ಮಾರುತಿ ಸುಜುಕಿ ಹಳೆ ಡಿಜೈರಿಗೆ ಹೊಸ ರೂಪ

ಹಳೆಯ ತಲೆಮಾರಿನ ಸ್ವಿಫ್ಟ್ ಡಿಜೈರ್ ಕಾರನ್ನು "ಡಿಜೈರ್ ಟೂರ್" ಹೆಸರಿನಲ್ಲಿ ಮಾರುತಿ ಸುಜುಕಿ ಮತ್ತೆ ಅನಾವರಣ ಮಾಡಿದೆ. ಕಂಪನಿಯು ಡಿಜೈರ್ ನೂತನ ಆವೃತ್ತಿ ಹೊರತಂದರೂ ಹಳೆಯ ಮಾದರಿಯನ್ನೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಡಿಜೈರ್ ಮರುಪರಿಚಯಿಸಿದೆ ಎನ್ನಲಾಗಿದೆ.

ಟ್ಯಾಕ್ಸಿ ಮತ್ತು ರಫ್ತು ಮಾರುಕಟ್ಟೆಯಲ್ಲಿ ಹಳೆಯ ಡಿಜೈರಿಗೆ ಈಗಲೂ ಅತ್ಯುತ್ತಮ ಬೇಡಿಕೆಯಿದೆ. ಈಗ ಪರಿಚಯಿಸಿರುವ ಡಿಜೈರ್ ಟೂರ್ ಆವೃತ್ತಿಯು ಏಪ್ರಿಲ್ ತಿಂಗಳಲ್ಲಿ ವಾಣಿಜ್ಯ ಮಾರಾಟಕ್ಕೆ ರೆಡಿಯಾಗಲಿದೆ. ಮುಖ್ಯವಾಗಿ ಟ್ಯಾಕ್ಸಿ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನೂತನ ಡಿಜೈರ್ ಟೂರ್ ಕಾರನ್ನು ಕಂಪನಿ ಪರಿಚಯಿಸುತ್ತಿದೆ.

ನೂತನ ಡಿಜೈರ್ ಟೂರ್ ಆವೃತ್ತಿಯು ಡಿಜೈರ್ ಎಲ್ಎಕ್ಸ್ ಐ ಮತ್ತು ಡಿಜೈರ್ ಎಲ್ಡಿಐ ಆವೃತ್ತಿಗಳಿಗಿಂತಲೂ ಕಳಸ್ತರದ ಆವೃತ್ತಿಯಾಗಿದೆ. ಇದರಲ್ಲಿ ಏರ್ ಕಂಡಿಷನ್ ಮತ್ತು ಪವರ್ ಸ್ಟಿಯರಿಂಗ್ ಪ್ರಮುಖ ಸ್ಟಾಂಡರ್ಡ್ ಫೀಚರುಗಳಾಗಿವೆ.

ವರದಿಗಳ ಪ್ರಕಾರ ಡಿಜೈರ್ ಟೂರ್ ದರ ಟಾಟಾ ಇಂಡಿಕಾ ಎಕ್ಸ್ ಎಲ್ ಗಿಂತ ಅಗ್ಗವಾಗಿರಲಿದೆಯಂತೆ. ಡಿಜೈರ್ ಟೂರ್ ಪೆಟ್ರೋಲ್ ಆವೃತ್ತಿ ದರ 4.88 ಲಕ್ಷ ರು. ಮತ್ತು ಡೀಸೆಲ್ ಆವೃತ್ತಿ ದರ 5.91 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಇದು ದೆಹಲಿ ಎಕ್ಸ್ ಶೋರೂಂ ದರ.

ದರ ಹೋಲಿಕೆ
ಮಾಡೆಲ್ ಡೀಸೆಲ್ ಪೆಟ್ರೋಲ್
ಮಾರುತಿ ಡಿಜೈರ್ ಟೂರ್ 5.91 ಲಕ್ಷ ರು. 4.88 ಲಕ್ಷ ರು.
ಟಾಟಾ ಇಂಡಿಗೊ ಎಕ್ಸ್ ಎಲ್ 6.29 ಲಕ್ಷ ರು. 5.91 ಲಕ್ಷ ರು.
ಟೊಯೊಟಾ ಎಟಿಯೋಸ್ 6.69 ಲಕ್ಷ ರು. 5.14 ಲಕ್ಷ ರು.
ಮಹೀಂದ್ರ ವೆರಿಟೊ 5.97 ಲಕ್ಷ ರು. 5.04 ಲಕ್ಷ ರು.

More from DriveSpark

Article Published On: Tuesday, March 20, 2012, 10:17 [IST]
English summary
Maruti Suzuki has relaunched the old generation Swift DZire as the DZire Tour. There were reports about the carmaker wanting to retain the old DZire depite launching the new generation DZire based on the new Swift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+