ಮಾರುತಿ ಎಸ್ಎಕ್ಸ್4 ಕಾರಿಗೆ 80 ಸಾವಿರ ಡಿಸ್ಕೌಂಟ್
ಕಾರುಪ್ರೇಮಿಗಳಿಗೆ ಮಾರುತಿ ಸುಜುಕಿ ಕಂಪನಿಯ ಎಸ್ಎಕ್ಸ್4 ಅಚ್ಚುಮೆಚ್ಚು. ಆದರೆ ಸಿ ಸೆಗ್ಮೆಂಟಿನ ಈ ಕಾರು ಉಳಿದ ಮಾಡೆಲ್ ಗಳಂತೆ ಮಾರಾಟವಾಗುತ್ತಿಲ್ಲ. ಇದೀಗ ನಂಬಲು ಸಾಧ್ಯವಿಲ್ಲದಂತೆ ಕಂಪನಿಯು ಎಸ್ಎಕ್ಸ್4 ಕಾರಿಗೆ ಸುಮಾರು 80 ಸಾವಿರ ರುಪಾಯಿಯಷ್ಟು ಡಿಸ್ಕೌಂಟ್ ನೀಡುತ್ತಿದೆ.
ಸೆಲೆಬ್ರೆಷನ್ ಎಡಿಷನ್ ಡೀಸೆಲ್ ಎಸ್ಎಕ್ಸ್4 ಕಾರಿಗೆ ದರ ವಿನಾಯಿತಿ ಮಾತ್ರವಲ್ಲದೇ ವಿನಿಮಯ ಬೋನಸ್, ಉಚಿತ ಆಕ್ಸೆಸರಿಗಳನ್ನೂ ನೀಡಲಿದೆ. ಅಂದಹಾಗೆ ಜೂನ್ 25ರಿಂದ ಆರಂಭವಾಗುವ ಈ ಆಫರ್ ಕೇವಲ 7 ದಿನ ಮಾತ್ರವೆಂದು ಕಂಪನಿಯು ಪ್ರಕಟಿಸಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯು 10 ದಶಲಕ್ಷ ದೇಶಿ ಮಾರಾಟದ ನೆನಪಿಗೆ ನೂತನ ಸೆಲೆಬ್ರೆಷನ್ ಅಡಿಷನ್ ಆವೃತ್ತಿ ಹೊರತಂದಿತ್ತು.
ಮಾರುತಿ ಸುಜುಕಿ ಸೆಲೆಬ್ರೆಷನ್ ಎಡಿಷನ್ ಎಸ್ಎಕ್ಸ್4 ಕಾರು ಹೆಚ್ಚುವರಿ ಫೀಚರುಗಳನ್ನು ಹೊಂದಿದೆ. ಅಂದರೆ ಸೀಟುಗಳಿಗೆ ಹೊಸ ಫ್ಯಾಬ್ರಿಕ್, ಕ್ರೋಮ್ ಡೋರ್ ಹ್ಯಾಂಡಲ್, ಆಕರ್ಷಕ ನೂತನ ಆರ್ಮ್ ರೆಸ್ಟ್, ದಿಂಬು, ಮ್ಯಾಟ್ ಇತ್ಯಾದಿಗಳು ಇರಲಿವೆ. ಜೊತೆಗೆ ಹೊಸ ಗ್ರಾಫಿಕ್ಸ್ ಕಾರಿನ ಅಂದ ಹೆಚ್ಚಿಸಿದೆ.
ಮಾರುತಿ ಸುಜುಕಿ ಎಸ್ಎಕ್ಸ್4 ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೇ ಸಿಎನ್ ಜಿ ಆಯ್ಕೆಯಲ್ಲೂ ದೊರಕುತ್ತದೆ. ಕಂಪನಿಯು ಪೆಟ್ರೋಲ್ ಎಸ್ಎಕ್ಸ್4 ಕಾರಿಗೂ ದರ ವಿನಾಯಿತಿ ಮಾಡಿದೆ. ಆದರೆ ಡೀಸೆಲ್ ಆವೃತ್ತಿಗೆ ಹೋಲಿಸಿದರೆ ಪೆಟ್ರೋಲ್ ಆವೃತ್ತಿಗೆ ಡಿಸ್ಕೌಂಟ್ ಕಡಿಮೆಯೆನ್ನಬಹುದು.
ಮಾರುತಿ ಎಸ್ಎಕ್ಸ್4 ಕಾರು ಖರೀದಿಸಲು ಯೋಜಿಸಿದರೆ ಇದು ಸೂಕ್ತ ಸಮಯ. ಮಾರುತಿ ಸುಜುಕಿ ಎಸ್ಎಕ್ಸ್4 ಡೀಸೆಲ್ ಕಾರಿನ ಆರಂಭಿಕ ದರ 8 ಲಕ್ಷ ರುಪಾಯಿ.


Click it and Unblock the Notifications









