ಜನವರಿ ತಿಂಗ್ಳಲ್ಲಿ ಮಾರುತಿ ಸುಜುಕಿಗೆ ಶುಭಫಲ

Maruti Suzuki January 2012 Sales Increased
ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿ ಮಾರಾಟ ಶತತ ಏಳುತಿಂಗಳ ಇಳಿಕೆ ನಂತರ ಏರಿಕೆ ಕಾಣಲು ಆರಂಭಿಸಿದೆ. ಪ್ರಸಕ್ತ ವರ್ಷದ ಮೊದಲ ತಿಂಗಳಲ್ಲಿ ಕಂಪನಿಯು ಒಟ್ಟು ಸುಮಾರು 1.15 ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕಿಂತ ಶೇಕಡ 5ರಷ್ಟು ಏರಿಕೆ ಕಂಡಿದೆ.

ಕಂಪನಿಯು 2010ರ ಜನವರಿ ತಿಂಗಳಲ್ಲಿ 1,09,743 ಕಾರು ಮಾರಾಟ ಮಾಡಿತ್ತು. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಮಾರಾಟ 92,161 ಯುನಿಟಿಗೆ ತಲುಪಿ ಶೇಕಡ 7.1 ರಷ್ಟು ಇಳಿಕೆ ಕಂಡಿತ್ತು.

2012ರ ಜನವರಿ ತಿಂಗಳಲ್ಲಿ ರಾಷ್ಟ್ರೀಯ ರಾಜಧಾನಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ದೇಶದಲ್ಲಿ 1,01,047 ಕಾರು ಮಾರಾಟ ಮಾಡಿದೆ. ಕಳೆದ ವರ್ಷದ ಜನವರಿಯಲ್ಲಿ ಇದು 1,00,422 ಯುನಿಟ್ ಆಗಿತ್ತು.

ಕಳೆದ ತಿಂಗಳು ಕಂಪನಿಯ ರಫ್ತು ವಹಿವಾಟು ಕೂಡ ಗಮನಾರ್ಹವಾಗಿ ಏರಿಕೆ ಕಂಡಿದೆ. ಕಂಪನಿಯು ಜನವರಿಯಲ್ಲಿ 14,386 ಯುನಿಟ್ ಕಾರು ರಫ್ತು ಮಾಡಿದ್ದು, ಕಳೆದ ವರ್ಷದ ಜನವರಿಯ 9,321 ಕಾರು ರಫ್ತಿಗೆ ಹೋಲಿಸಿದರೆ ಶೇಕಡ 54.34ರಷ್ಟು ಏರಿಕೆ ದಾಖಲಿಸಿದೆ.

ಕಂಪನಿಯ ಒಟ್ಟಾರೆ ಪ್ರಯಾಣಿಕ ಕಾರು ಮಾರಾಟ 88,377 ಯುನಿಟ್ ತಲುಪಿದ್ದು, ಕಳೆದ ವರ್ಷದ ಜನವರಿ ತಿಂಗಳ 86,285 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 2.42ರಷ್ಟು ಏರಿಕೆ ದಾಖಲಿಸಿದೆ. ಆದರೆ ಕಂಪನಿಯ ಮಿನಿ ಸೆಗ್ಮೆಂಟ್ ಕಾರುಗಳ ಮಾರಾಟ ಇಳಿಕೆ ಕಂಡಿದೆ.

ಕಂಪನಿಯ ಪುಟ್ಟ ಕಾರುಗಳಾದ ಮಾರುತಿ 800, ಎ-ಸ್ಟಾರ್, ಆಲ್ಟೋ ಮತ್ತು ವ್ಯಾಗನಾರ್ ಕಾರು ಮಾರಾಟ 52,036 ಯುನಿಟಿಗೆ ತಲುಪಿ ಶೇಕಡ 2.38ರಷ್ಟು ಇಳಿಕೆ ಕಂಡಿದೆ. ಕಳೆದ ವರ್ಷದ ಜನವರಿ ತಿಂಗಳಲ್ಲಿ ಕಂಪನಿಯ ಮಿನಿ ಸಗ್ಮೆಂಟ್ ಕಾರುಗಳ ಮಾರಾಟ 53,304 ಯುನಿಟ್ ಆಗಿತ್ತು.

ಎಸ್ಟಿಲೊ, ಸ್ವಿಫ್ಟ್ ಮತ್ತು ರಿಟ್ಜ್ ಸೇರಿದಂತೆ ಕಾಂಪ್ಯಾಕ್ಟ್ ಕಾರು ಸೆಗ್ಮೆಂಟ್ ಮಾರಾಟ ಶೇಕಡ 22.35ರಷ್ಟು ಏರಿಕೆ ಕಂಡಿದೆ. ಆದರೆ ಕಂಪನಿಯ ಡಿಜೈರ್ ಕಾರು ಮಾರಾಟ ಶೇಕಡ 11.61ರಷ್ಟು ಇಳಿಕೆ ಕಂಡಿದೆ.

More from DriveSpark

Article Published On: Wednesday, February 1, 2012, 13:08 [IST]
English summary
Maruti Suzuki January 2012 Sales Increased after seven consecutive months drop. Maruti Suzuki sales increased 5.18 per cent(1,15,433 units) comparing same month last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+