ಮಾರುತಿ ಸುಜುಕಿ ಲಾಭ ಶೇಕಡ 64ರಷ್ಟು ಇಳಿಕೆ

Maruti Suzuki Q3 Profit Declines By 64%
2010-11ರ ಮೂರನೇ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ನಿವ್ವಳ ಲಾಭ 205.62 ಕೋಟಿ ರು.ಗೆ ತಲುಪಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 64ರಷ್ಟು ಇಳಿಕೆ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಕಂಡಿರುವುದು ಲಾಭ ಇಳಿಕೆಗೆ ಪ್ರಮುಖ ಕಾರಣವೆಂದು ಕಂಪನಿ ತಿಳಿಸಿದೆ.

ಕಂಪನಿಯ ನಿವ್ವಳ ಲಾಭ ಇಳಿಕೆಗೆ ಇತರ ಪ್ರಮುಖ ಕಾರಣಗಳೆಂದರೆ ಮಾನೆಸರ್ ಘಟಕದಲ್ಲಿನ ನೌಕರರ ಪ್ರತಿಭಟನೆ. ಕಾರ್ಮಿಕರ ಪ್ರತಿಭಟನೆಯಿಂದ ಅತ್ಯಧಿಕ ಮಾರಾಟದ ಸ್ವಿಫ್ಟ್ ಉತ್ಪಾದನೆಗೆ ಹಿನ್ನಡೆಯಾಗಿತ್ತು.

ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು 565 ಕೋಟಿ ರು. ನಿವ್ವಳ ಲಾಭ ಗಳಿಸಿತ್ತು. "ರೂಪಾಯಿ ಮೌಲ್ಯ ಇಳಿಕೆ ಕಂಡಿರುವುದು ವಾಹನ ಬಿಡಿಭಾಗಗಳ ಆಮದಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಕಂಪನಿಯ ಲಾಭ ಗಮನಾರ್ಹವಾಗಿ ಇಳಿಕೆ ಕಂಡಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಸಮಯದಲ್ಲಿ ಕಂಪನಿಯ ನಿವ್ವಳ ಮಾರಾಟ 7,663.6 ಕೋಟಿ ರು.ಗೆ ತಲುಪಿದ್ದು ಶೇಕಡ 15.4ರಷ್ಟು ಇಳಿಕೆ ಕಂಡಿದೆ. ಇದಕ್ಕೂ ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಇದು 9,276.73 ಕೋಟಿ ರುಪಾಯಿಗೆ ತಲುಪಿತ್ತು. ಪೆಟ್ರೋಲ್ ದರ ಹೆಚ್ಚಳ ಮತ್ತು ಬಡ್ಡಿದರ ಹೆಚ್ಚಳ ಕೂಡ ಕಂಪನಿಯ ಲಾಭ ಇಳಿಕೆಗೆ ಕಾರಣವಾಗಿದೆ.

More from DriveSpark

Article Published On: Tuesday, January 24, 2012, 17:01 [IST]
English summary
Maruti Suzuki India Ltd reported net profit for the October-December quarter fell by as much as 63.6 per cent to Rs.205.6 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+