ಮಾರುತಿ ಸುಜುಕಿ ಮಾರ್ಚ್ ಮಾರಾಟ ತುಸು ಏರಿಕೆ

Maruti Suzuki Sales Increased 3.3 percent
ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿ ಕಳೆದ ತಿಂಗಳು ಸುಮಾರು 1,25,952 ಯುನಿಟ್ ಕಾರು ಮಾರಾಟ ಮಾಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳ ಒಟ್ಟಾರೆ 1,21,952 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 3.3 ರಷ್ಟು ಏರಿಕೆಯಾಗಿದೆ.

ಇದೇ ಸಮಯದಲ್ಲಿ ಕಂಪನಿಯ ದೇಶಿ ಮಾರಾಟ 1,12,754 ಯುನಿಟಿಗೆ ತಲುಪಿದೆ. ಕಳೆದ ಆರ್ಥಿಕ ವರ್ಷದ ಇದೇ ತಿಂಗಳ 1,10,454 ಯುನಿಟ್ ಕಾರು ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 2.1ರಷ್ಟು ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಕಂಪನಿಯು 13,228 ಯುನಿಟ್ ಕಾರು ರಫ್ತು ಮಾಡಿದ್ದು, ಕಳೆದ ಮಾರ್ಚ್ ತಿಂಗಳ 11,528 ಯುನಿಟಿಗೆ ಹೋಲಿಸಿದರೆ ಶೇಕಡ 14.7ರಷ್ಟು ಹೆಚ್ಚಾಗಿದೆ.

2012ರ ಮಾರ್ಚ್ ತಿಂಗಳಲ್ಲಿ ಕಂಪನಿಯು 27,913 ಯುನಿಟ್ ಸ್ವಿಫ್ಟ್, ಎಸ್ಟಿಲೊ ಮತ್ತು ರಿಟ್ಜ್ ಕಾರುಗಳನ್ನು ಮಾರಾಟ ಮಾಡಿತ್ತು. ಇದಕ್ಕೂ ಹಿಂದಿನ ವರ್ಷದ ಮಾರ್ಚ್ ನಲ್ಲಿ ಕಂಪನಿಯು ಈ ಸೆಗ್ಮೆಂಟಿನಲ್ಲಿ 22,576 ಯುನಿಟ್ ಮಾರಾಟ ಮಾಡಿತ್ತು.

ಸೂಪರ್ ಕಾಂಪ್ಯಾಕ್ಟ್ ಕಾರು ಡಿಜೈರ್ ಮಾರಾಟ 16,451 ಯುನಿಟಿಗೆ ತಲುಪಿದ್ದು, ಕಳೆದ ವರ್ಷದ ಮಾರ್ಚ್‌ನ 10,278 ಯುನಿಟಿಗೆ ಹೋಲಿಸಿದರೆ ಶೇಕಡ 60ರಷ್ಟು ಏರಿಕೆ ದಾಖಲಿಸಿದೆ.

ಆದರೆ ಕಂಪನಿಯ ಮಿನಿ ಕಾಂಪ್ಯಾಕ್ಟ್ ಕಾರುಗಳಾದ ಮಾರುತಿ 800, ಎಸ್ಟಾರ್, ಆಲ್ಟೊ ಮತ್ತು ವ್ಯಾಗನಾರ್ ಮಾರಾಟ ಶೇಕಡ 10.2ರಷ್ಟು ಇಳಿಕೆ ದಾಖಲಿಸಿದೆ. ಕಳೆದ ತಿಂಗಳು ಈ ಸೆಗ್ಮೆಂಟ್ ವಾಹನಗಳು 52,826 ಯುನಿಟ್ ಮಾರಾಟವಾಗಿದ್ದವು. ಕಳೆದ ವರ್ಷ ಇದೇ ಸಮಯದಲ್ಲಿ 58,799 ಯುನಿಟ್ ಮಾರಾಟವಾಗಿದ್ದವು.

ಸುಮಾರು 1,530 ಯುನಿಟ್ ಜಿಪ್ಸಿ, ಗ್ರಾಂಡ್ ವಿಟರಾ, ಎರ್ಟಿಗಾ ಮುಂತಾದ ಯುಟಿಲಿಟಿ ವಾಹನ ಮಾರಾಟಗೊಂಡಿವೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಈ ಸೆಗ್ಮೆಂಟ್‌ನಲ್ಲಿ 620 ಯುನಿಟ್ ವಾಹನ ಮಾರಾಟವಾಗಿದ್ದವು. ಓಮ್ನಿ ಮತ್ತು ಎಕೊ ಮಾರಾಟ ಶೇಕಡ 13.7ರಷ್ಟು ಏರಿಕೆ ಕಂಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, April 2, 2012, 15:50 [IST]
English summary
Maruti Suzuki Sales increased 3.3 percent in March 2012. Company Sell last month 125,952 units from 121,952 units in the like period of 2011. Swift, Estilo and Ritz sales grew by 23.6 percent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+