ಪಾಲು ಹೆಚ್ಚಿಸಿಕೊಳ್ಳುವತ್ತ ಮಾರುತಿ ಸುಜುಕಿ ಚಿತ್ತ
ಇತರ ಕಾರುಕಂಪನಿಗಳ ಪ್ರತಿಸ್ಪರ್ಧೆಯಿಂದ ಕಳೆದುಕೊಂಡಿರುವ ಮಾರುಕಟ್ಟೆ ಪಾಲನ್ನು ಮತ್ತೆ ತನ್ನದಾಗಿಸಿಕೊಳ್ಳಲು ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಪ್ರಯತ್ನಿಸುತ್ತಿದೆ. ಕಂಪನಿಯು ದೇಶದ ವಾಹನ ಮಾರುಕಟ್ಟೆಯಲ್ಲಿ ಕಳೆದ ವರ್ಷ ಶೇಕಡ 44ರಷ್ಟು ಪಾಲು ಪಡೆದಿತ್ತು.
ಮಾನೆಸರ್ ಘಟಕದಲ್ಲಿ ಉಂಟಾದ ಬಿಕ್ಕಟ್ಟಿನಿಂದ ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆ ಪಾಲು ಇಳಿಕೆ ಕಂಡಿತ್ತು. ಮಾನೆಸರ್ ಘಟಕದಲ್ಲಿ ನೌಕರರ ಪ್ರತಿಭಟನೆಯಿಂದ ಸುಮಾರು 1.06 ಲಕ್ಷ ವಾಹನ ಉತ್ಪಾದನೆ ನಷ್ಟವಾಗಿತ್ತು. ಪರಿಣಾಮವಾಗಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಕಂಪನಿಯ ಮಾರುಕಟ್ಟೆ ಪಾಲು ಶೇಕಡ 29ಕ್ಕೆ ಕುಸಿದಿತ್ತು.
ಆದರೆ ಈಗ ಮತ್ತೆ ಕಂಪನಿಯು ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುತ್ತಿದೆ. ದೇಶದ ಅತ್ಯಧಿಕ ಮಾರಾಟದ ಐದು ಕಾರುಗಳಲ್ಲಿ ಮಾರುತಿಯ ನಾಲ್ಕು ಕಾರುಗಳಿವೆ. ಆಲ್ಟೋ ಕಾರುಗಳು ಈಗಲೂ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸ್ವಿಫ್ಟ್ ಕೂಡ ಅತ್ಯುತ್ತಮ ಬೇಡಿಕೆಯ ಕಾರಿದೆ. ಕಂಪನಿಯ ಮಾರುಕಟ್ಟೆ ಪಾಲು ಈಗ ಶೇಕಡ 38.5ಕ್ಕೆ ತಲುಪಿದೆ. ಕಳೆದ ವರ್ಷ ಈ ಸಮಯದಲ್ಲಿ ಇದು ಶೇಕಡ 44.7ರಷ್ಟಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









