ಡೀಲರನ್ನು ಜೀವಂತ ದಹಿಸಿದ ಮಾರುತಿ ವ್ಯಾಗನಾರ್

ಮಾರ್ಬಲ್ ಡೀಲರ್ ಪವನ್ ಕುಮಾರ್ ಗುಪ್ತ(52) ಮೃತಪಟ್ಟ ದುರ್ದೈವಿ. ಎಂಜಿನ್ ನಲ್ಲಿ ಉಂಟಾದ ಕಿಡಿ ಕಾರು ಬೆಂಕಿಗಾಹುತಿಯಾಗಲು ಕಾರಣವಾಗಿರಬಹುದು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಊಹಿಸಿದ್ದಾರೆ. ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ ನಂತರ ಘಟನೆಗೆ ನಿಖರ ಕಾರಣ ಕಂಡು ಹಿಡಿಯಲು ಸಾಧ್ಯವೆಂದು ಪೊಲೀಸರು ಹೇಳಿದ್ದಾರೆ.
ಈ ವ್ಯಾಗನಾರ್ ಕಾರು ಸಂಪೂರ್ಣವಾಗಿ ಉರಿದು ಹೋಗಿದೆ. ಚಾಸೀಸ್ ನಂಬರ್ ತೆಗೆದುಕೊಂಡು ಕಾರಿನ ಮಾಹಿತಿ ಪಡೆಯುವ ಪ್ರಕ್ರಿಯೆಯಲ್ಲಿ ಪೊಲೀಸರಿದ್ದಾರೆ. ಇದು ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತವೆಂದು ಅಂದಾಜಿಸಲಾಗಿದೆ.
ಟಾಟಾ ನ್ಯಾನೊ ಕಾರುಗಳು ಬೆಂಕಿಗಾಹುತಿಯಾಗುವ ಮೂಲಕ ಸುದ್ದಿಯಾಗಿತ್ತು. ಒಂದು ವೆಂಟೊ ಮತ್ತು ಫೆರಾರಿ ಎಫ್ಎಫ್ ಕಾರಿನಲ್ಲೂ ಇತ್ತೀಚೆಗೆ ಬೆಂಕಿ ಕಾಣಿಸಿಕೊಂಡಿತ್ತು. ಇದೀಗ ವ್ಯಾಗನಾರ್ ಸರದಿ. ಆದರೆ ವ್ಯಾಗನಾರ್ ಬೆಂಕಿಗಾಹುತಿಯಾಗಲು ನಿಖರ ಕಾರಣವಿನ್ನು ತಿಳಿದುಬಂದಿಲ್ಲ.


Click it and Unblock the Notifications








