ಹೋಲಿಕೆ: ಸ್ವಿಫ್ಟ್ ಕಾರೇ ಯಾಕೆ? ಮಾರುತಿ ರಿಟ್ಜ್ ಓಕೆ..!

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಬೇಕೆಂದಾಗ ಲಭಿಸುವ ಕಾರಲ್ಲ. ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚು. ಮಾನೆಸರ್ ಗಲಾಟೆಯಿಂದ ಉತ್ಪಾದನೆಯೂ ನಿಂತು ಹೋಗಿದೆ. ದಾಸ್ತಾನೂ ಖಾಲಿಯಾಗಿದೆ. ಹೀಗಾಗಿ ಸ್ವಿಫ್ಟ್ ಪ್ರೇಮಿಗಳು ರಿಟ್ಜ್ ಕಡೆ ಮುಖ ಮಾಡುತ್ತಿದ್ದಾರೆ.

ಕನ್ನಡ ಡ್ರೈವ್ ಸ್ಪಾರ್ಕ್ ಪ್ರಕಾರ ವಿನ್ಯಾಸವೊಂದನ್ನು ಬಿಟ್ಟು ರಿಟ್ಜ್ ಮತ್ತು ಸ್ವಿಫ್ಟ್ ನಡುವೆ ಹೇಳಿಕೊಡುವಂತಹ ಯಾವುದೇ ಪ್ರಮುಖ ಭಿನ್ನತೆಯಿಲ್ಲ. ಇವೆರಡು ಒಂದೇ ಪವರಿನ ಎಂಜಿನ್ ಹೊಂದಿವೆ. ಫೀಚರುಗಳ ನಡುವೆಯೂ ಅಂತಹ ವ್ಯತ್ಯಾಸವಿಲ್ಲ. ರಿಟ್ಜ್ ಮತ್ತು ಸ್ವಿಫ್ಟ್ ನಡುವಿನ ಸಾಮ್ಯತೆ, ಭಿನ್ನತೆ ಕಂಡುಹಿಡಿಯಲು ಮುಂದೆ ಓದಿ.

ಉದಾಹರಣೆಗೆ ನಾವೀಗ ಸ್ವಿಫ್ಟ್ ಮತ್ತು ರಿಟ್ಜ್ ಟಾಪ್ ಎಂಡ್ ಆವೃತ್ತಿಗಳನ್ನು ಹೋಲಿಕೆ ಮಾಡಿನೋಡೋಣ. ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಲ್ಲಿ ದೊರಕುವ ಈ ಎಲ್ಲಾ ಆವೃತ್ತಿಗಳಲ್ಲಿ ಏರ್ ಕಂಡಿಷನ್, ಪವರ್ ವಿಂಡೋಸ್, ಪವರ್ ಸ್ಟೀಯರಿಂಗ್, ಎಬಿಎಸ್ ಸಿಸ್ಟಮ್ ಇವೆ.

ಸ್ವಿಫ್ಟ್ ಮತ್ತು ರಿಟ್ಜ್ ಝಡ್ಎಕ್ಸ್ಐ ಆವೃತ್ತಿಗಳಲ್ಲಿ ಡ್ರೈವರ್ ಮತ್ತು ಪ್ಯಾಸೆಂಜರ್ ಏರ್ ಬ್ಯಾಗ್ ಇವೆ. ಸ್ವಿಫ್ಟ್ ಝಡ್‌ಡಿಐ ಆವೃತ್ತಿಯಲ್ಲೂ ಏರ್ ಬ್ಯಾಗ್ ಇವೆ. ಆದರೆ ರಿಟ್ಜ್ ವಿಡಿಐ ಆವೃತ್ತಿಯಲ್ಲಿ ಮಾತ್ರ ಏರ್ ಬ್ಯಾಗ್ ಮಿಸ್ ಆಗಿದೆ. ರಿಟ್ಜ್ ವಿಡಿಐ ಹೊರತುಪಡಿಸಿ ಉಳಿದ ಸ್ವಿಫ್ಟ್ ಮತ್ತು ರಿಟ್ಜ್ ಝಡ್ಎಕ್ಸ್ಐ ಆವೃತ್ತಿಗಳಲ್ಲಿ ಸಿಡಿ ಪ್ಲೇಯರ್ ಕೂಡ ಇದೆ.

ಸ್ಥಳಾವಕಾಶದ ವಿಷಯಕ್ಕೆ ಬಂದರೆ ಸ್ವಿಫ್ಟಿಗಿಂತ ರಿಟ್ಜ್ 100 ಮಿ.ಮಿ. ಆಸುಪಾಸಿನಲ್ಲಿ ಸ್ಥಳಾವಕಾಶ ಕಡಿಮೆ ಇದೆ( ಸ್ವಿಫ್ಟ್ 3850 ಎಂಎಂ/ ರಿಟ್ಜ್ 3715 ಎಂಎಂ.) ಅದು ತಲೆಕೆಡಿಸಿಕೊಳ್ಳಬೇಕಾದ ವ್ಯತ್ಯಾಸವೇನೂ ಅಲ್ಲ. ಎಲ್ಲಾ ಆವೃತ್ತಿಗಳಲ್ಲೂ ಐದು ಜನರು ಕುಳಿತುಕೊಳ್ಳಬಹುದು.

ಎರಡು ಕಾರುಗಳಲ್ಲಿಯೂ ಒಂದೇ ರೀತಿಯ ಎಂಜಿನ್ ಇವೆ. ಸ್ವಿಫ್ಟ್ ಮತ್ತು ರಿಟ್ಜ್ ಝಡ್ಎಕ್ಸ್ಐ ಆವೃತ್ತಿಗಳೆರಡೂ 1197 ಸಿಸಿ ಎಂಜಿನ್ ಹೊಂದಿವೆ. ಇವೆರಡು ಕ್ರಮವಾಗಿ 87 ಪಿಎಸ್ ಮತ್ತು 85 ಪಿಎಸ್ ಪವರ್ ನೀಡುತ್ತದೆ. ಅಂದ್ರೆ ಕೇವಲ 2 ಪಿಎಸ್ ಪವರ್ ವ್ಯತ್ಯಾಸವಿದೆ. ಇದು ಕೂಡ ತಲೆಕೆಡಿಸಿಕೊಳ್ಳುವ ಸಂಗತಿಯಲ್ಲ. ಟಾರ್ಕ್ ಪವರಿನಲ್ಲೂ ಕೇವಲ ಒಂದು ಎನ್ಎಂ ವ್ಯತ್ಯಾಸವಿದೆ ಅಷ್ಟೇ! ಈ ಎಲ್ಲಾ ಆವೃತ್ತಿಗಳು ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿವೆ.

ಸ್ವಿಫ್ಟ್ ಕಾರಿಗೆ ಕಾಯೋದು ಕಷ್ಟವೆನ್ನುವರು ರಿಟ್ಜ್ ಕಾರು ಖರೀದಿಸುವ ಮೂಲಕ ದುಡ್ಡು ಉಳಿಸಬಹುದು. ಸ್ವಿಫ್ಟ್ ಝಡ್ಎಕ್ಸ್ಐ ಎಕ್ಸ್ ಶೋರೂಂ ದರ 5.82 ಲಕ್ಷ ರು. ಇದ್ರೆ, ರಿಟ್ಜ್ ಝಡ್ಎಕ್ಸ್ಐ ದರ 5.28 ಲಕ್ಷ ರು. ಇದೆ. ಸುಮಾರು 60 ಸಾವಿರ ರು. ಉಳಿತಾಯ. ಡೀಸೆಲ್ ಆವೃತ್ತಿಗಳಲ್ಲಿ ಸ್ವಿಫ್ಟ್ ಗೆ ಹೋಲಿಸಿದರೆ ರಿಟ್ಜ್ ಖರೀದಿಯಿಂದ ಸುಮಾರು 1 ಲಕ್ಷ ರು.ವರೆಗೆ ಉಳಿಸಬಹುದು.

ಮಾರುತಿ ಸುಜುಕಿ ರಿಟ್ಜ್: ಸಂಪೂರ್ಣ ವಿಮರ್ಶೆ ಓದಿ

Article Published On: Wednesday, August 1, 2012, 13:00 [IST]
English summary
The Maruti Suzuki Swift's waiting period is expected to increase to more than six months again due to the crisis at Manesar. If you wanted to buy the Swift and do not wish to wait, the Maruti Suzuki Ritz is an ideal choice as it is cheaper, has more space and has the same mileage as the Swift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+