐಟಿಐಗಳಲ್ಲಿ ಹೆಚ್ಚಿನವು ಉತ್ತರ ಭಾರತದ ಸಂಸ್ಥೆಗಳಾಗಿರಲಿವೆ. ಕಂಪನಿಯು ತನ್ನ ಡೀಲರುಗಳ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ವಾಹನೋದ್ಯಮದ ತರಬೇತಿ ಕೂಡ ನೀಡಲಿವೆ ಎಂದು ಮೂಲಗಳು ತಿಳಿಸಿವೆ.

ಮಾರುತಿ ಸುಜುಕಿ ದತ್ತು ತೆಗೆದುಕೊಂಡ ಐಟಿಐಗಳಲ್ಲಿ ಓದಿದ ವಿದ್ಯಾರ್ಥಿಗಳು ಇತರ ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಂದ ಹೆಚ್ಚು ಆಟೋಮೊಬೈಲ್ಸ್ ಬಗ್ಗೆ ತಿಳಿದಿರುತ್ತಾರೆ ಎಂದು ಮಾರುತಿ ಡೀಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

More from DriveSpark

Article Published On: Tuesday, May 15, 2012, 16:48 [IST]
English summary
Maruti Suzuki India Planing to adopt ITIs in North India. Company already adopting some Industrial Training Institutes to create skilled workforce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+