ಹೊಸ ಮಾರುತಿ ರಿಟ್ಜ್ ಸ್ವಾಗತಕ್ಕೆ ತಳಿರುತೋರಣ

ರಿಟ್ಜ್ ಅಭಿಮಾನಿಗಳಿಗೆ ಇಷ್ಟವಾಗುವ ಸುದ್ದಿಯೊಂದು ಇಲ್ಲಿದೆ. ಕಂಪನಿಯು ಶೀಘ್ರದಲ್ಲಿ ಪರಿಷ್ಕೃತ ರಿಟ್ಜ್ ಆವೃತ್ತಿಯನ್ನು ಪರಿಚಯಿಸಲಿದೆಯಂತೆ. ಇಲ್ಲಿವರೆಗೆ ಕಂಪನಿಯು ಸ್ವಿಫ್ಟ್ ಕಡೆ ಹೆಚ್ಚು ಫೋಕಸ್ ನೀಡುತ್ತಿತ್ತು. ಹೀಗಾಗಿ ರಿಟ್ಜ್ ಮೇಲೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿರಲಿಲ್ಲ.
ಸ್ವಿಫ್ಟ್ ಕಾರಿಗಿಂತ ಅಗ್ಗದ ದರದಲ್ಲಿ, ಸ್ವಿಫ್ಟ್ ಗೆ ಪರ್ಯಾಯವಾಗಿ ಖರೀದಿಸಬಹುದಾದ ಕಾರೆಂದರೆ ರಿಟ್ಜ್. ಸ್ವಿಫ್ಟ್ ಮತ್ತು ರಿಟ್ಜ್ ಕಾರುಗಳ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಒಂದೇ ರೀತಿಯ ಸಾಮರ್ಥ್ಯದಾಗಿವೆ.
ಸ್ವಿಫ್ಟ್ ಕಾರಿನಂತೆ ರಿಟ್ಜ್ ಕೂಡ ಗ್ಲೋಬಲ್ ಕಾರು. ಕಳೆದ ಆಗಸ್ಟ್ ತಿಂಗಳಲ್ಲಿ ಸ್ವಿಫ್ಟ್ ಪರಿಷ್ಕೃತ ಆವೃತ್ತಿ ಬಂದಿತ್ತು. ಇದೀಗ ರಿಟ್ಜ್ ಸರದಿ. ರಿಟ್ಜ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳೆರಡರಲ್ಲೂ ದೊರಕುತ್ತದೆ. ಇವೆರಡು ಆವೃತ್ತಿಗಳು ಸ್ವಿಫ್ಟ್ ನಲ್ಲಿರುವ ಎಂಜಿನನ್ನೇ ಹೊಂದಿವೆ.
ನೂತನ ರಿಟ್ಜ್ ಕಾರಿಗೆ ಡಬ್ಬಲ್ ಫ್ಯೂಯಲ್ ಎಂಜಿನ್ ಅಳವಡಿಸುವ ಕುರಿತು ಕಂಪನಿ ಆಲೋಚಿಸಿತ್ತಿದೆ ಎಂದು ವರದಿಗಳು ಹೇಳಿವೆ. ಅಂದರೆ ಈ ಎಂಜಿನ್ ಪೆಟ್ರೋಲ್ ಮತ್ತು ಸಿಎನ್ ಜಿ ಗಳೆರಡರಲ್ಲೂ ದೊರಕಲಿದೆ.
ನೂತನ ಪರಿಷ್ಕೃತ ರಿಟ್ಜ್ ಕಾರು ಮುಂದಿನ ಕೆಲವೇ ತಿಂಗಳಲ್ಲಿ ಆಗಮಿಸಲಿದೆ ಎಂದು ವರದಿಗಳು ಹೇಳಿವೆ. ಎತ್ತರ, ಸ್ಥಳಾವಕಾಶ ಮತ್ತು ಆರಾಮದಾಯಕತೆ ಫೀಚರುಗಳಿಂದ ಮಾರುತಿ ರಿಟ್ಜ್ ಕಾರು ಹೆಚ್ಚು ಜನರಿಗೆ ಇಷ್ಟವಾಗಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications








