ಟಾಪ್ ಲೆಸ್ ಬೆತ್ತಲೆ ಸುಂದರಿ ಮಿನಿ ಕಹಾನಿ
ಅಂತಹ ಟಾಪ್ ಲೆಸ್ ಬೆತ್ತಲೆ ಸುಂದರಿ ಕಾರುಗಳಲ್ಲಿ ಥಟ್ ಅಂತ ನೆನಪಾಗುವುದು ಮಿನಿ ಕನ್ವರ್ಟೆಬಲ್. ಹೆಸರೇ ಹೇಳುವಂತೆ ಮಿನಿ ನೋಡಲು ಸಣ್ಣಕಾರಿನಂತೆ ಭಾಸವಾಗುತ್ತದೆ. ಆದ್ರೆ ನೀವು ಸ್ವಿಫ್ಟ್ ಅಥವಾ ಫಾಬಿಯಾದಲ್ಲಿ ಕುಳಿತವರಾಗಿದ್ದರೆ, ಮಿನಿಯಲ್ಲಿ ಕುಳಿತಾದ ಅದರ ವಿಶಾಲ ಸ್ಥಳಾಕಾಶದ ಅನುಭವವಾಗುತ್ತದೆ. ಛಾವಣಿಯಿಲ್ಲದ ಮಿನಿ ಕಾರಿಗೆ ಆಕಾಶವೇ ಹೆಡ್ ರೂಂ!
ಈ ಮಿನಿ ಕಾರಿನ 16 ಇಂಚಿನ ಅಲಾಯ್ ವೀಲುಗಳು ಊಟದ ತಟ್ಟೆಗಳಂತೆ ಕಾಣುತ್ತವೆ. ಕಾರಿನೊಳಗೆ ಐ ಡ್ರೈವ್ ತಂತ್ರಜ್ಞಾನವಿದ್ದು, ಸರಾಗವಾಗಿ ಪ್ರಯಾಣಿಸಲು ನೆರವಾಗುತ್ತದೆ. ಸ್ಟಿಯರಿಂಗ್ ವೀಲ್ ಆಸುಪಾಸಿನಲ್ಲಿ ಅನಲಾಗ್ ಟೆಕ್ನೊ ಮತ್ತು ಡಿಜಿಟಲ್ ಸ್ಪೀಡೊ ಮೀಟರ್ ಇದೆ. ಈ ಸುಂದರ ಕಾರಿನಲ್ಲಿ ಚರ್ಮದ ಹಾಸಿನ ಸೀಟುಗಳು ಅದ್ದೂರಿ ಸವಾರಿಗೆ ಸಹಕರಿಸುತ್ತದೆ.
ಹರ್ಮಾನ್ ಕಡೊನ್ ಸಿಸ್ಟಮ್ ಎಂಬ ಆಡಿಯೋ ಸಿಸ್ಟಮ್ ಎಗ್ಗಿಲ್ಲದ ಮ್ಯೂಸಿಕ್ ಮಸ್ತಿಗೆ ಸಾಥ್ ನೀಡುತ್ತದೆ. ಈ ಆಡಿಯೋ ಸಿಸ್ಟಮ್ ಅನನ್ಯ ಕ್ಲಾರಿಟಿ ಅಥವಾ ಸ್ಪಷ್ಟತೆಯ ಧ್ವನಿ ಹೊರಡಿಸುತ್ತದೆ. ಆರಡಿ ಉದ್ದದವರಿಗೆ ಮುಂಭಾಗದ ಸೀಟು ಓಕೆ. ಹಿಂದಿನ ಸೀಟುಗಳು ಮಕ್ಕಳಿಗೆ ಅಥವಾ ಸಣ್ಣ ದೇಹದವರಿಗೆ ಸಾಕಾಗಬಹುದು ಅಷ್ಟೇ!
ನಾವು ನೋಡಿದ ಕಾರು 1.6 ಲೀಟರಿನ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಆವೃತ್ತಿಯಾಗಿತ್ತು. ಇದು 1,598 ಸಿಸಿ ಎಂಜಿನ್. ಈ ಎಂಜಿನ್ 6 ಸಾವಿರ ಆವರ್ತನಕ್ಕೆ 122 ಅಶ್ವಶಕ್ತಿ ನೀಡುತ್ತದೆ. 4,250 ಆವರ್ತನಕ್ಕೆ 160 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಮಿನಿ ಕನ್ವರ್ಟೆಬಲ್ 6 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 191 ವೇಗದಲ್ಲಿ ಸಾಗಬಹುದಾಗಿದೆ. ಸೊನ್ನೆಯೊಂದ 100 ಕಿ.ಮೀ. ವೇಗವನ್ನು ಕೇವಲ 11.1 ಸೆಕೆಂಡಿನಲ್ಲಿ ಪಡೆಯಬಹುದಾಗಿದೆ. ಈ ಕಾರಿನ ತೂಕ 1635 ಕೆಜಿ ಇದೆ. ಮೈಲೇಜ್ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 11 ಕಿ.ಮೀ. ಆಸುಪಾಸಿನಲ್ಲಿದೆ.
ಮಿನಿ ಕಾರಲ್ಲಿ ಡ್ರೈವಿಂಗ್ ಮಾಡುವುದು ಫನ್ ಆದ ಅನುಭವ ನೀಡುತ್ತದೆ. ಮೊದಲ ನೋಟಕ್ಕೆ ಇದರ ಸ್ಟೈಲ್ ಇಷ್ಟವಾಗುತ್ತದೆ. ಆದರೆ ಮಿನಿ ಕೂಪರ್ ಕನ್ವರ್ಟೆಬಲ್ ದರ ಮಧ್ಯಮವರ್ಗದ ದೇಶದ ಕಾರು ಖರೀದಿದಾರರ ಕಿಸೆಗೆ ಸೂಕ್ತವಾಗಿಲ್ಲ. ಇದರ ದರ 29.99 ಲಕ್ಷ ರುಪಾಯಿ ಇದೆ.


Click it and Unblock the Notifications









