ಐದು ಪಟ್ಟು ಇನ್ಕ್ರಿಮೆಂಟಿಗೆ ಪಟ್ಟು ಹಿಡಿದ ಮಾರುತಿ ನೌಕರರು

ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ವೇತನ ಹೆಚ್ಚಿಸಬೇಕೆಂದು ಮಾರುತಿ ಸುಜುಕಿಯ ಮಾನೆಸರ್ ಘಟಕದ ನೌಕರರು ಬೇಡಿಕೆಯಿಟ್ಟಿದ್ದಾರೆ. ಮಾರುತಿ ಸುಜುಕಿ ಕಂಪನಿಯು ಪ್ರತಿಮೂರು ವರ್ಷಗಳಿಗೊಮ್ಮೆ ವೇತನ ಪರಿಷ್ಕರಿಸುತ್ತಿದೆ. ಇದೀಗ ಕಂಪನಿಯ ನೌಕರರ ಸಂಘವು ಐದು ಪಟ್ಟು ವೇತನ ಹೆಚ್ಚಿಸುವಂತೆ ಪಟ್ಟು ಹಿಡಿದಿದೆ.

ನೌಕರರ ಸಂಘವು 20 ಬೇಡಿಕೆಗಳನ್ನು ಸಲ್ಲಿಸಿದ ನಂತರ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಮತ್ತೆ ಹಗ್ಗಜಗ್ಗಾಟ ಶುರುವಾಗಿದೆ. ಮಾನೆಸರ್ ಘಟಕದಲ್ಲಿ ಮೂರು ಪ್ರತಿಭಟನೆಗಳು ನಡೆದ ನಂತರ ಅಪಾರ ನಷ್ಟಕ್ಕೆ ಕಂಪನಿಯು ಸಿಲುಕಿದೆ. ಹೀಗಾಗಿ ನೌಕರರ ವೇತನ ಹೆಚ್ಚಳ ಪ್ರಸ್ತಾಪದ ಕುರಿತು ಕಂಪನಿಯು ಯಾವ ತೀರ್ಮಾನ ಕೈಗೊಳ್ಳಲಿದೆ ಎನ್ನುವುದಿನ್ನೂ ಸ್ಪಷ್ಟವಾಗಿಲ್ಲ.

ಆದರೆ ಸರಕಾರದಿಂದ ನೌಕರರ ಸಂಘಕ್ಕೆ ಅಧಿಕೃತತೆ ದೊರಕಿದ ನಂತರ ನೌಕರರಲ್ಲಿ ಭರವಸೆ ಹೆಚ್ಚಿದೆ. ಹೀಗಾಗಿ ನೌಕರರ ಸಂಘವು ಮಾರುತಿ ಸುಜುಕಿ ಆಡಳಿತ ಮಂಡಳಿ ಜೊತೆ ವೇತನ ಹೆಚ್ಚಳದ ಕುರಿತು ಮಾತುಕತೆ ನಡೆಸುತ್ತಿದೆ.

ಮಾನೆಸರ್ ಘಟಕದಲ್ಲಿ ವೇತನ ಹೆಚ್ಚಳ ಸಂಬಂಧಿ ವರದಿಗಳಿಗೆ ಮಾರುತಿ ಸುಜುಕಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ ನೌಕರರು ವೇತನ ಹೆಚ್ಚಳ ಮಾತ್ರವಲ್ಲದೇ ರಜಾ ದಿನಗಳ ಹೆಚ್ಚಳ, ಭತ್ತೆ ಮತ್ತು ಇತರ ಸೌಲಭ್ಯಗಳನ್ನು ಹೆಚ್ಚಿಸುವಂತೆ ಬೇಡಿಕೆಯನ್ನು ಇಟ್ಟಿದ್ದಾರೆ. (ಕನ್ನಡ ಡ್ರೈವ್‌ಸ್ಪಾರ್ಕ್)

More from DriveSpark

Article Published On: Wednesday, April 25, 2012, 9:27 [IST]
English summary
Maruti Suzuki's workers at its Manesar plant have demanded increased wages for the next three years. Maruti Suzuki revises wages every three years and the newly created Maruti Suzuki Workers Union has demanded huge wage hikes to the tune of five times in some cases.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+