ಮಾರುತಿ ಸುಜುಕಿಯಿಂದ ಈ ವರ್ಷ 1,900 ಸಿಬ್ಬಂದಿ ನೇಮಕಾತಿ

"ಈ ಆರ್ಥಿಕ ವರ್ಷದಲ್ಲಿ ಕಂಪನಿಯು ಈಗಾಗಲೇ 200 ಸಿಬ್ಬಂದಿ ನೇಮಕ ಮಾಡಿಕೊಂಡಿದೆ. ಎಂಜಿನಿಯರಿಂಗ್ ಮತ್ತು ಮ್ಯಾನೆಜ್ ಮೆಂಟ್ ವಿಭಾಗಕ್ಕೆ ಇನ್ನು 900 ಜನರನ್ನು ನೇಮಕ ಮಾಡಿಕೊಳ್ಳಲಾಗುವುದು. ಜೊತೆಗೆ ಟೆಕ್ನೆಷಿಯನ್ ಸೇರಿದಂತೆ ಉಳಿದ ವಿಭಾಗಗಳಿಗೆ ಸುಮಾರು 1 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಿದ್ದೇವೆ" ಎಂದು ಮಾರುತಿ ಸುಜುಕಿ ಅಡ್ಮಿನ ವಿಭಾಗದ ಮುಖ್ಯ ನಿರ್ವಹಣಾಧಿಕಾರಿ ಎಸ್ ವೈ ಸಿದ್ದಿಕ್ ಹೇಳಿದ್ದಾರೆ.
ಜೂನ್ 14ರಿಂದ ಜೂನ್ 15ರವರೆಗೆ ದೇಶದ ವಾಹನ ತಯಾರಿಕರ ಸಂಘವು(ಸ್ಯಾಮ್) ಆಟೋಮೊಬೈಲ್ ಎಚ್ ಆರ್ ಸಭೆ ಕರೆದಿದೆ. ಮಾರುತಿ ಸುಜುಕಿ ಕಂಪನಿಯು ಈ ಸಮಯದಲ್ಲಿ ಅಂತರ್ ಜಾಲ ಆಧರಿತ ತರಬೇತಿ ಅಕಾಡಮಿ ಸ್ಥಾಪಿಸುವ ನಿರೀಕ್ಷೆಯಿದೆ. ಇದಕ್ಕಾಗಿ ಕಂಪನಿಯು ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 25 ಕೋಟಿ ರುಪಾಯಿ ಹೂಡಿಕೆ ಮಾಡುವ ಸೂಚನೆಯನ್ನು ಸಿದ್ದಿಕ್ ನೀಡಿದ್ದಾರೆ.
ನೂತನ ತರಬೇತಿ ಅಕಾಡಮಿಯು ಕಂಪನಿಯ ಬ್ರಾಂಡ್ ಇಮೇಜ್ ಹೆಚ್ಚಿಸಲಿದೆ. ದೇಶದದ್ಯಾಂತ ಮಾರುತಿ ಸುಜುಕಿ ಗ್ರೂಪ್, ಡೀಲರುಗಳು, ಪೂರೈಕೆದಾರರು ಈ ಅಕಾಡಮಿ ನೇತೃತ್ವ ವಹಿಸಲಿದ್ದಾರೆ. ಈ ಅಕಾಡಮಿ ಮೂಲಕ ಹೊಸದಾಗಿ ಕೆಲಸಕ್ಕೆ ಸೇರುವ ಅಭ್ಯರ್ಥಿಗಳ ಪರಿಣತಿಯನ್ನು ಕಂಪನಿ ಹೆಚ್ಚಿಸಲಿದೆ.


Click it and Unblock the Notifications








