ನಂಬಿಕಸ್ತ ಕಂಪನಿ ಮಾರುತಿ, ನಂಬಿಕೆ ಕಳೆದುಕೊಂಡ ಟಾಟಾ

ಸಂಶಯವೇ ಇಲ್ಲ. ದೇಶದ ಜನರು ಅತುಲ ವಿಶ್ವಾಸವಿಟ್ಟಿರುವ ಕಾರು ಬ್ರಾಂಡೆಂದರೆ ಮಾರುತಿ ಸುಜುಕಿ. ಈ ಮಾಹಿತಿಯನ್ನು ಸಮೀಕ್ಷೆಯೊಂದು ಕೂಡ ಧೃಢೀಕರಿಸಿದೆ. ಬ್ರಾಂಡ್ ಟ್ರಸ್ಟ್ ಅಡ್ವೈಸರಿ ಕಂಪನಿಯ ಇತ್ತೀಚಿನ ವರದಿ 'The Brand Trust Report, India Study 2012'ರಲ್ಲಿ ಮಾರುತಿ ಸುಜುಕಿ ದೇಶದ ಜನರ ಅಚ್ಚುಮೆಚ್ಚಿನ ಕಾರು ಕಂಪನಿಯಾಗಿ ಹೊರಹೊಮ್ಮಿದೆ.
ಮಾರುತಿ ಸುಜುಕಿ ನಂತರ ದೇಶದ ಜನರು ಹೆಚ್ಚು ನಂಬಿಕೆಯಿಟ್ಟ ಕಂಪನಿಗಳೆಂದರೆ ಬಿಎಂಡಬ್ಲ್ಯು, ಹೀರೋ ಹೊಂಡಾ, ಟೊಯೊಟಾ ಮತ್ತು ಹೋಂಡಾ. ಈ ಎಲ್ಲಾ ಕಂಪನಿಗಳು ಭಾರತದ ನಂಬಿಕಸ್ತ ವಾಹನ ಕಂಪನಿಗಳೆಂದು ವರದಿ ಹೇಳಿದೆ.
ಹೆಚ್ಚು ವಿಶ್ವಾಸನೀಯ ವಾಹನ ಕಂಪನಿಗಳ ಅಗ್ರಪಂಕ್ತಿಯಲ್ಲಿ ಫೋರ್ಡ್, ಆಡಿ, ಸ್ಕೋಡಾ, ಹೀರೋ ಮತ್ತು ಯಮಹಾ ಕಂಪನಿಗಳು ಕೂಡ ಇವೆ. ಆದರೆ ಇಲ್ಲೊಂದು ಆಶಕ್ತಿದಾಯಕ ವಿಷಯವಿದೆ. ದೇಶದ ಎರಡು ಮತ್ತು ಮೂರನೇ ಅಗ್ರ ವಾಹನ ಕಂಪನಿಗಳಾದ ಹ್ಯುಂಡೈ ಮತ್ತು ಟಾಟಾ ಮೋಟರ್ಸ್ ಕಂಪನಿಗಳು ಅಗ್ರ ಹತ್ತು ನಂಬಿಕಸ್ತ ಕಂಪನಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ.
ಹೆಚ್ಚು ಜನರು ಇಷ್ಟಪಟ್ಟ ಕಾರೆಂದರೆ ಮಾರುತಿ ಸುಜುಕಿ ಡಿಜೈರ್. ಐಷಾರಾಮಿ ಕಾರು ಬ್ರಾಂಡುಗಳಲ್ಲಿ ದೇಶದಲ್ಲಿ ಹೆಚ್ಚು ಜನರಿಗೆ ಆಪ್ತವಾಗಿರುವುದು ಬಿಎಂಡಬ್ಲ್ಯು. "ದೇಶದ ಜನರಿಗೆ ಇಷ್ಟವಾಗುವಂತೆ ಸೇವೆ ಸಲ್ಲಿಸಿದ ಕಂಪನಿಗಳನ್ನು ಇಲ್ಲಿನ ಜನತೆ ಇಷ್ಟಪಟ್ಟಿದ್ದಾರೆ" ಎಂದು ಟ್ರಸ್ಟ್ ರಿಸರ್ಚ್ ಅಡ್ವೈಸರಿ ಕಂಪನಿಯ ಸಿಇಒ ಎನ್ ಚಂದ್ರಮೌಲಿ ಹೇಳಿದ್ದಾರೆ.


Click it and Unblock the Notifications








